ಬೆಂಗಳೂರು : ವಯಸ್ಸಾಗುವ ಮೊದಲೇ ನಿಮಗೆ ವಯಸ್ಸಾಗುತ್ತಿದೆ ಅಂತಾ ಅನಿಸ್ತಿದೆಯಾ..? 40 ವರ್ಷ ಮುಟ್ಟುವಾಗಲೇ ಮುಪ್ಪು ಬಂದೇ ಬಿಡ್ತಾ ಅಂತಾ ಅನ್ನಿಸುತ್ತಿದೆಯಾ..? ಮಾಂಸಖಂಡಗಳು ದಷ್ಟಪುಷ್ಟವಾಗಬೇಕಿರುವಾಗ ವೀಕ್ನೆಸ್ ಕಾಡುತ್ತಿದೆಯಾ. ಮೂಳೆಗಳು ದುರ್ಬಲವಾಗುತ್ತಿದೆ ಅಂನ್ನಿಸುತ್ತಿದೆಯಾ?. ಇದರ ಅರ್ಥ ವಯಸ್ಸಿರುವಾಗಲೇ ನಿಮಗೆ ವಯಸ್ಸಾಗುತ್ತಿದೆ ಎಂದು . ಅಂದರೆ ಅಕಾಲಿಕ ಮುಪ್ಪು, ಅಸಹಜ ವೃದ್ದಾಪ್ಯ. ಖಂಡಿತಾ ನೀವು ಎಚ್ಚರಗೊಳ್ಳಲೇ ಬೇಕು. ಇದೊಂದು ಕಾಯಿಲೆ. ಇದಕ್ಕೆ ಪ್ರಿಮೆಚ್ಯೂರ್ ಎಜಿಂಗ್ ಎಂದು ಹೇಳಲಾಗುತ್ತದೆ. ವೈದ್ಯರನ್ನು ನೋಡಲೇ ಬೇಕು. ಹಾಗಾದರೆ, ಪ್ರಿಮೇಚ್ಯೂರ್ ಎಜಿಂಗ್ ಲಕ್ಷಣಗಳೇನು..?
ಅಸಹಜ ವೃದ್ಧಾಪ್ಯದ ಲಕ್ಷಣಗಳನ್ನು ನೀವು ಗಮನಿಸಲೇ ಬೇಕು. ಆ ಲಕ್ಷಣಗಳು ನಿಮ್ಮಲ್ಲಿ ಕಾಣುತ್ತಿದ್ದರೆ ತಡಮಾಡಬೇಡಿ. ಹಾಗಾದರೆ, ಅಕಾಲಿಕ ಮುಪ್ಪಿನ ಆ ಲಕ್ಷಣಗಳು ಯಾವುದು ನೋಡೋಣ.
1. ನಡೆ ನಿಧಾನವಾಗುವುದು, ವಾಕಿಂಗ್ ಸ್ಪೀಡ್ (Walking )ಕಡಿಮೆಯಾಗುತ್ತದೆ. ಮುಪ್ಪಿನಲ್ಲಿ ಇದು ಸಹಜ. ಆದರೆ, 35 – 40 ವರ್ಷದ ಆಸುಪಾಸಿನಲ್ಲಿ ಈ ರೀತಿ ಆಗಬಾರದು. ಇದು ಅಸಹಜ ಮುಪ್ಪಿನ ಲಕ್ಷಣ
2. ಮೆಟ್ಟಿಲುಗಳನ್ನು ಹತ್ತುವಾಗ ತೊಂದರೆ. ವಯಸ್ಸಾದಾಗ ಮೂಳೆ ಮತ್ತು ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಆಗ ಮೆಟ್ಟಿಲು ಹತ್ತಲು ಸಮಸ್ಯೆಯಾಗುವುದು ಸಹಜ. ಆದರೆ, 40ಕ್ಕೆ ಮೆಟ್ಟಿಲು ಹತ್ತಲು ಆಗದೇ ಹೋದರೆ ಸಮಸ್ಯೆ ಇದೆ ಎಂದೇ ಅರ್ಥ.
4. 60 ದಾಟಿದ ಮೇಲೆ ಮರೆಗುಳಿತನ ಸಹಜ. ನೆನಪು (Memory) ತುಂಬಾ ಕಡಿಮೆಯಾಗುತ್ತದೆ. ಇದು ವಯಸ್ಸಾದಾಗ ಬರುವ ಸಾಮಾನ್ಯ ವಿದ್ಯಮಾನ. 65ರ ನಂತರ ಇದು ಸಹಜ. ಆದರೆ, 45 ಕ್ಕೆ ಇವೆಲ್ಲಾ ಬರಬಾರದು. ಬಂದರೆ ಅದು ರೋಗಲಕ್ಷಣ
5. ಕೀಲು ನೋವು ಹೆಚ್ಚಾಗುತ್ತದೆ. ಇವೆಲ್ಲಾ ಸಹಜ ಮುಪ್ಪಿನಲ್ಲಿ ಸಹಜ. ಇದಕ್ಕೆ ಅಸ್ಟೆಪೊರೊಸಿಸ್ (Osteoporosis) ಮತ್ತು ಅಸ್ಟೆರೋರ್ಥಟಿಸ್ (Osteoarthritis) ಇವೆಲ್ಲಾ ಅಸಹಜವಾಗಿ ಕಂಡು ಬಂದರೆ ಏನೋ ಎಲ್ಲೋ ಯಡವಟ್ಟಾಗಿದೆ ಎಂದರ್ಥ.
6. ವಯಸ್ಸಾಗುವಾಗ ಚರ್ಮದ ಮೇಲೆ ಕಪ್ಪು ಮಚ್ಚೆಗಳು (Spots) ಬೀಳತೊಡಗುತ್ತವೆ. ದೇಹದಲ್ಲಿ ಕೊಲೆಜೆನ್ (Collagen) ಉತ್ಪಾದನೆ ಕಡಿಮೆಯಾದಾಗ ಹೀಗೆಲ್ಲಾ ಆಗುತ್ತದೆ. ಇವೆಲ್ಲಾ 60ರ ನಂತರ ಆಗುವಂತಾದ್ದು. ಆದರೆ, 30 40ರ ವರ್ಷಕ್ಕೆ ಇವೆಲ್ಲಾ ಕಾಣಿಸಿಕೊಳ್ಳಬಾರದು.
7 ಚರ್ಮ ಸುಕ್ಕುಗಟ್ಟುವುದು (Wrinkles), ಕೂದಲು ಉದುರುವುದು ಕೂಡಾ ಅಕಾಲಿಕ ಮುಪ್ಪಿನ ಲಕ್ಷಣ. ಕಾಲೆಜೆನ್ ಎಂಬ ಪ್ರೊಟಿನ್ (Protein)ಕಡಿಮೆಯಾದಾಗ ಇವೆಲ್ಲಾ ಆಗುತ್ತದೆ. ಮುಪ್ಪಿನಲ್ಲಿ ಕಾಲೆಜಿನ್ ಕಡಿಮೆಯಾಗುತ್ತದೆ.
ಇದನ್ನೂ ಓದಿ : Ear pain Home Remedies: ಕಿವಿನೋವು ಜೀವ ಹಿಂಡುತ್ತಿದೆಯಾ..? ಇಲ್ಲಿದೆ ಸಿಂಪಲ್ ಮನಮದ್ದು.
ಹಾಗಾದರೆ, ಇದಕ್ಕೇನು ಪರಿಹಾರ..? ಇಲ್ಲಿದೆ ನೋಡಿ.
-ಸುಕ್ಕುಗಳ ಸಮಸ್ಯೆಯನ್ನು ತಪ್ಪಿಸಲು, ಮನೆಯಿಂದ ಹೊರಡುವ ಮೊದಲು ಸನ್‌ಸ್ಕ್ರೀನ್ ಬಳಸಿ.
- ಕೂದಲು ಉದುರುತ್ತಿದ್ದರೆ (Hair fall), ಅಥವಾ ಕೂದಲು ತೆಳ್ಳಗಾಗುತ್ತಿದ್ದರೆ, ಸಾಕಷ್ಟು ಪೌಷ್ಟಿಕಾಂಶ ತಿನ್ನಿ. ಶಾಂಪೂ ಮತ್ತು ಕಂಡೀಷನರನ್ನು ಬದಲಾಯಿಸಿ..
-ಏಜೀಂಗ್ ಸೂಚಿಸುವ ಚರ್ಮದ ಕಲೆಗಳ ಸಮಸ್ಯೆ ಇದ್ದರೆ, ಚರ್ಮರೋಗ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆ ಪಡೆಯಿರಿ.
- ಮೆಟ್ಟಿಲು/ಏಣಿ ಏರಲು ನಿಮಗೆ ಕಷ್ಟವಾಗುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡಿ.
ಇದನ್ನೂ ಓದಿ : Good News! Hair Fall ಗೆ ಕಾರಣವಾಗುವ ಹಾರ್ಮೋನ್ ತಡೆಯಲು ಬಂತು ಔಷಧಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.