ಮಕ್ಕಳಿಗೆ ಈ 5 ಆಹಾರಗಳನ್ನು ತಿನ್ನಿಸಿ, ಮೆದುಳು ಕಂಪ್ಯೂಟರಿಗಿಂತ ಶಾರ್ಪ್ ಆಗುತ್ತೆ..!

ಇದು ಕಾಂಪಿಟಿಟಿವ್ ಯುಗ.  ಇಲ್ಲಿ ಸ್ಪರ್ಧೆ ಹೇಗಿದೆಯೆಂದರೆ ಪ್ರತಿಯೊಬ್ಬ ತಂದೆ ತಾಯಿ ತನ್ನ ಮಕ್ಕಳು ಕಂಪ್ಯೂಟರ್ (Computer) ರೀತಿ ಶಾರ್ಪ್ ಇರಬೇಕು ಎಂದು ಭಾವಿಸುತ್ತಾರೆ.

Written by - Ranjitha R K | Last Updated : Feb 4, 2021, 11:57 AM IST
  • ಮಕ್ಕಳ ಮೆದುಳಿನ ಶಕ್ತಿ ಹೆಚ್ಷಿಸುವುದು ಹೇಗೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತದೆ
  • ನೆನಪಿನ ಶಕ್ತಿ, ಬುದ್ದಿವಂತಿಕೆ ಹೆಚ್ಚಲು ಮಕ್ಕಳು ಏನು ತಿನ್ನಬೇಕು.. ನೋಡೋಣ.
  • ಸಂತುಲಿತ ಆಹಾರದಿಂದ ನಿಮ್ಮ ಮಗುವಿನ ಮೆದುಳು ಶಕ್ತಿಶಾಲಿಯಾಗುತ್ತದೆ.
ಮಕ್ಕಳಿಗೆ ಈ 5 ಆಹಾರಗಳನ್ನು ತಿನ್ನಿಸಿ, ಮೆದುಳು ಕಂಪ್ಯೂಟರಿಗಿಂತ ಶಾರ್ಪ್ ಆಗುತ್ತೆ..! title=
ಸಂತುಲಿತ ಆಹಾರದಿಂದ ನಿಮ್ಮ ಮಗುವಿನ ಮೆದುಳು ಶಕ್ತಿಶಾಲಿಯಾಗುತ್ತದೆ (file photo)

ಬೆಂಗಳೂರು : ಇದು ಕಾಂಪಿಟಿಟಿವ್ ಯುಗ.  ಇಲ್ಲಿ ಸ್ಪರ್ಧೆ ಹೇಗಿದೆಯೆಂದರೆ ಪ್ರತಿಯೊಬ್ಬ ತಂದೆ ತಾಯಿ ತನ್ನ ಮಕ್ಕಳು ಕಂಪ್ಯೂಟರ್ (Computer) ರೀತಿ ಶಾರ್ಪ್ ಇರಬೇಕು ಎಂದು ಭಾವಿಸುತ್ತಾರೆ. ಓದು, ಬರಹ, ಬುದ್ದಿವಂತಿಕೆ, ನೆನಪು, ಗಣಿತ ಎಲ್ಲವೂ ಶಾರ್ಪ್ ಆಗಿರಬೇಕು ಎಂದು ಯೋಚಿಸುತ್ತಾರೆ. ಇದು ಅನಿವಾರ್ಯ ಕೂಡಾ. ಜೀವನದ ರೇಸಿನಲ್ಲಿ ಗೆಲ್ಲಬೇಕಾದರೆ ಇದು ಅನಿವಾರ್ಯ. 

ಮಕ್ಕಳ ಮೆದುಳಿನ ಶಕ್ತಿ ಹೆಚ್ಚಿಸುವುದು ಹೇಗೆ..?
ಮಕ್ಕಳ ಮೆದುಳಿನ ಶಕ್ತಿ ಹೆಚ್ಷಿಸುವುದು ಹೇಗೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತದೆ. ಸಂತುಲಿತ ಆಹಾರದಿಂದ ನಿಮ್ಮ ಮಗುವಿನ ಮೆದುಳು ಶಕ್ತಿಶಾಲಿಯಾಗುತ್ತದೆ.  ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ  ಸಂತುಲಿತ ಆಹಾರಅಗತ್ಯ. ಹಾಗಾದರೆ, ನಿಮ್ಮ ಮಕ್ಕಳು (Kids)  ಏನನ್ನು ತಿಂದರೆ ಮಾನಸಿಕವಾಗಿ ಸಶಕ್ತರಾಗುತ್ತಾರೆ ಅಂದರೆ ಬುದ್ದಿವಂತಿಕೆ ಹೆಚ್ಚಲು ಮಕ್ಕಳು ಏನು ತಿನ್ನಬೇಕು.. ನೋಡೋಣ. 

ಇದನ್ನೂ ಓದಿ: Face fat ; ಯಂಗ್ ಆಗಿ ಕಾಣಬೇಕಾ..? ನಿಮ್ಮ ಮುದ್ದಿನ ಮುಖಕ್ಕೂ ಸ್ವಲ್ಪ ಟೈಂ ಕೊಡಿ..! ಫಿಟ್ ಇಡಿ

1. ದಿನಕ್ಕೊಂದು ಮೊಟ್ಟೆ(Eggs):
ಮೊಟ್ಟೆಯಲ್ಲಿ (Egg) ವಿಟಮಿನ್ (Vitamin), ಕ್ಯಾಲ್ಸಿಯಂ (Calcium)ಮತ್ತು ಪ್ರೊಟೀನ್ (Protein) ಹೇರಳ ಪ್ರಮಾಣದಲ್ಲಿರುತ್ತದೆ. ಮೆದುಳಿನ ವಿಕಸನಕ್ಕೆ ಇದು ಅತ್ಯವಶ್ಯಕ. ಇದರಿಂದ ಬೆಳೆಯುವ ಮಕ್ಕಳ ಮೆದುಳಿನ ಕೋಶ ವಿಕಸನಗೊಳ್ಳುತ್ತದೆ.  ಬೆಳವಣಿಗೆಗೆ ಸಾಕಷ್ಟು ವಿಟಮಿನ್ಸ್ ಸಿಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. 

2. ಊಟದ ಜೊತೆ ಮೊಸರು :
ಸಂಶೋಧನೆಯ ಪ್ರಕಾರ ಮಕ್ಕಳ ಮೆದುಳಿನ ವಿಕಸನಕ್ಕೆ ಹಾಲಿಗಿಂತಲೂ ಮೊಸರು (Curd) ತುಂಬಾ ಒಳ್ಳೆಯದು.  ಮೊಸರು ತಿನ್ನುವುದರಿಂದ ಮೆದುಳಿನ ಕೋಶಗಳು (Brain Cells) ಫ್ಲೆಕ್ಸಿಬಲ್ (Flexible) ಆಗುತ್ತದೆ. ಪ್ಲೆಕ್ಸಿಬಲ್ ಕೋಶಗಳು ಬಾಹ್ಯ ಸಂದೇಶ ಪಡೆಯಲು ಮತ್ತು ಅದರ ಪ್ರಕಾರ ಕಾರ್ಯ ನಿರ್ವಹಿಸಲು ತುಂಬಾ ಸಶಕ್ತವಾಗಿರುತ್ತದೆ. 

ಇದನ್ನೂ ಓದಿ: ಪುರುಷರಿಗೆ ತುಂಬಾ ಲಾಭಕಾರಿಯಾಗಿದೆ ಲವಂಗ, ಹಲವು ರೀತಿಯ ಕ್ಯಾನ್ಸರ್ ನಿಂದ ರಕ್ಷಣೆ ಕೂಡ ನೀಡುತ್ತದೆ

3. ಮೀನು :
ಮೀನು (fish)ತಿಂದರೆ ಮೆದುಳು ಮೀನಿನಂತೆ ಚುರುಕಾಗುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ  ಇಲ್ಲದಿಲ್ಲ. ಮೀನಿನಲ್ಲಿ ವಿಟಮಿನ್ ಡಿ (Vitamin D)  ಮತ್ತು ಒಮೆಗಾ 3 (Omega 3) ಅಂಶಗಳು ಬೇಕಾದಷ್ಟು ಸಿಗುತ್ತದೆ.  ಬೆಳೆಯುವ ಮಕ್ಕಳ ಮೆದುಳಿಗೆ  ಇವು ಬೇಕೇ ಬೇಕು.  ಮೀನು ತಿಂದರೆ ಮೆದುಳು ಚುರುಕಾಗುತ್ತದೆ. 

4. ಚೆರಿ ಹಣ್ಣು ಬೇಕಾದಷ್ಟು ತಿನ್ನಿ:
ಮಾರುಕಟ್ಟೆಯಲ್ಲಿ ವಿವಿಧ ಪ್ರಕಾರದ  ಚೆರಿ ಹಣ್ಣುಗಳು ಬೇಕಾದಷ್ಟು ಸಿಗುತ್ತವೆ. ಸ್ಟ್ರಾಬೆರಿ (Straw Berry), ಬ್ಲೂ ಬೆರಿ (Blue Berry), ದೇಸಿಯ ಬೆರಿ ಹಣ್ಣುಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಿನ್ನಿ.  ಇದರಲ್ಲಿ ಅಂಟೊಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುತ್ತದೆ. ಮಕ್ಕಳ ಮೆದುಳಿನ ವಿಕಸನಕ್ಕೆ (Brain Development) ಇದು ಅನಿವಾರ್ಯ.

ಇದನ್ನೂ ಓದಿಯಾವುದೇ ಕಾರಣಕ್ಕೂ ಈ ಐದು ಆಹಾರಗಳನ್ನು ಫ್ರಿಜ್ ನಲ್ಲಿಟ್ಟು ಬಳಿಕ ಬಿಸಿ ಮಾಡಿ ತಿನ್ನಬೇಡಿ..! ಕಾರಣ ತಿಳಿಯಿರಿ

5. ಡ್ರೈಪ್ರುಟ್ಸ್  (Dry fruits) : 
ಹೌದು.. ಮಕ್ಕಳ ಮೆದುಳು ಚುರುಕಾಗಬೇಕಾದರೆ ಸಾಕಷ್ಟು ಡ್ರೈ ಪ್ರುಟ್ಸ್ ತಿನ್ನಿಸಿ. ಡ್ರೈಫ್ರುಟ್ಸ್ ಸ್ವಲ್ಪ ದುಬಾರಿ. ಆದರೂ ಮೆದುಳಿಗೆ ಸಾಕಷ್ಟು ಸಹಕಾರಿ. ಗೋಡಂಬಿ (Cashew) ಒಣದ್ರಾಕ್ಷಿ, ಬದಾಮ್, ಪಿಸ್ತಾ (Pista), ಅಕ್ರೋಟ್ ಸೇರಿದಂತೆ ಎಲ್ಲಾ ರೀತಿಯ ಡ್ರೈಫ್ರುಟ್ಸ್ ಮೆದುಳಿಗೆ ಒಳ್ಳೆಯದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News