Health Tips: ಬೇಸಿಗೆಯಲ್ಲಿ ಹಿಪ್ಪು ನೇರಳೆ ಸೇವನೆ ಮಹಿಳೆಯರ ಸಮಸ್ಯೆಗೆ ರಾಮಬಾಣ ಉಪಾಯ

Mulberry Benefits: ಬೇಸಿಗೆ ಕಾಲದಲ್ಲಿ ಕಂಡುಬರುವ ಮತ್ತೊಂದು ಹಣ್ಣು ಎಂದರೆ ಅದು ಹಿಪ್ಪು ನೇರಳೆ. ಇದರ ಸೇವನೆ ಶರೀರಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಒಂದು ವೇಳೆ ಮಹಿಳೆಯರು ಈ ಹಣ್ಣನ್ನು ಸೇವಿಸಿದರೆ ಅವರ ಹಲವು ಸಮಸ್ಯೆಗಳು ದೂರಾಗುತ್ತದೆ.  

Written by - Nitin Tabib | Last Updated : May 27, 2022, 02:07 PM IST
  • ಬೇಸಿಗೆ ಕಾಲದಲ್ಲಿ ಕಂಡುಬರುವ ಮತ್ತೊಂದು ಹಣ್ಣು ಎಂದರೆ ಅದು ಹಿಪ್ಪು ನೇರಳೆ.
  • ಇದರ ಸೇವನೆ ಶರೀರಕ್ಕೆ ಹಲವು ಲಾಭಗಳನ್ನು ನೀಡುತ್ತದೆ.
  • ಒಂದು ವೇಳೆ ಮಹಿಳೆಯರು ಈ ಹಣ್ಣನ್ನು ಸೇವಿಸಿದರೆ ಅವರ ಹಲವು ಸಮಸ್ಯೆಗಳು ದೂರಾಗುತ್ತದೆ.
Health Tips: ಬೇಸಿಗೆಯಲ್ಲಿ ಹಿಪ್ಪು ನೇರಳೆ ಸೇವನೆ ಮಹಿಳೆಯರ ಸಮಸ್ಯೆಗೆ ರಾಮಬಾಣ ಉಪಾಯ title=
Mulberry Health Benefits

Health Benefits Of Mulberry: ಹಿಪ್ಪುನೇರಳೆ ಅಥವಾ ಮಲ್ಬೇರಿ  ಬೇಸಿಗೆಯಲ್ಲಿ ಕಂಡುಬರುವ ಒಂದು ಹಣ್ಣಾಗಿದೆ, ರುಚಿಯಲ್ಲಿ ಇದು ಹುಳಿ ಮತ್ತು ಸಿಹಿಯಾಗಿರುತ್ತದೆ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭಿಸುತ್ತವೆ. ಮಲ್ಬೆರಿಯನ್ನು ಮೊದಲು ಚೀನಾದಲ್ಲಿ ಬೆಳೆಸಲಾಗಿದೆ. ಆದರೆ ನಂತರದ ದಿನಗಳಲ್ಲಿ ಇದನ್ನು ಪ್ರಪಂಚದಾದ್ಯಂತ ಬೆಳೆಸಲಾಗುತ್ತದೆ. ಇದು ಕಪ್ಪು, ನೀಲಿ ಅಥವಾ ಕೆಂಪು ಮುಂತಾದ ಹಲವು ಬಣ್ಣಗಳಲ್ಲಿ ಕಂಡುಬರುತ್ತದೆ. ಹಿಪ್ಪುನೇರಳೆ ತಿನ್ನಲು ರುಚಿಕರ ಮಾತ್ರವಲ್ಲ, ಇದು ತುಂಬಾ ಪೌಷ್ಟಿಕವಾಗಿದೆ, ಇದು ದೇಹಕ್ಕೆ ಲಾಭ ನೀಡುವ ಹಲವು  ಜೀವಸತ್ವಗಳು, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿಗಳನ್ನು ಒಳಗೊಂಡಿದೆ. ಆದರೆ ಈ ಹಣ್ಣು ಮಹಿಳೆಯರಿಗೆ ವರದಾನಕ್ಕಿಂತ ಕಡಿಮೆಯಿಲ್ಲ ಎಂದರೆ ತಪ್ಪಾಗಲಾರದು, ಹೀಗಿರುವಾಗ ಮಹಿಳೆಯರು ಹಿಪ್ಪುನೇರಳೆ ತಿನ್ನುವುದರಿಂದ ಏನೇನು ಲಾಭಗಳನ್ನು ಪಡೆಯಬಹುದು ತಿಳಿದುಕೊಳ್ಳೋಣ ಬನ್ನಿ.

ಮಲ್ಬೆರಿ ತಿನ್ನುವುದರಿಂದ ಮಹಿಳೆಯರಿಗೆ ಪ್ರಯೋಜನಗಳು
ಕಬ್ಬಿಣಾಂಶದಿಂದ ಸಮೃದ್ಧವಾಗಿದೆ

ಸಾಮಾನ್ಯವಾಗಿ ಮಹಿಳೆಯರು ಕಬ್ಬಿಣದ ಕೊರತೆಯನ್ನು ಎದುರಿಸುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ, ಅವರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾರೆ, ಅದರಲ್ಲೂ ಹೆಚ್ಚಾಗಿ ಈ ಸಮಸ್ಯೆಯು ಗರ್ಭಾವಸ್ಥೆಯಲ್ಲಿ ಅಥವಾ ನಂತರ ಹೆಚ್ಚು ಸಂಭವಿಸುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ಹಿಪ್ಪುನೇರಳೆ ಸೇವನೆಯು ಪ್ರಯೋಜನಕಾರಿಯಾಗಿದೆ ಏಕೆಂದರೆ ಹಿಪ್ಪುನೇರಳೆಯಲ್ಲಿ ಕಬ್ಬಿಣದ ಪ್ರಮಾಣವು ಅಧಿಕವಾಗಿರುತ್ತದೆ. ಜೊತೆಗೆ, ವಿಟಮಿನ್ಗಳು ಅದರಲ್ಲಿಯೂ ಕಂಡುಬರುತ್ತವೆ, ಇದು ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. 

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
30 ವರ್ಷ ವಯಸ್ಸಿನ ನಂತರ, ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ಮಲ್ಬೆರಿ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಮೂಳೆಗಳು ಮತ್ತು ಕೀಲುಗಳ ನೋವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳ ಉತ್ತಮ ಆಗರವಾಗಿದೆ, ಇದು ಮೂಳೆ ಮತ್ತು ಸ್ನಾಯು ನೋವನ್ನು ಗುಣಪಡಿಸುತ್ತದೆ ಮತ್ತು ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ-High Cholesterol Food: ಈ ವಸ್ತುಗಳು ಇದ್ದಕ್ಕಿದ್ದಂತೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು

ತೂಕ ಇಳಿಕೆಗೆ ರಾಮಬಾಣ ಉಪಾಯ
ಅನೇಕ ಮಹಿಳೆಯರು ತಮ್ಮ ತೂಕದ ಬಗ್ಗೆ  ಸಾಕಷ್ಟು ಕಾಳಜಿವಹಿಸುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ, ಅವರು ತೂಕವನ್ನು ಇಳಿಸಿಕೊಳ್ಳಲು ವ್ಯಾಯಾಮ, ಡಯಟ್ ಇತ್ಯಾದಿಗಳನ್ನು ಸರಿಯಾಗಿಟ್ಟುಕೊಳ್ಳಲು ಕ್ರಮಗಳನ್ನು ಅನುಸರಿಸುತ್ತಲೇ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮಲ್ಬೆರಿ ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ತೂಕವನ್ನು ಇಳಿಕೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ, ಇದು ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಫೈಬರ್ನಿಂದಾಗಿ, ಅದರ ಸೇವನೆಯ ನಂತರ ದೀರ್ಘಕಾಲದವರೆಗೆ ಹಸಿವಿನ ಕಡುಬಯಕೆ ಉಂಟಾಗುವುದಿಲ್ಲ.

ಇದನ್ನೂ ಓದಿ-Leaves for diabetes : ಈ ಎರಡು ಮರಗಳ ಎಲೆಗಳನ್ನು ತಿನ್ನುವುದರಿಂದ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್

(Disclaimer-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News