ಸೋಶಿಯಲ್ ಮೀಡಿಯಾ ಹೆಚ್ಚು ಬಳಸುವ ಹುಡುಗಿಯರಲ್ಲಿ ಖಿನ್ನತೆ ಹೆಚ್ಚು!

ಪ್ರತಿ ಐದು ಹದಿಹರೆಯದವರಲ್ಲಿ ಇಬ್ಬರು ದಿನಕ್ಕೆ ಮೂರು ಗಂಟೆಗಳಿಗೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮಕ್ಕಾಗಿ ಬಳಸುತ್ತಾರೆ.

Updated: Jan 10, 2019 , 03:12 PM IST
ಸೋಶಿಯಲ್ ಮೀಡಿಯಾ ಹೆಚ್ಚು ಬಳಸುವ ಹುಡುಗಿಯರಲ್ಲಿ ಖಿನ್ನತೆ ಹೆಚ್ಚು!
File Image

ಲಂಡನ್: ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಮಯ ಕಳೆಯುವ ಹದಿಹರೆಯದವರಲ್ಲಿ ಹುಡುಗರಿಗೆ ಹೋಲಿಸಿದರೆ ಹುಡುಗಿಯರಿಗೆ ಅನಾನುಕೂಲತೆ ಉಂಟಾಗುತ್ತಿದೆ ಬುದನ್ನು ಹೊಸ ಅಧ್ಯಯನವೊಂದು ಕಂಡು ಹಿಡಿದಿದೆ. 

ಸಾಮಾಜಿಕ ಮಾಧ್ಯಮ ಮತ್ತು ಖಿನ್ನತೆ ಲಕ್ಷಣಗಳ ನಡುವಿನ ಸಂಬಂಧದ ಬಗ್ಗೆ ಅಧ್ಯಯನ ನಡೆಸಲಾಗಿದೆ. ಯುನಿವರ್ಸಿಟಿ ಆಫ್ ಲಂಡನ್ (ಯುಸಿಎಲ್) ಸಂಶೋಧಕರು ಸುಮಾರು 11,000 ಯುವಕರಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ ಮತ್ತು 14 ವರ್ಷ ವಯಸ್ಸಿನ ಹುಡುಗಿಯರು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸುತ್ತಾರೆ ಎಂದು ಕಂಡುಹಿಡಿದಿದ್ದಾರೆ. ಇವುಗಳಲ್ಲಿ, ಪ್ರತಿ ಐದು ಹದಿಹರೆಯದವರಲ್ಲಿ ಇಬ್ಬರು ದಿನಕ್ಕೆ ಮೂರು ಗಂಟೆಗಳಿಗೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮಕ್ಕಾಗಿ ಬಳಸುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಅದೇ ಸಮಯದಲ್ಲಿ, 10 ಪ್ರತಿಶತ ಹುಡುಗರಿಗೆ ಹೋಲಿಸಿದರೆ ಸಾಮಾಜಿಕ ಮಾಧ್ಯಮವನ್ನು ಬಳಸದೆ ಇರುವ ನಾಲ್ಕು ಪ್ರತಿಶತ ಹುಡುಗಿಯರನ್ನು ಮಾತ್ರ ಪತ್ತೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆಯ 12% ಗಿಂತ ಕಡಿಮೆ (ದಿನಕ್ಕೆ ಐದು ಅಥವಾ ಹೆಚ್ಚಿನ ಗಂಟೆಗಳಿಗಿಂತಲೂ ಹೆಚ್ಚು) ಬಳಸುತ್ತಿರುವ 38% ರಷ್ಟು ಹುಡುಗಿಯರಲ್ಲಿ ತೀವ್ರತರವಾದ ಖಿನ್ನತೆಯ ರೋಗಲಕ್ಷಣಗಳು ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

"ಸಾಮಾಜಿಕ ಮಾಧ್ಯಮ ಮತ್ತು ಬಾಲಕಿಯರ ಖಿನ್ನತೆಯ ರೋಗಲಕ್ಷಣಗಳ ನಡುವಿನ ಸಂಬಂಧವು ಹುಡುಗರಿಗಿಂತ ಪ್ರಬಲವಾಗಿರುವುದು ಕಂಡುಬಂದಿದೆ" ಎಂದು ಯುಕೆಎಲ್ನ ಪ್ರಾಧ್ಯಾಪಕ ವೆನ್ನೆ ಕೆಲ್ಲಿ ಹೇಳಿದ್ದಾರೆ. ಈ ಅಧ್ಯಯನವು ಜರ್ನಲ್ ಆಫ್ ಎಕ್ಲಿಕಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ.