ನವದೆಹಲಿ : Black Chickpeas Water Benefits : ತುಂಬಾ ಜನ ಬೆಳಗ್ಗೆ ಎದ್ದು ನೆನೆಸಿದ ಕಡಲೆ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆನಸಿದ ಕಡಲೆಯಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಆದರೆ, ನಿಮಗೆ ಖಂಡಿತಾ ಗೊತ್ತಿರಲಿಕ್ಕಿಲ್ಲ. ಏನೆಂದರೆ, ಕಡಲೆ ಅಷ್ಟೇ ಅಲ್ಲ, ಕಡಲೆ ನೆನೆಹಾಕಿದ ನೀರಿನಲ್ಲೂ ಸಾಕಷ್ಟು ಪೋಷಕಾಂಶಗಳು ಸೇರಿಕೊಂಡಿರುತ್ತದೆ. ಆ ನೀರು ಕೂಡಾ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ (Benefits of Black Chickpeas Water). ಆದರ ಪ್ರಯೋಜನಗಳನ್ನೊಮ್ಮೆ ನೋಡಿದರೆ, ನೀವು ಇನ್ನು ಮುಂದೆ ಖಂಡಿತಾ ಕಡಲೆ ನೆನೆಸಿದ ನೀರನ್ನು ಚೆಲ್ಲವುದಿಲ್ಲ. ಬದಲಿಗೆ ಅದನ್ನು ಕುಡಿಯುವ ಮನಸ್ಸು ಮಾಡುತ್ತೀರಿ. ಕಡಲೆ ನೆನೆಸಿದ ನೀರಿಗೆ ಉಪ್ಪು, ಲಿಂಬೆ ರಸ ಸೇರಿಸಿ ಕುಡಿದರೆ, ಅದರ ಸ್ವಾದ ಕೂಡಾ ಹೆಚ್ಚಾಗುತ್ತದೆ. ಇದೀಗ ಆರೋಗ್ಯದ ಮೇಲೆ ಕಡಲೆ ನೆನೆಸಿದ ನೀರಿನ ಪ್ರಯೋಜನಗಳೇನು ನೋಡೋಣ. ಆದರ ಪ್ರಯೋಜನಗಳನ್ನು ಪಟ್ಟಿ ಮಾಡೋಣ.
1. ತೂಕ ಇಳಿಸಲು ಸಹಕಾರಿ : ಕಡಲೆ ನೆನೆಸಿದ ನೀರು ಕುಡಿದರೆ, ತುಂಬಾ ಹೊತ್ತು ಹಸಿವೆ ಆಗುವುದಿಲ್ಲ. ಹಾಗಾಗಿ, ತೂಕ ಇಳಿಸಿಕೊಳ್ಳಲು (weight loss) ಇದೊಂದು ಉತ್ತಮ ಆಯ್ಕೆ ಎಂದು ಹೇಳಲಾಗಿದೆ.
ಇದನ್ನೂ ಓದಿ : fitness tips to stay healthy: ಸದಾ ಆರೋಗ್ಯದಿಂದಿರಲು ಈ ವಿಧಾನಗಳನ್ನು ಅನುಸರಿಸಿ
2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಕರೋನಾ (Coronavirus) ಮಾಹಾಮಾರಿ ಹರಡುವ ಈ ಸಮಯದಲ್ಲಿ ಇಮ್ಯೂನಿಟಿ ಹೆಚ್ಚಿಸುವ ವಿಧಾನಗಳನ್ನು ಜನರು ತುಂಬಾ ಹುಡುಕುತ್ತಾರೆ. ಕಡಲೆ ನೆನೆಸಿದ ನೀರು (Soaked channa) ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ, ತಲೆನೋವು ಕೂಡಾ ಕಡಿಮೆ ಆಗುತ್ತದೆ.
3, ಜೀರ್ಣಕ್ರಿಯೆ ಸರಾಗವಾಗುತ್ತದೆ: ಕಡಲೆ ನೆನೆಸಿದ ನೀರು ಕುಡಿದರೆ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ. ಹೊಟ್ಟೆಯಲ್ಲಿ ಆಹಾರ ಚೆನ್ನಾಗಿ ಕರಗುತ್ತದೆ. ಅಂದರೆ ಜೀರ್ಣಕ್ರಿಯೆ (Good for digestion) ಸರಾಗವಾಗುತ್ತದೆ. ಕೆಲವು ಜನ ಕಡಲೆ ನೀರಿಗೆ ಲಿಂಬೆ ಹಣ್ಣು ಮತ್ತು ಉಪ್ಪು ಸೇರಿಸಿ ಕುಡಿಯುತ್ತಾರೆ.
4. ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ: ಕಡಲೆ ನೀರು ಕುಡಿದರೆ ಚರ್ಮದ (Skin care) ಕಾಯಿಲೆ ಗುಣವಾಗುತ್ತದೆ. ಇದು ರಕ್ತವನ್ನೂ ಸ್ವಚ್ಛಗೊಳಿಸುತ್ತದೆ. ಚರ್ಮವನ್ನು ಪ್ರಾಕೃತಿಕವಾಗಿ ಚೆನ್ನಾಗಿರಿಸುತ್ತದೆ.
ಇದನ್ನೂ ಓದಿ : Benefits of Honey in Monsoon: ಮಳೆಗಾಲದಲ್ಲಿ ಈ ಸಮಯದಲ್ಲಿ ಜೇನುತುಪ್ಪ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ