ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಪಾಲಕ್ ಸೊಪ್ಪು ಸಿದ್ಧೌಷಧ

ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ. 

Last Updated : Apr 22, 2018, 07:24 PM IST
ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಪಾಲಕ್ ಸೊಪ್ಪು ಸಿದ್ಧೌಷಧ title=

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ ಪಾಲಾಕ್ ಸೊಪ್ಪು ಅತಿ ಹೆಚ್ಚು ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ.

ಆಂಗ್ಲ ಭಾಷೆಯಲ್ಲಿ Spinach ಎಂದು ಕರೆಯಲ್ಪಡುವ ಪಾಲಾಕ್ ಸೊಪ್ಪಿನಲ್ಲಿ ಪ್ರೋಲೇಟ್, ಕ್ಯಾರೋಟಿನೈಡ್, ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ಮೊಡವೆ ಸಮಸ್ಯೆ, ದೃಷ್ಟಿ ಹಿನತೆ, ಅಧಿಕ ರಕ್ತದೊತ್ತದ ಸಮಸ್ಯೆಗಳಿಗೆ ರಾಮಬಾಣ ಎಂದೇ ಹೇಳಬಹುದು. ಹಾಗಿದ್ದರೆ ಪಾಲಕ್ ಸೊಪ್ಪಿನ ಉಪಯೋಗಳೇನು ಎಂಬುದನ್ನು ತಿಳಿಯೋಣ.

ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯವರ್ಧಕ ಗುಣಗಳು

* ಕೂದಲಿನ ಬೆಳವಣಿಗೆಗೆ ಪಾಲಾಕ್ ಸೊಪ್ಪು ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಕೂದಲು ಉದುರುವುದನ್ನು ತಡೆದು, ನೈಸರ್ಗಿಕ ಕಾಂತಿ ನೀಡುತ್ತದೆ. 
* ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ. 
* ನರ ದೌರ್ಬಲ್ಯವಿದ್ದವರು ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. 
* ಪಾಲಾಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ. ಏಕೆಂದರೆ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಶಕ್ತಿ ಪಾಲಾಕ್ ಸೊಪ್ಪಿನಲ್ಲಿದೆ. 
* ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪಾಲಾಕ್ ಸೊಪ್ಪನ್ನು ಹೆಚ್ಚು ಸೇವಿಸಿ. ಇದರಲ್ಲಿರುವ “ಕ್ಯಾರೋಟಿನೈಡ್” ಅಂಶ ದೇಹದಲ್ಲಿರುವ ಕೊಲೆಸ್ಟ್ರಾಲನ್ನ ಕರಗಿಸಿ, ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
* ದಿನನಿತ್ಯ ಪಾಲಾಕ್ ಸೊಪ್ಪಿನ ರಸ ಸೇವಿಸುವುದರಿಂದ ರಕ್ತಹಿನತೆಯ ಸಮಸ್ಯೆ ನಿವಾರಣೆಯಾಗುತ್ತದೆ.
* ಮಕ್ಕಳಲ್ಲಿ ಅಥವಾ ವೃದ್ಧರಲ್ಲಿ ನೆನಪಿನ ಶಕ್ತಿ ಸಮಸ್ಯೆಯಿದ್ದರೆ ಪಾಲಾಕ್ ಸೊಪ್ಪು ಸೇವಿಸುವುದರಿಂದ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ. 
* ಸಂಧಿವಾತದ ಸಂಸ್ಯೆಯಿದ್ದವರೂ ಕೂಡ ಪಾಲಾಕ್ ಸೊಪ್ಪು ಸೇವಿಸಬಹುದು.
* ಪಾಲಾಕ್ ಸೊಪ್ಪಿನಲ್ಲಿ ಹೆಚ್ಚು ನಾರಿನಂಶ ಹಾಗೂ ನೀರಿನಂಶ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದಲ್ಲದೆ, ಜೀರ್ಣಶಕ್ತಿಗೆ ಸಹಕರಿಸುತ್ತದೆ. 

ಹಾಗಿದ್ದರೆ ಇನ್ನೇಕೆ ತಡ. ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಪಾಲಾಕ್ ಸೊಪ್ಪನ್ನು ಅಳವಡಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ. 

Trending News