Almonds Benefits : ದೇಹ ತೂಕ ಇಳಿಸಿಕೊಳ್ಳಲು ಬಾದಾಮಿ ಸೇವನೆ ಎಷ್ಟು ಪರಿಣಾಮಕಾರಿ? ಇಲ್ಲಿದೆ ನೋಡಿ ಮಾಹಿತಿ 

ಈ ಬಾದಾಮಿಯಲ್ಲಿ ಮೆಗ್ನೀಸಿಯಮ್, ಕಾಪರ್, ವಿಟಮಿನ್ ಇ, ಫೈಬರ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿದೆ.

Written by - Channabasava A Kashinakunti | Last Updated : Aug 29, 2021, 03:29 PM IST
  • ಬಾದಾಮಿ ಈಗ ದೇಹ ತೂಕ ಇಳಿಸಿಕೊಳ್ಳಲು ಸಹ ತುಂಬಾ ಪ್ರಯೋಜನಕಾರಿ
  • ಈ ಬಾದಾಮಿಯಲ್ಲಿ ಮೆಗ್ನೀಸಿಯಮ್, ಕಾಪರ್, ವಿಟಮಿನ್ ಇ, ಫೈಬರ್ ಮತ್ತು ಪ್ರೋಟೀನ್‌
  • ನಿಮ್ಮ ತಿಂಡಿ ಸಮಯದಲ್ಲಿ ನೀವು ಬಾದಾಮಿಯನ್ನು ಸೇವಿಸಬಹುದು
Almonds Benefits : ದೇಹ ತೂಕ ಇಳಿಸಿಕೊಳ್ಳಲು ಬಾದಾಮಿ ಸೇವನೆ ಎಷ್ಟು ಪರಿಣಾಮಕಾರಿ? ಇಲ್ಲಿದೆ ನೋಡಿ ಮಾಹಿತಿ  title=

ಬಾದಾಮಿ ಈಗ ದೇಹ ತೂಕ  ಇಳಿಸಿಕೊಳ್ಳಲು ಸಹ ತುಂಬಾ ಪ್ರಯೋಜನಕಾರಿ ಯಾಗಿದೆ. ನೀವು ಈಗ ನಿಮ್ಮ ದೇಹ ತೂಕ ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳಬಹುದು. ಈ ಬಾದಾಮಿಯಲ್ಲಿ ಮೆಗ್ನೀಸಿಯಮ್, ಕಾಪರ್, ವಿಟಮಿನ್ ಇ, ಫೈಬರ್ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಬಾದಾಮಿ ನೇರ ಸ್ನಾಯುವಿನ ದ್ರವ್ಯರಾಶಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬು ಮತ್ತು ದೇಹದ ದ್ರವ್ಯರಾಶಿ ಸೂಚಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾದಾಮಿ(Almonds) ಗಮನಾರ್ಹವಾದ  ಕೊಬ್ಬನ್ನು ಬರ್ನ್ ಮಾಡುವ ಶಕ್ತಿಯನ್ನ ಹೊಂದಿದೆ. ಪ್ರತಿದಿನ ಬಾದಾಮಿಯನ್ನು ತಿನ್ನುವುದರಿಂದ, ನಿಮ್ಮ ತೂಕ ಇಳಿಕೆಯಾಗುವದರ ಜೊತೆಗೆ ಹೆಚ್ಚಿನ ಚಯಾಪಚಯ ಕ್ರಿಯೆಯ ಮೇಲೆ ನೀವು ಸುಲಭವಾಗಿ ನೆಗೆಟಿವ್ ಪರಿಣಾಮ ಬೀರುತ್ತದೆ. ಬಾದಾಮಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು, ಒಮೆಗಾ 3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತದೆ.

ಇದನ್ನೂ ಓದಿ : ಒಡೆದ ಹಾಲನ್ನು ಎಸೆಯುವ ಮುನ್ನ ಅದರ ಉಪಯೋಗ ತಿಳಿಯಿರಿ

ಬಾದಾಮಿ ತಿನ್ನುವುದರಿಂದಾಗುವ ಲಾಭಗಳೇನು?

ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಬಾದಾಮಿ

ನೀವು ನಿಮ್ಮ ತೂಕ ಇಳಿಸಿಕೊಳ್ಳಲು(Losing Weight) ಯೋಚಿಸುತ್ತಿದ್ದರೆ. ನೀವು ಪ್ರೊಟೀನ್ ಮತ್ತು ತರಕಾರಿಯುಕ್ತ ತಿಂಡಿಯನ್ನು ಸೇವಿಸಬೇಕು. ಇದರ ಜೊತೆಗೆ ಬಾದಾಮಿಯನ್ನು ತಿನ್ನುವುದರಿಂದ ಬಹಳ ಸಮಯದವರೆಗೆ ಹೊಟ್ಟೆ ತುಂಬಿದಂತಿರುತ್ತದೆ. ಹಸಿವನ್ನು ನೀಗಿಸಲು ಮತ್ತು ನಿಮ್ಮ ಫಿಟ್ ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿವೆ. ಇದನ್ನ ಸೇವಿಸುವುದರಿಂದ ಜಂಕ್ ಫುಡ್ ಸೇವಿಸಲು ನಿಮಗೆ ಮನಸ್ಸೆ ಬರುವುದಿಲ್ಲ. ನಿಮ್ಮ ತಿಂಡಿ ಸಮಯದಲ್ಲಿ ನೀವು ಬಾದಾಮಿಯನ್ನು ಸೇವಿಸಬಹುದು ಮತ್ತು ಇದರಿಂದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯಕವಾಗಿದೆ. 

ಸಾಕಷ್ಟು ಕ್ಯಾಲೊರಿಗಳನ್ನು ಒದಗಿಸುತ್ತದೆ

ಬಾದಾಮಿ ದಿನವಿಡೀ ನಿಮ್ಮನ್ನು ಚಟುವಟಿಕೆಯಿಂದಿರಲು ಶಕ್ತಿ ಮತ್ತು ಸಾಕಷ್ಟು ಕ್ಯಾಲೊರಿಗಳನ್ನು(Callery) ಒದಗಿಸುತ್ತದೆ. ಅಲ್ಲದೆ ನಿಮ್ಮ ದೇಹ ಕೊಬ್ಬು ಅಥವಾ ತಲೆತಿರುಗುವಿಕೆ ಸಮಸ್ಯೆಯನ್ನ ನಿವಾರಿಸುತ್ತದೆ. ಬಾದಾಮಿಯನ್ನು ಆಗಾಗ ಅಥವಾ ಹಸಿವಾದಾಗ ಸೇವಿಸಬೇಕು.

ಇದನ್ನೂ ಓದಿ : Remedies For Dark Circles: ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ಈ ಉಪಾಯ ಮಾಡಿ

ಹೊಟ್ಟೆಯ ಕೊಬ್ಬು ಇಳಿಕೆಗೆ

ಬಾದಾಮಿಯಲ್ಲಿ ಪ್ರೋಟೀನ್‌(Protin) ತುಂಬಿರುವುದರಿಂದ ನೇರ ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಬಾದಾಮಿ ಒಟ್ಟಾರೆ ಬಾಡಿ ಮಾಸ್ ಇಂಡೆಕ್ಸ್ ಅನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ನೀವು ಯಾವಾಗಲೂ ಬಾದಾಮಿಯನ್ನು ಸೇವಿಸುತ್ತಿರಬೇಕು.

ಬಾದಾಮಿ ತಿನ್ನಲು ಇರುವ ಮಾರ್ಗಗಳು ಯಾವುವು?

ಸಾಧ್ಯ ನಿಮ್ಮೊಂದಿಗೆ ಬಾದಾಮಿಯನ್ನು ತೆಗೆದುಕೊಂಡು ಒಯ್ಯಬಹುದು ಮತ್ತು ನಿಮಗೆ ಹಸಿವಿನ ಭಾವನೆ ಬಂದಾಗಲೆಲ್ಲಾ, ಸ್ವಲ್ಪ ಸ್ವಲ್ಪ ಸೇವಿಸಬಹುದು. ಈ ರೀತಿ ಆರೋಗ್ಯಕರವಾಗಿರುವುದರಿಂದ ಅವುಗಳನ್ನು ಹಸಿ ಮತ್ತು ಸಿಪ್ಪೆ ಸಮೇತ ಸೇವಿಸಿ. ಹುರಿದ ಬಾದಾಮಿ ಅಥವಾ ಉಪ್ಪಿನಲ್ಲಿ ಬಹಳಷ್ಟು ಉತ್ಕರ್ಷಣ ನಿರೋಧಕಗಳು ಇರುವುದಿಲ್ಲ ಅದು ನಿಮ್ಮ ತೂಕವನ್ನು ಒಳಗಿನಿಂದ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News