ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಶುಂಠಿ ಎಣ್ಣೆ, ಒಮ್ಮೆ ಟ್ರೈ ಮಾಡಿ ನೋಡಿ!

Ginger Oil Health Benefits: ಕೆಲ ಎಣ್ಣೆಗಳು ಮತ್ತು ಅವುಗಳಿಂದ ಸಿಗುವ ಮಸಾಜ್ ಮೂಲಕ ಕೀಲು ನೋವು ನಿವಾರಿಸಬಹುದು. ಅಂತಹ ಎಣ್ಣೆಗಳಲ್ಲಿ ಶುಂಠಿ ಎಣ್ಣೆಯೂ ಕೂಡ ಒಂದು. ಈ ಎಣ್ಣೆಯನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ  

Written by - Nitin Tabib | Last Updated : Sep 17, 2023, 11:12 PM IST
  • ಕೀಲು ನೋವಿನಲ್ಲಿ ಶುಂಠಿ ಎಣ್ಣೆಯ ಬಳಕೆ ಬಳಕೆ ತುಂಬಾ ಪಯೋಜನಕಾರಿಯಾಗಿದೆ. ಈ ಎಣ್ಣೆಯಿಂದ ನೋವು ಇರುವ ಜಾಗದಲ್ಲಿ ನೀವು ಮಸಾಜ್ ಮಾಡಬಹುದು.
  • ಇದಲ್ಲದೆ, ನೀವು ಶುಂಠಿ ಚಹಾವನ್ನು ಕುಡಿಯಬಹುದು. ನೀವು ಶುಂಠಿ ನೀರನ್ನು ಸಹ ಕುಡಿಯಬಹುದು. ಶುಂಠಿಯಲ್ಲಿ ಕಂಡುಬರುವ ಉರಿಯೂತದ ಸಂಯುಕ್ತವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ನೀವು ಇದನ್ನು ನಿಯಮಿತವಾಗಿ ಬಳಸಿದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುವಿರಿ.
ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಶುಂಠಿ ಎಣ್ಣೆ, ಒಮ್ಮೆ ಟ್ರೈ ಮಾಡಿ ನೋಡಿ! title=

Ginger Oil Health Benefits- ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನದಲ್ಲಿ ಕೀಲು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇನ್ನೊಂದೆಡೆ, ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಇದನ್ನು ತಪ್ಪಿಸಲು, ಜನರಿಗೆ ಕೆಲ ತೈಲಗಳು ಸಾಕಷ್ಟು ನೆರವಾಗುತ್ತವೆ. ಇಂತಹುದೇ ತೈಲಗಳಲ್ಲಿ  ಶುಂಠಿ ಎಣ್ಣೆಯೂ ಕೂಡ ಒಂದು. ಶುಂಠಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಅದರ ಎಣ್ಣೆಗೂ ಕೂಡ ಇದು ಅನ್ವಯಿಸುತ್ತದೆ. ಶುಂಠಿ ಎಣ್ಣೆಯಿಂದಲೂ ನೀವು ಸಾಕಷ್ಟು ಪ್ರಯೋಜನ ಪಡೆಯುತ್ತೀರಿ. ಹಾಗಾದರೆ ಶುಂಠಿ ಎಣ್ಣೆಯು ಕೀಲು ನೋವನ್ನು ಹೇಗೆ ಗುಣಪಡಿಸುತ್ತದೆ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶುಂಠಿಯನ್ನು ಹೇಗೆ ಬಳಸಬೇಕು?
ಕೀಲು ನೋವಿನಲ್ಲಿ ಶುಂಠಿ ಎಣ್ಣೆಯ ಬಳಕೆ ಬಳಕೆ ತುಂಬಾ ಪಯೋಜನಕಾರಿಯಾಗಿದೆ. ಈ ಎಣ್ಣೆಯಿಂದ ನೋವು ಇರುವ ಜಾಗದಲ್ಲಿ ನೀವು ಮಸಾಜ್ ಮಾಡಬಹುದು. ಇದಲ್ಲದೆ, ನೀವು ಶುಂಠಿ ಚಹಾವನ್ನು ಕುಡಿಯಬಹುದು. ನೀವು ಶುಂಠಿ ನೀರನ್ನು ಸಹ ಕುಡಿಯಬಹುದು. ಶುಂಠಿಯಲ್ಲಿ ಕಂಡುಬರುವ ಉರಿಯೂತದ ಸಂಯುಕ್ತವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಇದನ್ನು ನಿಯಮಿತವಾಗಿ ಬಳಸಿದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುವಿರಿ.

ಶುಂಠಿ ಎಣ್ಣೆಯನ್ನು ಹೇಗೆ ತಯಾರಿಸಬೇಕು?
ಶುಂಠಿ ಎಣ್ಣೆಯನ್ನು ತಯಾರಿಸಲು, ಮೊದಲನೆಯದಾಗಿ, ಶುಂಠಿಯನ್ನು ಚೆನ್ನಾಗಿ ತುರಿ ಮಾಡಿ. ಇದರ ನಂತರ, ತುರಿದ ಶುಂಠಿಯಲ್ಲಿ ಒಂದು ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಬಳಿಕ ಈ ಪೇಸ್ಟ್ ಅನ್ನು ಕುದಿಸಿದ ನಂತರ, ಪೇಸ್ಟ್ ಅನ್ನು ತಣ್ಣಗಾಗಲು ಬಿಡಿ ಮತ್ತು ತಣ್ಣಗಾದ ಗಾಜಿನ ಬಾಟಲಿಯಲ್ಲಿ ಅದನ್ನು ತುಂಬಿಸಿ.

ಇದನ್ನೂ ಓದಿ-ಹೊಟ್ಟೆಯ ಬೊಜ್ಜು ಹೆಚ್ಚಾದ ಕಾರಣ ಸೊಂಟ ದಪ್ಪ ಕಾಣಿಸುತ್ತಿದೆಯಾ, ಈ ದೇಸಿ ಉಪಾಯ ಕೇವಲ 15 ದಿನಗಳಲ್ಲಿ ಸೊಂಟಕ್ಕೆ ನಾರ್ಮಲ್ ಲುಕ್ ನೀಡುತ್ತೆ!

ಈ ಎರಡು ರೋಗಗಳ ನಿವಾರಣೆಗೂ ಕೂಡ ಶುಂಠಿ ಎಣ್ಣೆ ಪ್ರಯೋಜನಕಾರಿಯಾಗಿದೆ
ಶುಂಠಿ ಎಣ್ಣೆಯಿಂದ ಹೃದಯದ ಅಪಾಯವೂ ಕಡಿಮೆಯಾಗುತ್ತದೆ. ಹೌದು, ಇದರ ಸೇವನೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ತನ್ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಂದರೆ ಹೃದಯವನ್ನು ಸದೃಢವಾಗಿಡಲು ಶುಂಠಿಯನ್ನು ಸೇವಿಸಬೇಕು. ಇದರ ಸೇವನೆಯಿಂದ ಒಂದಲ್ಲ ಹಲವಾರು ದೊಡ್ಡ ಪ್ರಯೋಜನಗಳನ್ನು ನೀವು ಪಡೆಯಬಹುದು. ಹೀಗಾಗಿ ಇಂದೇ ಇದನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ. ಏಕೆಂದರೆ ಇದರಿಂದ ನೀವು ಅಪಾರವಾದ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ಇದನ್ನೂ ಓದಿ-ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಸ್ಪೆಷಲ್ ಸ್ಪ್ರೌಟ್ಸ್ ದೋಸೆ ನಿಮ್ಮ ಬೆಳಗಿನ ಉಪಹಾರದಲ್ಲಿರಲಿ!

(ಹಕ್ಕುತ್ಯಾಗ:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News