ನವದೆಹಲಿ: eSanjeevani OPD - ಇ-ಸಂಜೀವನಿ ಓಪಿಡಿ (eSanjeevani OPD) ಮೂಲಕ ಜನರು ತಮ್ಮ ಮನೆಯಿಂದಲೇ ಚಿಕಿತ್ಸೆ ಮಾಡಿಸಬಹುದಾಗಿದೆ. ಇದರ ಸಂಪೂರ್ಣ ಡೆಮೋ CGHS ಮುಖ್ಯಾಲಯದಿಂದ 3 ವೈದ್ಯರ ಪ್ಯಾನೆಲ್ ನೀಡಿದೆ. ಕೊರೊನಾ (Coronavirus) ಕಾಲದಲ್ಲಿ ಇ-ಸಂಜೀವನಿ OPD ಸೇವೆ ದೇಶದ ರೋಗಿಗಳ (Covid-19)ಪಾಲಿಗೆ ವರದಾನ ಎಂದು ಸಾಬೀತಾಗಿದೆ. ಈ ಸೇವೆಯನ್ನು ಬಳಸಿ ನಿತ್ಯ ಸಾವಿರಾರು ಜನರು ನುರಿತ ವೈದ್ಯರಿಂದ ಸಲಹೆಗಳನ್ನು ಪಡೆಯುತ್ತಿದ್ದಾರೆ.
ವಿಡಿಯೋ ಕಾಲ್ ಮಾಡುವ ಮೂಲಕ ವೈದ್ಯರ ಜೊತೆಗೆ ನೇರ ಸಂಪರ್ಕ
ವೀಡಿಯೊ ಕರೆ ಮಾಡುವ ಮೂಲಕ, ವೈದ್ಯರು ನಿಮ್ಮೊಂದಿಗೆ ನೇರವಾಗಿ ಸಂಪರ್ಕಿಸಿ, ಮಾತನಾಡುತ್ತಾರೆ, ನಿಮ್ಮ ಪರೀಕ್ಷಾ ವರದಿಯನ್ನು ನೋಡಿ, ಪ್ರಿಸ್ಕ್ರಿಪ್ಷನ್ ಅನ್ನು ಸಹ ಬರೆಯುತ್ತಾರೆ. ನೀವು ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನೂ ಕೂಡ ಸೂಚಿಸುತ್ತಾರೆ. ಈ ಎಲ್ಲಾ ಸೇವೆ ನಿಮಗೆ ಉಚಿತವಾಗಿ (eSanjeevani OPD Free Service) ಲಭಿಸುತ್ತದೆ. ಇ-ಸಂಜೀವನಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ನೀವೂ ಕೂಡ ನುರಿತ ವೈದ್ಯರನ್ನು ಸಂಪರ್ಕಿಸಬಹುದು.
ಇದಕ್ಕಾಗಿ ರಜಿಸ್ಟ್ರೇಶನ್ ತುಂಬಾ ಸುಲಭವಾಗಿದೆ (How To Register For eSanjeevani OPD)
ಓರ್ವ ವೈದ್ಯರು ಇನ್ನೊಬ್ಬ ತಜ್ಞ ವೈದ್ಯರೊಂದಿಗೆ ಅನಾರೋಗ್ಯದ ಬಗ್ಗೆ ಸಮಾಲೋಚನೆ ನಡೆಸಲು ಬಯಸಿದರೆ, ಅದಕ್ಕೂ ಪ್ರತ್ಯೇಕ ಸೌಲಭ್ಯವಿದೆ. ಇದರ ನೋಂದಣಿ ಪ್ರಕ್ರಿಯೆ ತುಂಬಾ ಸರಳವಾಗಿದೆ, ನೀವು ಪೋರ್ಟಲ್ (eSanjeevani Portal) ಅಥವಾ ಅಪ್ಲಿಕೇಶನ್‌ನಲ್ಲಿ (eSanjeevani App) ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಟೋಕನ್ ಸಂಖ್ಯೆಯನ್ನು ಪಡೆಯಬೇಕು ಮತ್ತು ಅದರ ನಂತರ ವೈದ್ಯರು ನಿಮ್ಮೊಂದಿಗೆ ವೀಡಿಯೊ ಕರೆ (how to book appointment on esanjeevani app) ಮಾಡುವ ಮೂಲಕ ಮಾತನಾಡುತ್ತಾರೆ. ನಿಮ್ಮ ಬಳಿ ಯಾವುದೇ ಪರೀಕ್ಷಾ ವರದಿ ಇದ್ದರೆ, ನೀವು ಅದನ್ನು ಸಹ ಅಪ್‌ಲೋಡ್ ಮಾಡಬಹುದು. ವೈದ್ಯರು ನಿಮ್ಮ ಪರೀಕ್ಷಾ ವರದಿಯನ್ನು ನೋಡಿ, ನಂತರ ರೋಗದ ಬಗ್ಗೆ ಸಲಹೆ ನೀಡುತ್ತಾರೆ.
ಇದನ್ನೂ ಓದಿ-
e-Sanjeevani OPD ಮೇಲೆ ದೇಶಾದ್ಯಂತ ಎಷ್ಟು ವೈದ್ಯರು ಕಾರ್ಯನಿರ್ವಹಿಸುತ್ತಾರೆ?
ನಿಮ್ಮ ಕನ್ಸಲ್ಟೆಶನ್ ಅವಧಿಯಲ್ಲಿ ಡಾಕ್ಟರ್ ಬರೆಯುವ ಪ್ರಿಸ್ಕ್ರಿಪ್ಶನ್ ನಿಮ್ಮ ಬಳಿ ತಲುಪುತ್ತದೆ. ಅದನ್ನು ನೀವು ಮೊಬೈಲ್ ನಲ್ಲಿಯೇ ಸಂಗ್ರಹಿಸಬಹುದು ಅಥವಾ ಪ್ರಿಂಟ್ ಕೂಡ ಪಡೆಯಬಹುದು. e-ಸಂಜೀವನಿ ಸೇವೆಯ ಅಡಿ ನಿತ್ಯ 370 ಕ್ಕೂ ಹೆಚ್ಚು OPDಗಳಿದ್ದು, 1600 ಕ್ಕೂ ಹೆಚ್ಚು ವೈದ್ಯರು OPD ರೋಗಿಗಳಿಗೆ ಸಲಹೆ ನೀಡುತ್ತಾರೆ. ವಾರದ ಏಳೂ ದಿನಗಳವರೆಗೆ ಲಭ್ಯವಿರುವ ಈ OPD ಪ್ಲಾಟ್ ಫಾರ್ಮ್ ಮೇಲೆ ದೇಶಾದ್ಯಂತ ಸುಮಾರು 18, 200 ವೈದ್ಯರಿದ್ದಾರೆ.
ಇದನ್ನೂ ಓದಿ-
eSanjeevani OPD ಮೇಲೆ ಇದುವರೆಗೆ 55 ಲಕ್ಷ 36 ಸಾವಿರಕ್ಕೂ ಹೆಚ್ಚು ಕನ್ಸಲ್ಟೆಶನ್ ನಡೆಸಲಾಗಿದೆ. ಇವುಗಳಲ್ಲಿ ಪೇಶಂಟ್ ಟು ಡಾಕ್ಟರ್ 32 ಲಕ್ಷ 36 ಸಾವಿರ ಹಾಗೂ 23 ಲಕ್ಷ ಡಾಕ್ಟರ್ ಟು ಡಾಕ್ಟರ್ ಕನ್ಸಲ್ಟೆಶನ್ ನಡೆಸಲಾಗಿದೆ.
ಮಧ್ಯಪ್ರದೇಶದಲ್ಲಿ ದಿನದ 24ಗಂಟೆಗಳ ಕಾಲ, ಗುಜರಾತ್, ಉತ್ತರಾಖಂಡ್, ಕೇರಳದಲ್ಲಿ 12 ಗಂಟೆ ಹಾಗೂ ಉಳೆದೆಲ್ಲ ಪ್ರದೇಶಗಳಲ್ಲಿ ಈ OPD ಬೆಳಗ್ಗೆ 9 ರಿಂದ 12 ಗಂಟೆಯ ವರೆಗೆ ಕಾರ್ಯನಿರ್ವಹಿಸುತ್ತವೆ. ತ್ರಿಪುರಾ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್ ನಿಕೊಬಾರ್ ಹಾಗೂ ಲಕ್ಷದ್ವೀಪಗಳಲ್ಲಿ ಈ ಸೌಕರ್ಯ ಲಭ್ಯವಿಲ್ಲ. CDAC ವಿನ್ಯಾಸಗೊಳಿಸಿರುವ ಈ ಸೇವೆಯನ್ನು ಆರೋಗ್ಯ ಸಚಿವಾಲಯ (Health Ministry) ಹಾಗೂ ರಾಜ್ಯಗಳಲ್ಲಿ ನ್ಯಾಷನಲ್ ಹೆಲ್ತ್ ಮಿಶನ್ (National Health Mission) ಮೂಲಕ ಯಶಸ್ವಿಗೊಳಿಸಲಾಗುತ್ತಿದೆ.
ಇದನ್ನೂ ಓದಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ