ನವದೆಹಲಿ : Jackfruit Seeds For Diabetic Patients : ಹಲಸಿನ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಈ ಹಣ್ಣು ರುಚಿ ಮಾತ್ರ ಅಲ್ಲ ಅದು ಆರೋಗ್ಯಕ್ಕೂ ತುಂಬಾ (Health benefits of Jackfruit Seeds) ಪ್ರಯೋಜನಕಾರಿಯಾಗಿದೆ. ಹಲಸಿನ ಹಣ್ಣು ಎಲ್ಲರು ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ ಅದರ ಬೀಜವನ್ನು ಎಸೆಯುತ್ತಾರೆ. ಇತರ ತರಕಾರಿಗೆ ಹೋಲಿಸಿದರೆ ಹಲಸಿನ ಹಣ್ಣಿನ ಬೀಜಗಳಲ್ಲಿನ ಪ್ರೋಟೀನ್‌ನ ಪ್ರಮಾಣವು ಅಧಿಕವಾಗಿರುತ್ತದೆ. ಹಲಸಿನ ಹಣ್ಣಿನಲ್ಲಿ ಪ್ರೋಟೀನ್ ಮಾತ್ರವಲ್ಲದೆ ವಿಟಮಿನ್ ಎ, ಸಿ, ಥಯಾಮಿನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ಕಬ್ಬಿಣ, ನಿಯಾಸಿನ್ ಮತ್ತು ಸತುವುಗಳಂತಹ ಅನೇಕ ಪೌಷ್ಟಿಕ ಅಂಶಗಳು ಹೇರಳವಾಗಿ ಕಂಡುಬರುತ್ತವೆ. ಇದು ಮಾತ್ರವಲ್ಲ, ನಾರಿನ ಅಂಶ ಕೂಡಾ ಕಂಡುಬರುತ್ತವೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಮಧುಮೇಹದ ಸಮಸ್ಯೆಯನ್ನು ನಿಯಂತ್ರಿಸಬಹುದು.
ಹಲಸಿನ ಹಣ್ಣಿನ ಬೀಜಗಳ ಪ್ರಯೋಜನಗಳು:
1. ಮಧುಮೇಹಕ್ಕೆ: ಹಲಸಿನ ಹಣ್ಣಿನ ಬೀಜಗಳನ್ನು (Jackfruit Seeds) ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level) ನಿಯಂತ್ರಿಸುತ್ತದೆ. ಇದನ್ನು ಪಲ್ಯ ಮಾಡಿ ತಿನ್ನಬಹುದು, ಹಾಗೆಯೇ ಬೇಯಿಸಿ ಕೂಡಾ ತಿನ್ನಬಹುದು.
ಇದನ್ನೂ ಓದಿ : Mango Peel For Healthy Skin: ಟ್ಯಾನಿಂಗ್ , ಬ್ಲಾಕ್ ಹೆಡ್ಸ್ ಸಮಸ್ಯೆಯಿಂದ ಮುಕ್ತಿ ನೀಡಲಿದೆ ಮಾವಿನಹಣ್ಣಿನ ಸಿಪ್ಪೆ
2. ರೋಗನಿರೋಧಕ ಶಕ್ತಿಗಾಗಿ: ಹಲಸಿನ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ (Immunity) ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಸಿ ಕಂಡುಬರುತ್ತದೆ ಮತ್ತು ವಿಟಮಿನ್-ಸಿ ಪರಿಣಾಮಕಾರಿ ಆಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
3. ಜೀರ್ಣಕ್ರಿಯೆಗೆ: ಜೀರ್ಣಕ್ರಿಯೆಯ ಸಮಸ್ಯೆಯಿಂದ (Digestion problem) ನೀವು ತೊಂದರೆಗೀಡಾಗಿದ್ದರೆ, ಈ ಹಣ್ಣನ್ನು ತಿನ್ನಬೇಕು. ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕುವ ಮೂಲಕ ಮಲಬದ್ಧತೆಯ (Constipation) ಸಮಸ್ಯೆಯನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ : Advantages of Curd : ಆರೋಗ್ಯಕ್ಕೆ ಬಹುಉಪಯೋಗಿ 'ಮೊಸರು' : ಇಲ್ಲಿದೆ ಅದರ ಪ್ರಯೋಜನಗಳು
4. ತೂಕ ನಷ್ಟಕ್ಕೆ: ಹಲಸಿನ ಹಣ್ಣು ರೆಸ್ವೆರಾಟ್ರೊಲ್ ಎಂಬ ಆಂಟಿ-ಆಕ್ಸಿಡೆಂಟ್‌ನ ಉತ್ತಮ ಮೂಲವಾಗಿದೆ, ಇದರಲ್ಲಿರುವ ಅಂಟಿ ಇನ್ ಫ್ಲಮೆಟರಿ ಗುಣಲಕ್ಷಣಗಳು ಬೊಜ್ಜು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಈ ಹಣ್ಣಿನ ಸೇವನೆಯಿಂದ ತೂಕವನ್ನು ಕಡಿಮೆ (Weight loss) ಮಾಡಬಹುದು.
5. ರಕ್ತದೊತ್ತಡಕ್ಕಾಗಿ: ಹಲಸಿನ ಹಣ್ಣಿನ ಬೀಜಗಳಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು (Blood presure) ನಿಯಂತ್ರಿಸುವುದಲ್ಲದೆ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ