ನೀವು ಕುಡಿಯುವ ಶುದ್ಧೀಕರಿಸಿದ ಬಾಟಲ್ ನೀರು ಎಷ್ಟು ಸುರಕ್ಷಿತ?

ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಬಾಟಲ್ ನೀರನ್ನು(Packed Drinking Water) ಕುಡಿಯುವವರಿಗೆ ಆಘಾತಕಾರಿ ಸುದ್ದಿಯೊಂದಿದೆ. 

Last Updated : Mar 16, 2018, 08:13 PM IST
ನೀವು ಕುಡಿಯುವ ಶುದ್ಧೀಕರಿಸಿದ ಬಾಟಲ್ ನೀರು ಎಷ್ಟು ಸುರಕ್ಷಿತ? title=

ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಬಾಟಲ್ ನೀರನ್ನು(Packed Drinking Water) ಕುಡಿಯುವವರಿಗೆ ಆಘಾತಕಾರಿ ಸುದ್ದಿಯೊಂದಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಶುದ್ಧ ನೀರು ಎಂದು ಮಾರಾಟ ಮಾಡುವ ಬಾಟಲ್ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುತ್ತವೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ. 

ಯುಎಸ್ ಮೂಲದ ಖಾಸಗಿ ಸಂಸ್ಥೆಯ ವರದಿಯಲ್ಲಿ ವಿಶ್ವದೆಲ್ಲೆಡೆ ಶುದ್ಧ ಕುಡಿಯುವ ನೀರು ಎಂದು ಮಾರಾಟವಾಗುವ ಬಾಟಲ್ ನೀರಿನಲ್ಲಿ ಪಾಲಿಪ್ರೊಪಿಲೀನ್, ನೈಲಾನ್ ಮತ್ತು ಪಾಲಿಥಿಲೀನ್ ಟೆರೆಫ್ತಾಲೇಟ್'ನಂತರ ಅಂಶಗಳಿರುವುದು ಕಂಡುಬಂದಿದೆ ಎಂದು ಇನ್ಸ್ಟಿಟ್ಯೂಟ್ ಹೇಳಿದೆ.

ಈ ಸಂಶೋಧನೆಗೆ ಭಾರತ, ಬ್ರೆಜಿಲ್, ಚೀನಾ, ಇಂಡೋನೇಷಿಯಾ, ಕೀನ್ಯಾ, ಲೆಬನಾನ್, ಮೆಕ್ಸಿಕೊ, ಥೈಲ್ಯಾಂಡ್ ಮತ್ತು ಯುಎಸ್ಎ ಸೇರಿದಂತೆ 19 ರಾಷ್ಟ್ರಗಳಿಂದ ಮಾದರಿಗಳನ್ನು ಪಡೆಯಲಾಗಿತ್ತು. ಈ ಮಾದರಿಗಳನ್ನು ಬಳಸಿ ನಡೆಸಿದ ಸಂಶೋಧನೆಯ ಪ್ರಕಾರ ಶೇ.93 packed Drinking waterನಲ್ಲಿ ಪ್ಲ್ಯಾಸ್ಟಿಕ್ ಕಣಗಳು ಇರುವುದು ಸಾಬೀತಾಗಿದೆ. 

ಸಂಶೋಧನೆಯ ಸಂದರ್ಭದಲ್ಲಿ, 100 ಮೈಕ್ರಾನ್'ಗಳು ಮತ್ತು 6.5 ಮೈಕ್ರಾನ್ಗಳಷ್ಟು ಕಲುಷಿತ ಕಣಗಳನ್ನು ಗುರುತಿಸಲಾಗಿದೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ ಕೇವಲ ಒಂದು ಲೀಟರ್ ಬಾಟಲ್ ನೀರನ್ನು ಸೇವಿಸಿದರೂ ಸಹ ವರ್ಷಕ್ಕೆ 10 ಸಾವಿರ ಸೂಕ್ಷ್ಮ ಕಣಗಳು ಆತನ ದೇಹ ಸೇರಿಕೊಳ್ಳುತ್ತವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಆದರೆ ಇದರಿಂದ ವ್ಯಕ್ತಿಯ ಆರೋಗ್ಯಕ್ಕೆ ತೊಂದರೆಯಾಗಲಿದೆಯೇ ಇಲ್ಲವೇ ಎಂಬುದನ್ನು ಸಂಶೋಧಕರು ಖಚಿತಪಡಿಸಿಲ್ಲ.

ವರದಿಯ ಪ್ರಕಾರ, ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಬಾಟಲ್ ನೀರಿನ ಉದ್ಯಮ ಮೊದಲ ಸ್ಥಾನದಲ್ಲಿದ್ದು, ಪ್ರತಿ ವರ್ಷ 147 ಬಿಲಿಯನ್ ಡಾಲರ್ ವ್ಯವಹಾರ ಈ ಪಾನೀಯಗಳಿಂದಲೇ ನಡೆಯುತ್ತದೆ ಎನ್ನಲಾಗಿದೆ. 
  
ಅದೇ ಸಮಯದಲ್ಲಿ, ಶುದ್ಧ ಕುಡಿಯುವ ನೀರಿನ ಬಾಟಲಿಗಳನ್ನು ಮಾರಾಟಮಾಡುವ ಕಂಪನಿಗಳ ಶುಚಿತ್ವವೂ ಮಹತ್ವ ಪಡೆಯುತ್ತವೆ. ಆಕ್ವಾಫಿನಾ ತನ್ನ ಕಂಪನಿಯು ನೀರನ್ನು ಶುದ್ಧಗೊಳಿಸಲು ಉನ್ನತ ಗುಣಮಟ್ಟವನ್ನು ತಂತ್ರಜ್ಞಾನವನ್ನು ಬಳಸುವುದಾಗಿ ಹೇಳಿಕೊಂಡಿದೆ. ಆದರೂ ಬಾಟಲಿಯೊಳಗೆ ಮೈಕ್ರೊಪ್ಲಾಸ್ಟಿಕ್ ಇತರ ರೀತಿಯಲ್ಲೂ ಸೇರುತ್ತವೆ ಎಂದಿದ್ದಾರೆ. 

Trending News