ಕಿಡ್ನಿ ಸ್ಟೋನ್ ಇರುವವರು ಈ 5 ವಸ್ತುಗಳಿಂದ ದೂರವಿರಿ, ಇಲ್ಲವಾದರೆ ಹೆಚ್ಚುವುದು ಸಮಸ್ಯೆ

Avoid These Foods During Kidney Stone:ಮೂತ್ರಪಿಂಡವು ನಮ್ಮ ದೇಹದ ಅತ್ಯಂತ ಪ್ರಮುಖ ಭಾಗವಾಗಿದೆ. ಅದರ ಮುಖ್ಯ ಕಾರ್ಯವೆಂದರೆ ರಕ್ತವನ್ನು ಫಿಲ್ಟರ್ ಮಾಡುವುದು. ಈ ಪ್ರಕ್ರಿಯೆಯಲ್ಲಿ  ಕ್ಯಾಲ್ಸಿಯಂ, ಸೋಡಿಯಂ ಮತ್ತು ಅನೇಕ ರೀತಿಯ ಖನಿಜಗಳ ಕಣಗಳು ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತವೆ.

Written by - Ranjitha R K | Last Updated : Sep 5, 2022, 03:58 PM IST
  • ಭಾರತದಲ್ಲಿ ದಿನೇ ದಿನೇ ಮೂತ್ರಪಿಂಡದ ಕಲ್ಲಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
  • ಮೂತ್ರಪಿಂಡವು ನಮ್ಮ ದೇಹದ ಅತ್ಯಂತ ಪ್ರಮುಖ ಭಾಗವಾಗಿದೆ.
  • ಕಿಡ್ನಿ ಸ್ಟೋನ್ ಇದ್ದರೆ ಈ ವಸ್ತುಗಳನ್ನು ಸೇವಿಸಬೇಡಿ
ಕಿಡ್ನಿ ಸ್ಟೋನ್ ಇರುವವರು ಈ 5 ವಸ್ತುಗಳಿಂದ ದೂರವಿರಿ, ಇಲ್ಲವಾದರೆ  ಹೆಚ್ಚುವುದು ಸಮಸ್ಯೆ  title=
Avoid These Foods During Kidney Stone (file photo)

Avoid These Foods During Kidney Stone : ಭಾರತದಲ್ಲಿ ದಿನೇ ದಿನೇ ಮೂತ್ರಪಿಂಡದ ಕಲ್ಲಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ತುತ್ತಾಗುತ್ತಿದ್ದಾರೆ. ಮೂತ್ರಪಿಂಡವು ನಮ್ಮ ದೇಹದ ಅತ್ಯಂತ ಪ್ರಮುಖ ಭಾಗವಾಗಿದೆ. ಅದರ ಮುಖ್ಯ ಕಾರ್ಯವೆಂದರೆ ರಕ್ತವನ್ನು ಫಿಲ್ಟರ್ ಮಾಡುವುದು. ಈ ಪ್ರಕ್ರಿಯೆಯಲ್ಲಿ  ಕ್ಯಾಲ್ಸಿಯಂ, ಸೋಡಿಯಂ ಮತ್ತು ಅನೇಕ ರೀತಿಯ ಖನಿಜಗಳ ಕಣಗಳು ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತವೆ. ಅಲ್ಲಿ ಈ ವಸ್ತುಗಳ ಪ್ರಮಾಣವು ಹೆಚ್ಚಾಗಿ, ಕಲ್ಲಿನ ಆಕಾರವನ್ನು ಪಡೆದುಕೊಳ್ಳುತ್ತದೆ. ಮೂತ್ರಪಿಂಡದ ಕಲ್ಲುಗಳ  ಸಮಸ್ಯೆ ಎದುರಿಸುವವರು ತಾವು ಸೇವಿಸುವ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಅಪಾಯ ಹೆಚ್ಚಾಗಬಹುದು.

ಕಿಡ್ನಿ ಸ್ಟೋನ್ ಇದ್ದರೆ ಈ ವಸ್ತುಗಳನ್ನು ಸೇವಿಸಬೇಡಿ :
1.ವಿಟಮಿನ್ ಸಿ ಆಧಾರಿತ ಆಹಾರಗಳು :
ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ವಿಟಮಿನ್ ಸಿ ಹೇರಳವಾಗಿರುವ ಆಹಾರದಿಂದ ದೂರವಿರಬೇಕು. ಈ ಕಾರಣದಿಂದಾಗಿ, ಕಲ್ಲು ಹೆಚ್ಚು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ನಿಂಬೆ, ಪಾಲಕ್, ಕಿತ್ತಳೆ, ಕಿವಿ ಮತ್ತು ಪೇರಳೆ ಹಣ್ಣು ಮುಂತಾದ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸುವುದು ಉತ್ತಮ.

ಇದನ್ನೂ ಓದಿ : ತೂಕ ನಷ್ಟಕ್ಕೆ ಆಪಲ್ ಸೈಡರ್ ವಿನೆಗರ್ ಉತ್ತಮವೇ- ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

2. ತಂಪು ಪಾನೀಯಗಳು ಮತ್ತು ಚಹಾ-ಕಾಫಿ :
ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇದ್ದರೆ , ಸಾಮಾನ್ಯವಾಗಿ ನಿರ್ಜಲೀಕರಣದ ಸಮಸ್ಯೆ ಕೂಡಾ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೆಫೀನ್ ದೇಹಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಆದ್ದರಿಂದ, ತಂಪು ಪಾನೀಯಗಳು ಮತ್ತು ಚಹಾ-ಕಾಫಿಯಿಂದ ಸಾಧ್ಯವಾದಷ್ಟು ದೂರವಿರಬೇಕು. 

3. ಉಪ್ಪು :
ಮೂತ್ರಪಿಂಡದ ಕಲ್ಲುಗಳ ದೂರುಗಳನ್ನು ಹೊಂದಿರುವ ಜನರು ಉಪ್ಪು ಮತ್ತು ಉಪ್ಪಿನಂಶದ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಅವುಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ. ಇದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ.

ಇದನ್ನೂ ಓದಿ : Health Tips: ತುಪ್ಪ ಅಥವಾ ಎಣ್ಣೆ! ಏನು ತಿಂದರೆ ಆರೋಗ್ಯಕ್ಕೆ ಉತ್ತಮ?

4. ಮಾಂಸಾಹಾರಿ ಆಹಾರಗಳು :
ಕಿಡ್ನಿ ಸ್ಟೋನ್ ರೋಗಿಗಳಿಗೆ ಮಾಂಸ, ಮೀನು ಮತ್ತು ಮೊಟ್ಟೆ ಒಳ್ಳೇಯದಲ್ಲ. ಏಕೆಂದರೆ ಅವುಗಳಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ. ಈ ಪೋಷಕಾಂಶವು ದೇಹಕ್ಕೆ ಎಷ್ಟೇ ಮುಖ್ಯವಾದುದಾದರೂ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

 

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News