ಸುಖ ಸಂಸಾರದ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು!

ಸಂಶೋಧನೆಯ ಪ್ರಕಾರ, ವಿಶೇಷ ವಂಶವಾಹಿಗಳಲ್ಲಿ ವ್ಯತ್ಯಾಸವು ಆಕ್ಸಿಟೋಸಿನೊಂದಿಗೆ ಸಂಬಂಧ ಹೊಂದಿದೆ ಮತ್ತು ಇದು ಯಶಸ್ವಿ ವೈವಾಹಿಕ ಜೀವನದ ಮೇಲೆ  ಪರಿಣಾಮ ಬೀರುತ್ತದೆ.

Last Updated : Feb 12, 2019, 12:16 PM IST
ಸುಖ ಸಂಸಾರದ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು! title=
Representational Image

ನ್ಯೂಯಾರ್ಕ್: ನಿಮ್ಮ ಸುಖ ಸಂಸಾರ (ಯಶಸ್ವೀ ವೈವಾಹಿಕ ಜೀವನ)ದಲ್ಲಿ ಜೀನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ತಿಳಿದಿದೆಯೇ? ಹೌದು, ಇತ್ತೀಚಿನ ಸಂಶೋಧನೆಯೊಂದರಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಹಿಂದಿನ ಸಂಶೋಧನೆಯಲ್ಲಿ, ಯಶಸ್ವಿ ವೈವಾಹಿಕ ಜೀವನವು ಆನುವಂಶಿಕ ಅಂಶಗಳಿಂದ ಭಾಗಶಃ ಪ್ರಭಾವಿತವಾಗಿರುತ್ತದೆ ಮತ್ತು ಆಕ್ಸಿಟೋಸಿನ್ ಸಾಮಾಜಿಕ ಬೆಂಬಲದಲ್ಲಿ ಸಹಾಯಕವಾಗಿದೆಯೆಂಬುದರ ಬಗ್ಗೆ ತಿಳಿಸಲಾಗಿದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ, ನಿರ್ದಿಷ್ಟ ವಂಶವಾಹಿಗಳಲ್ಲಿ ವ್ಯತ್ಯಾಸವು ಆಕ್ಸಿಟೊಸಿನ್ನ ವಿಧಾನದೊಂದಿಗೆ ಸಂಬಂಧ ಹೊಂದಿದೆ ಮತ್ತು ಒಟ್ಟಾರೆ ಯಶಸ್ವೀ ವೈವಾಹಿಕ ಜೀವನದ ಮೇಲೆ ಇದು ಪರಿಣಾಮ ಬೀರುತ್ತದೆ. ಸಂಗಾತಿ ನಡುವಿನ ಸಹಕಾರಕ್ಕಾಗಿ ಈ ಜೀನ್‌ಗಳು ಬಹಳ ಮುಖ್ಯವಾಗಿವೆ ಎನ್ನಲಾಗಿದೆ.

ಈ ಸಂಶೋಧನೆಯಲ್ಲಿ, ವಿವಿಧ ಜೀನೋಟೈಪ್-ಆಕ್ಸಿಟೋನ್ ರಿಸೆಪ್ಟರ್ ವಂಶವಾಹಿಗಳ (OXTR) ಸಂಭಾವ್ಯ ಜೀನ್ ಸಂಯೋಜನೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಇದು ಸಂಗಾತಿಗಳು ಪರಸ್ಪರ ಹೇಗೆ ಸಹಯೋಗದಿಂದಿರುತ್ತಾರೆ ಎಂಬುದನ್ನು ವಿವರಿಸುತ್ತದೆ. ಆಕ್ಸಿಟೋಸಿನ್ನ ನಿಯಂತ್ರಣ ಮತ್ತು ಬಿಡುಗಡೆ ಯಶಸ್ವಿ ವೈವಾಹಿಕ ಜೀವನದ ಪ್ರಮುಖ ನಿರ್ಣಾಯಕ ಅಂಶವಾಗಿದೆ ಎಂಬುದನ್ನು ಸಂಶೋಧನೆ ಕಂಡುಹಿಡಿದಿದೆ. 

ಅಮೆರಿಕಾದ ಬಿಂಗ್ಹ್ಯಾಮ್ಟನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ರಿಚರ್ಡ್ ಮಾಟ್ಸನ್, "ಜೀನ್‌ಗಳು ಯಶಸ್ವಿ ವೈವಾಹಿಕ ಜೀವನಕ್ಕೆ ಕಾರಣವಾಗಿದೆ, ಏಕೆಂದರೆ ಜೀನ್ ವ್ಯಕ್ತಿಗೆ ಸಂಬಂಧಿಸಿದ್ದು, ವ್ಯಕ್ತಿಯ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುವ ಗುಣಲಕ್ಷಣಗಳು" ಎಂದು ಹೇಳಿದರು.

ಜೀನ್‌ ಎಂದರೇನು?
ಜೀನ್‌ನಮೂನೆಯು (ಜೀನೋಟೈಪ್) ಜೀವಿಯೊಂದರ ಅನುವಂಶಿಕ ಸಂಯೋಜನೆ ಮತ್ತು ಇದು ಜೀವಿಯ ಭ್ರೂಣಾವಸ್ಥೆಯಿಂದ ವಯಸ್ಕರವರೆಗಿನ ಎಲ್ಲ ಹಂತಗಳಲ್ಲಿನ ಅನುವಂಶಿಕ ಸಾಧ್ಯತೆ ಮತ್ತು ಮಿತಿಗಳನ್ನು ನಿರ್ಣಯಿಸುತ್ತದೆ. ಜೀನ್‌ನಮೂನೆಯು ಜೀವಿಯ ವಾಸ್ತದದ ರೂಪ ಮತ್ತು ವರ್ತನೆಯನ್ನು (ಸ್ಥೂಲಾರ್ಥದಲ್ಲಿ ವ್ಯಕ್ತನಮೂನೆ ಅಥವಾ ಫೀನೊಟೈಪ್) ನಿರ್ಣಯಿಸುವ ಮೂರು ಅಂಶಗಳಲ್ಲಿ ಒಂದು. 

Trending News