ಯಾವುದೇ ಕಾರಣಕ್ಕೂ ಈ ಐದು ಆಹಾರಗಳನ್ನು ಫ್ರಿಜ್ ನಲ್ಲಿಟ್ಟು ಬಳಿಕ ಬಿಸಿ ಮಾಡಿ ತಿನ್ನಬೇಡಿ..! ಕಾರಣ ತಿಳಿಯಿರಿ

ಭಾರತೀಯರು ಕಿಚನ್ ನಲ್ಲಿ  ಉಳಿದ ಯಾವ  ವಸ್ತುವನ್ನೂ ವೇಸ್ಟ್ ಮಾಡುವುದಿಲ್ಲ.  ಆಹಾರವನ್ನು ಫ್ರಿಜ್ ನಲ್ಲಿಟ್ಟು  ಮುಂದಿನ ದಿನ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ.

Written by - Ranjitha R K | Last Updated : Feb 3, 2021, 10:54 AM IST
  • ಭಾರತೀಯರು ಕಿಚನ್ ನಲ್ಲಿ ಉಳಿದ ಯಾವ ವಸ್ತುವನ್ನೂ ವೇಸ್ಟ್ ಮಾಡುವುದಿಲ್ಲ.
  • ಕೆಲವೊಂದು ಆಹಾರವನ್ನು ಹಳಸಿದ ಮೇಲೆ ಬಿಸಿಮಾಡಿ ತಿನ್ನಲೆ ಬಾರದು.
  • ಆ ಐದು ಆಹಾರಗಳು ಯಾವುದು? ಅದರಿಂದ ಉಂಟಾಗುವ ಸಮಸ್ಯೆಗಳು ಏನು?
ಯಾವುದೇ ಕಾರಣಕ್ಕೂ ಈ ಐದು ಆಹಾರಗಳನ್ನು ಫ್ರಿಜ್ ನಲ್ಲಿಟ್ಟು ಬಳಿಕ ಬಿಸಿ ಮಾಡಿ ತಿನ್ನಬೇಡಿ..! ಕಾರಣ ತಿಳಿಯಿರಿ title=
ಕೆಲವೊಂದು ಆಹಾರವನ್ನು ಹಳಸಿದ ಮೇಲೆ ಬಿಸಿಮಾಡಿ ತಿನ್ನಲೆ ಬಾರದು (file photo)

ಬೆಂಗಳೂರು: ಭಾರತೀಯರು ಕಿಚನ್ ನಲ್ಲಿ (Kitchen) ಉಳಿದ ಯಾವ  ವಸ್ತುವನ್ನೂ ವೇಸ್ಟ್ ಮಾಡುವುದಿಲ್ಲ.  ಆಹಾರವನ್ನು ಫ್ರಿಜ್ ನಲ್ಲಿಟ್ಟು (Fridge) ಮುಂದಿನ ದಿನ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಆಹಾರ ಫ್ರಿಜ್ ನಲ್ಲಿಟ್ಟರೆ  ಕೆಡುವುದಿಲ್ಲ ನಿಜ. ಅಂದ ಮಾತ್ರಕ್ಕೆ ಅದು ತಿನ್ನಲು ಸುರಕ್ಷಿತ ಎಂದು ಹೇಳುವಂತಿಲ್ಲ. ಸಾಧ್ಯವಾದಷ್ಟೂ ಫ್ರಿಜ್ ನಲ್ಲಿಟ್ಟು ತಿನ್ನುವುದನ್ನು ತ್ಯಜಿಸಿ. ಕೆಲವೊಂದು ಆಹಾರವನ್ನು ಹಳಸಿದ ಮೇಲೆ ಬಿಸಿಮಾಡಿ ತಿನ್ನಲೇ ಬಾರದು. ಆ ರೀತಿಯ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡು.  ಹಳಸಿದ ಮೇಲೆ ಬಿಸಿಮಾಡಿ ತಿನ್ನಲು ಯೋಗ್ಯವಲ್ಲದ ಐದು ಆಹಾರ ಪದಾರ್ಥಗಳ ಹೆಸರು ಮತ್ತು ಕಾರಣ ಹೇಳ್ತೀವಿ..ಓದಿ.    

1.ಅನ್ನ
ಅನ್ನ (Rice) ಉಳಿದ ಮೇಲೆ ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವಿದ್ದರೆ ಇಂದೇ ಬಿಡಿ. ಅನ್ನ ಹಳಸಿದ  ಮೇಲೆ ಅದರಲ್ಲಿ ಬ್ಯಾಸಿಲಸ್ ಸೆರಿಯಸ್ (Bacillus cereus) ಎಂಬ ಬ್ಯಾಕ್ಟಿರಿಯಾ ಸೃಷ್ಟಿಯಾಗುತ್ತದೆ. ಇದು ಒಂದು ನಿಶ್ಚಿತ ಅವಧಿಯ ಬಳಿಕ ಅನ್ನವನ್ನು ಕೆಡಿಸುವ ಪ್ರಕ್ರಿಯೆ ಶುರುಮಾಡುತ್ತದೆ. ನೀವು ಫ್ರಿಜ್ ನಲ್ಲಿಟ್ಟಅನ್ನ ಕೆಡುವುದಿಲ್ಲ ನಿಜ. ಆದರೆ, ಅದರಲ್ಲಿ ಬ್ಯಾಸಿಲಸ್ ಸೆರಿಯಸ್ ಸೃಷ್ಟಿಯಾಗಿರುತ್ತದೆ. ಫುಡ್ ಸ್ಟಾಂಡರ್ಡ್ ಏಜೆನ್ಸಿ ಪ್ರಕಾರ ಈ ರೀತಿಯ ಅನ್ನವನ್ನು ತಿಂದರೆ Food Poisoning ಉಂಟಾಗುತ್ತದೆ.    

ಇದನ್ನೂ ಓದಿ : ಎಚ್ಚರಿಕೆ..! ಪದೇ ಪದೇ ಬಾಯಾರುವುದು ಗಂಭೀರ ರೋಗದ ಲಕ್ಷಣವಾಗಿರಬಹುದು ..!

2.ಹಳಸಿದ ಅಲೂ:
ಅಲೂ ಗಡ್ಡೆ (Potato) ಪಲ್ಯ ಆಗಲಿ ಅಥವಾ ಬೇರೆ ಯಾವುದೇ ಅಲೂನಿಂದ ಮಾಡಿದ ಆಹಾರ ವಸ್ತುಗಳಾಗಿರಲಿ ಹಳಸಲು ಆದ ಮೇಲೆ ಅಥವಾ ಮತ್ತೊಮ್ಮೆ ಬಿಸಿ ಮಾಡಿ ತಿನ್ನಲೇ ಬಾರದು.  ಮತ್ತೊಮ್ಮೆ ಬಿಸಿ ಮಾಡಿದಾಗ ಅಲೂಗಡ್ಡೆಯಲ್ಲಿರುವ ಪೋಷಾಕಾಂಶಗಳು (Nutrients) ಖತಂ ಆಗುತ್ತದೆ. ಇದ ಪರಿಣಾಮ ನಮ್ಮ ಜೀರ್ಣಾಂಗವ್ಯೂಹದ (Digestive System) ಮೇಲಾಗುತ್ತದೆ.

3.ಹಳಸಲು ಮೊಟ್ಟೆ
ಅಮೆರಿಕದ ಆಹಾರ ಏಜೆನ್ಸಿ ಎಫ್ ಡಿಎ (FDA)  ಪ್ರಕಾರ ಯಾವುದೇ ಕಾರಣಕ್ಕೂ ಮೊಟ್ಟೆಯನ್ನು ಮತ್ತೊಮ್ಮೆ ಬಿಸಿ ಮಾಡಿ ತಿನ್ನಲೇ ಬಾರದು. ಮೊಟ್ಟೆ ಹಳಸಿದ ಮೇಲೆ ಅದರಲ್ಲಿಸಲ್ಮೊನಿಲ (Salmonella) ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ದೇಹದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ, ಮೊಟ್ಟೆ (Egg) ಅಥವಾ ಮೊಟ್ಟೆಯಿಂದ ಮಾಡಿರುವ ಯಾವುದೇ ಉತ್ಪನ್ನ ಫ್ರಿಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿ ಮೇಲೆ ತಿನ್ನಲೇ ಬಾರದು.

ಇದನ್ನೂ ಓದಿ : Premature Ageing : ಇನ್ನೂ ವಯಸ್ಸಿರುವಾಗಲೇ ವಯಸ್ಸಾಯಿತು ಅನ್ನಿಸ್ತಾ ಇದೆಯಾ..? ಖಂಡಿತಾ ಓದಿ

4.ಪಾಲಕ್ ಸೊಪ್ಪು
ಪಾಲಕ್ (Palak) ಸೊಪ್ಪನ್ನು ಯಾವುದೆ ಕಾರಣಕ್ಕೂ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಲೆ ಬಾರದು. ಯಾವತ್ತಿಗೂ ತಾಜಾ ಪಾಲಕ್ ಬಿಸಿ ಬಿಸಿ ತಿನ್ನಿ. ಬಳಸದೇ ಉಳಿದ ಪಾಲಕ್ ಪಲ್ಯವನ್ನು ಬಿಸಿ ಮಾಡಿ ತಿನ್ನಬಾರದು. ಬಿಸಿ ಮಾಡುವಾಗ ಅದರಲ್ಲಿರುವ ನೈಟ್ರೇಟ್ ಅಂಶ ಕೊನೆಗೊಳ್ಳುತ್ತದೆ. ಇದು ಮುಂದೆ ಕ್ಯಾನ್ಸರ್ ನಂತಹ (Cancer) ರೋಗಕ್ಕೆ ಮೂಲವಾಗಬಹುದು.

5.ಬೀಟ್ ರೂಟ್ 
ಹಳಸಿದ ಮೇಲೆ ಯಾವುದೇ ಕಾರಣಕ್ಕೂ ಬೀಟ್ ರೂಟನ್ನು (Beetroot)  ಬಿಸಿ ಮಾಡಿ ತಿನ್ನಲೇ ಬಾರದು. ಪಾಲಕ್ ಸೊಪ್ಪಿನಂತೆಯೇ, ಬೀಟ್ ರೂಟ್ ಬಿಸಿ ಮಾಡುವುದರಿಂದ ಅದರಲ್ಲಿನ ನೈಟ್ರೇಟ್ (Nitrate)  ಖತಂ ಆಗುತ್ತದೆ. ಮುಂದೆ ಆರೋಗ್ಯದಲ್ಲಿ ಸಮಸ್ಯೆ ತಂದೊಡ್ಡುತ್ತದೆ.

 

ಇದನ್ನೂ ಓದಿ : Ear pain Home Remedies: ಕಿವಿನೋವು ಜೀವ ಹಿಂಡುತ್ತಿದೆಯಾ..? ಇಲ್ಲಿದೆ ಸಿಂಪಲ್ ಮನಮದ್ದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News