Health From Spices : ಭಾರತೀಯ ಆಹಾರಕ್ರಮವು ಆರೋಗ್ಯಕರವಾದ ವಯೋವರ್ಧನೆಗೆ ಬೆಂಬಲ ಒದಗಿಸುವ ರೀತಿ

Health From Spices : ನಮ್ಮ ಕ್ಷಿಪ್ರ-ಗತಿಯ ಜೀವನಶೈಲಿಗಳನ್ನು ಪರಿಗಣಿಸಿದಾಗ, ಆರೋಗ್ಯಕರವಾಗಿ ತಿನ್ನುವುದು ಬಹಳ ಕಷ್ಟವಾಗಿದೆ. ಅನುಕೂಲಕರ ಆಹಾರ ಮತ್ತು ಪ್ಯಾಕೇಜ್ ಮಾಡಿದ ತಿನಿಸುಗಳ ಬಗ್ಗೆ ಒಲವು ಹಾಗೂ ಒತ್ತಡ ಹಾಗೂ ಪರಿಸರ ಮಾಲಿನ್ಯವು ಜನರು ಬಹಳ ಸುಲಭವಾಗಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಪರಿಶುದ್ಧವಾದ ಆಹಾರ ಸೇವನೆ ಮತ್ತು ತಾಜಾ ಆಹಾರ ಸೇವಿಸುವ ಪ್ರಾಮುಖ್ಯತೆ ಏರ್ಪಡುವುದು ಇಲ್ಲೇ.   

Written by - Zee Kannada News Desk | Last Updated : Jun 9, 2023, 05:49 PM IST
  • ಆರೋಗ್ಯಕರ ಆಹಾರ ಸೇವಿಸುವುದು ಬಹಳ ಕಷ್ಟವಾಗಿದೆ
  • ಜನರು ಬಹಳ ಸುಲಭವಾಗಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ
  • ತಾಜಾ ಆಹಾರ ಸೇವಿಸುವ ಪ್ರಾಮುಖ್ಯತೆ ಅರಿಯುವುದು ಮುಖ್ಯ
Health From Spices : ಭಾರತೀಯ ಆಹಾರಕ್ರಮವು ಆರೋಗ್ಯಕರವಾದ ವಯೋವರ್ಧನೆಗೆ ಬೆಂಬಲ ಒದಗಿಸುವ ರೀತಿ  title=

Health From Spices : ಕೆಲವು ವ್ಯಾಯಾಮ ಚಟುವಟಿಕೆಗಳ ಜೊತೆಗೆ ನಾವು ಆರೋಗ್ಯಕರವಾದ ಭಾರತೀಯ ಆಹಾರಕ್ರಮವನ್ನು ಪಾಲಿಸಿದರೆ, ನಾವು ಇನ್ನಷ್ಟು ಆರೋಗ್ಯವಂತರಾಗಿ ಕಾಣಬಹುದು. ನಾವು ತೆರೆದುಕೊಂಡಿರುವ ಪರಿಸರ ಮಲಿನಕಾರಕಗಳನ್ನು ನಾವು ನಿಯಂತ್ರಿಸುವುದು ಅಸಾಧ್ಯವಾದರೂ, ಆರೋಗ್ಯಕರ ಆಹಾರಕ್ರಮವನ್ನಂತೂ ಖಂಡಿತ ಪಾಲಿಸುವುದು ಸಾಧ್ಯ. ಹೆಚ್ಚು ಹೆಚ್ಚು ಜನರು ಇದನ್ನು ಮನಗಾಣುತ್ತಿದ್ದಂತೆ, ಅಬಾಟ್ ನ್ಯೂಟ್ರಿಶನ್ ಬಿಜಿನೆಸ್ ವಿಭಾಗದ ವೈದ್ಯಕೀಯ ಹಾಗೂ ವೈಜ್ಞಾನಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ. ಇರ್ಫಾನ್ ಶೇಖ್, ಸಮತೋಲನ ಆಹಾರವಾಗಬಹುದಾದ ಮತ್ತು ನೀವು ಅಆರೋಗ್ಯಕರವಾಗಿ ವೃದ್ಧಾಪ್ಯವನ್ನು ಹೊಂದುವುದಕ್ಕೆ ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳನ್ನು ಒಳಗೊಂಡ, ಪರಿಪೂರ್ಣ ಹಾಗೂ ಆರೋಗ್ಯಕರ ಆಹಾರದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. 

1.ಎಳವೆಯಲ್ಲೇ ಆರಂಭಿಸಿ: ಹದಿಹರೆಯದವರು ಬೆಳೆಯುತ್ತಿರುವಾಗ, ಮೂರು ಅತ್ಯಾವಶ್ಯಕ ವ್ಯವಸ್ಥೆಗಳು ಅವರ ದೇಹಗಳಲ್ಲಿ ಬದಲಾವಣೆ ಏರ್ಪಡಿಸುತ್ತವೆ-ಉದ್ದನೆಯ ಮೂಳೆಗಳಿರುವ ಸ್ನಾಯುಸಮೂಹ, ಹಾರ್ಮೋನ್ ಪಕ್ವತೆ ಮತ್ತು ರಕ್ತ ಹಾಗೂ ರೋಗನಿರೋಧಕತೆ. ಈ ಕ್ಷೇತ್ರಗಳಲ್ಲಿ ಸರಿಯಾದ ಬೆಳವಣಿಗೆ ಏರ್ಪಡುವುದನ್ನು ಖಾತರಿಪಡಿಸಲು ನಿಮಗೆ ಸರಿಯಾದ ಪೋಷಕಾಂಶಗಳ ಅಗತ್ಯವೇರ್ಪಡುತ್ತದೆ.

ಮೂಳೆಯ ಬೆಳವಣಿಗೆ: ಮೂಳೆಯ ಬೆಳವಣಿಗೆಯ ಬಗ್ಗೆ ಆಲೋಚಿಸುವಾಗ ಅನೇಕ ಮಂದಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಕ್ಯಾಲ್ಶಿಯಮ್ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ವಿಟಮಿನ್ ಡಿ, ಮೆಗ್ನೀಶಿಯ, ಫಾಸ್ಫರಸ್, ವಿಟಮಿನ್ ಕೆ, ಕೊಲಾಜನ್ ಹಾಗೂ ಅತ್ಯಾವಶ್ಯಕ ಫ್ಯಾಟಿ ಆಮ್ಲಗಳೂ ಕೂಡ ಮೂಳೆಯ ಆರೋಗ್ಯ ಮತ್ತು ಅಭಿವೃದ್ಧಿಗೆ ಅವಶ್ಯಕವಾದವುಗಳಾಗಿವೆ. ಈ ಪೋಷಕಾಂಶಗಳನ್ನು ಸೇವಿಸುವುದರಿಂದ ಹದಿಹರೆಯದವರಲ್ಲಿ ಮೂಳೆ ಮುರಿತದ ಅಪಾಯವನ್ನು ತಗ್ಗಿಸಬಹುದು. ಮೀನು/ಮೊಟ್ಟೆ/ಕಡಲೆಕಾಳು(Fish[i]/egg[ii]/chickpea[iii]) ಸಾಂಬಾರ್, ಮಿಶ್ರ ತರಕಾರಿಗಳ ಪಲ್ಯ, ಬೇಳೆಯ(dal[iv]) ತೊವ್ವೆ ಮತ್ತು ಅಗಸೆಬೀಜದ (flaxseed[v])ಚಟ್ನಿ ಮುಂತಾದವುಗಳೂ ಈ ಪೋಷಕಾಂಶಗಳಿಂದ ಸಮೃದ್ಧವಾಗಿವೆ.  

ಇದನ್ನೂ ಓದಿ: ಫ್ಯಾಟಿ ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ವರದಾನಕ್ಕೆ ಸಮ!

ರಕ್ತ: ಕಬ್ಬಿಣ, ವಿಟಮಿನ್ B-12 ಮತ್ತು ಫೋಲೇಟ್ ಆರೋಗ್ಯಕರವಾದ ಕೆಂಪುರಕ್ತಕಣಗಳ ರಚನೆಗೆ ಅತ್ಯಾವಶ್ಯಕ. ಸಾಕಷ್ಟು ಪ್ರಮಾಣದ ಕಬ್ಬಿಣವಿಲ್ಲದಿದ್ದರೆ, ದೇಹದುದ್ದಕ್ಕೂ ಆಮ್ಲಜನಕವನ್ನು ಪೂರೈಸಲು ಅವಶ್ಯಕವಾದ ಕೆಂಪುರಕ್ತ ಕಣಗಳನ್ನು ಹದಿಹರೆಯದವರು ಉತ್ಪಾದಿಸಲಾಗುವುದಿಲ್ಲ. ಪಾಲಕ್ ಸೊಪ್ಪಿನಿಂದ (spinach[vi], [vii])ಮಾಡುವಂತಹ ಪಾಲಕ್ ಪನ್ನೀರ್, ಪಾಲಕ್ ಅನ್ನ, ಪಾಲಕ್ ತೊವ್ವೆ, ಕಾಳುಗಳ(lentil[viii]) ಸೂಪ್,ಮೆಂತ್ಯದ(methi[ix])ಪರೋಟ, ಮತ್ತು ಬೀಟ್‌ರೂಟ್(beetroot[x])ಪಲ್ಯ ಈ ಪೋಷಕಾಂಶಗಳಿಂದ ಸಮೃದ್ಧವಾದ ಕೆಲವು ಖಾದ್ಯಗಳು. 

ಹಾರ್ಮೋನು ಪಕ್ವತೆ: ಸಮತೋಲನ ಆಹಾರ, ಸಾಕಷ್ಟು ಪ್ರಮಾಣದ ಪ್ರೋಟೀನುಗಳು, ಅಧಿಕ ನಾರಿನಂಶದ ಆಹಾರಗಳು, ಒತ್ತಡರಹಿತ ಜೀವನ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ಸುಖನಿದ್ರೆ ಆರಂಭಿಕ ವರ್ಷಗಳಲ್ಲಿ ಹಾರ್ಮೋನು ಅಡಿಪಾಯದ ಯಶಸ್ವೀ ಪರಿವರ್ತ್ನೆಗೆ ಅತಿಮುಖ್ಯವಾದುದು. 

2. 30 ಮತ್ತು 40ರಲ್ಲಿ ತಡೆಯಾತ್ಮಕ ಆರೈಕೆ :  30 ಮತ್ತು 40ರ ಆಸುಪಾಸಿನಲ್ಲಿರುವ ಜನರು, ನಿರ್ದಿಷ್ಟವಾಗಿ ತಮ್ಮ ಹೃದಯಕ್ಕೆ ಸಂಬಂಧಿಸಿದಂತೆ, ತಡೆಯಾತ್ಮಕ ಆರೈಕೆ ಮಾಡಿಕೊಳ್ಳಬೇಕು. 

ಕೊಲೆಸ್ಟೆರಾಲ್(ಕೊಬ್ಬು): ಕೊಲೆಸ್ಟೆರಾಲ್ ಕಡಿಮೆ ಮಾಡಿಕೊಳ್ಳಲು, ಹೇರಳವಾಗಿ ತರಕಾರಿಗಳು, ಧಾನ್ಯಗಳು, ಪ್ರೋಟೀನ್-ಸಮೃದ್ಧವಾದ ಆಹಾರ(ನಿರ್ದಿಷ್ಟವಾಗಿ ಮೀನು ಮತ್ತು ಸಮುದ್ರ ಆಹಾರ), ಬಳ್ಳಿತರಕಾರಿಗಳು(ಬೀನ್ಸ್ ಮತ್ತು ಕಾಳು ಮುಂತಾದವು), ಬೀಜಗಳು ಇತ್ಯಾದಿಗಳನ್ನು ಸೇವಿಸಬೇಕು. 

ಒತ್ತಡ: ವೃತ್ತಿ, ಆದಾಯ ಮತ್ತು ಕೌಟುಂಬಿಕ ಜವಾಬ್ದಾರಿಗಳು, ಒತ್ತಡ ಅನುಭವಿಸಲು ಹೇರಳ ಅವಕಾಶ ಒದಗಿಸುತ್ತವೆ. ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಒತ್ತಡಪೂರ್ವ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಹಾಗೂ ಮನಸ್ಸನ್ನು ಸಂರಕ್ಷಿಸಿಕೊಳ್ಳಲು ಮುಖ್ಯವಾಗುತ್ತದೆ. ಒತ್ತಡವನ್ನು ನಿವಾರಿಸಿಕೊಳ್ಳುವ ಕೆಲವು ಅತ್ಯುತ್ತಮ ವಿಧಾನಗಳೆಂದರೆ, ವ್ಯಾಯಾಮ, ಯೋಗ, ಬರವಣಿಗೆ ಮತ್ತು ಧ್ಯಾನ. 

ರಕ್ತದೊತ್ತಡ: ಯಾವುದೇ ರೋಗಲಕ್ಷಣಗಳು ಇಲ್ಲದಿರುವುದರಿಂದ, ಅನೇಕ ಮಂದಿಗೆ ತಮಗೆ ಏರು ರಕ್ತದೊತ್ತಡವಿರುವುದು ಗೊತ್ತೇ ಇರುವುದಿಲ್ಲ ಮತ್ತು ಇದನ್ನು ತಿಳಿದುಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ, ತಪಾಸಣೆ ಮಾಡಿಸಿಕೊಳ್ಳುವುದು. ಸೋಡಿಯಂ ಕಡಿಮೆ ಮಾಡುವುದು, ಚಹಾ ಅಥವಾ ಕೆಫೀನ್ ಸೇವನೆಯನ್ನು ಕಡಿಮೆ ಮಾಡುವುದು, ಏರು ರಕ್ತದೊತ್ತಡವನ್ನು ನಿಯಂತ್ರಿಸುವುದಕ್ಕೆ ಅತಿಮುಖ್ಯ. ಜೊತೆಗೆ, ನೀವು ಸಕ್ರಿಯರಾಗಿದ್ದು, ಸೊಂಟದ ಕೊಬ್ಬು ಏರ್ಪಡದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ. 

3. ಆದ್ಯತೆಯ ಪ್ರಾಮುಖ್ಯತೆ: ನಮಗೆ ವಯಸ್ಸಾಗುತ್ತಿದ್ದಂತೆ, ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ, ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆ ಇರಬೇಕು. ಭವಿಷ್ಯತ್ತಿನಲ್ಲಿ ಆರೋಗ್ಯಕರವಾಗಿ ವೃದ್ಧಾಪ್ಯ ಹೊಂದುವುದಕ್ಕೆ ಕೆಲವು ಮುಖ್ಯಾಂಶಗಳು:

ಸ್ನಾಯುಗಳನ್ನು ಬೆಳೆಸಿಕೊಳ್ಳುವುದರಿರಬಹುದು, ಶಕ್ತಿಯನ್ನು ಮರಳಿ ಪಡೆದುಕೊಳ್ಳುವುದಿರಬಹುದು ಅಥವಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದಕ್ಕೇ ಇರಬಹುದು, ಪ್ರತಿಯೊಂದು ವಯಸ್ಸಿನಲ್ಲೂ ಪ್ರೋಟೀನ್  ಅತ್ಯಾವಶ್ಯಕ. ಮಾಂಸ, ಬೀನ್ಸ್, ಹಾಲಿನ ಪದಾರ್ಥಗಳು, ಮೀನು, ಬೀಜಗಳು, ಕಾಟೇಜ್ ಚೀಸ್ ಮುಂತಾದವು ಪ್ರೋಟೀನ್ ಹೊಂದಿದ್ದು, ಇವುಗಳಿಂದ ತಯಾರಿಸಿದ ವಿವಿಧ ರೀತಿಯ ಖಾದ್ಯಗಳನ್ನು ಸೇವಿಸುವುದರ ಮೂಲಕ ಪ್ರೋಟೀನ್ ಪಡೆದುಕೊಳ್ಳಬಹುದು. 

ಹಣ್ಣುಗಳು, ತರಕಾರಿಗಳು, ಬೀನ್ಸ್, ಇಡಿ ಧಾನ್ಯಗಳು ಮುಂತಾದ ನಾರು-ಸಮೃದ್ಧವಾದ ಆಹಾರಗಳು ಹೊಟ್ಟೆತುಂಬಿಸಿ, ಕೊಲೆಸ್ಟೆರಾಲ್ ತಗ್ಗಿಸಲು ಮತ್ತುದೇಹದ ತೂಕ ನಿರ್ವಹಣೆ ಮಾಡಿಕೊಳ್ಳಲು ನೆರವಾಗಬಲ್ಲದು. ಕಡಲೆ( Chana[xi] ) ಮಸಾಲೆ, ಬದನೆಕಾಯಿ (baingan[xii]) ಬರ್ತ, ಓಟ್ಸ್(oats[xiii]) ಉಪ್ಪಿಟ್ಟು, ನಿಮ್ಮ ಆಹಾರಕ್ಕೆ ನಾರಿನಂಶ ಸೇರಿಸುತ್ತವೆ. 

ಕ್ಯಾಲ್ಶಿಯಮ್, ನಮಗೆ ವಯಸ್ಸಾಗುತ್ತಿದ್ದಂತೆ, ನಮ್ಮ ಮೂಳೆಗಳು ಸ್ವಲ್ಪ ಕ್ಯಾಲ್ಶಿಯಮ್ ಮತ್ತು ಸಾಂದ್ರತೆ ಕಳೆದುಕೊಂಡು, ಫ್ರಾಕ್ಚರ್(ಮೂಳೆಮುರಿತ)ಮತ್ತು ದುರ್ಬಲವಾದ ಮೂಳೆಗಳನ್ನು ಏರ್ಪಡಿಸಬಹುದು. ಹಾಲು, ಮೊಸರು ಮತ್ತು ಚೀಸ್ ಕ್ಯಾಲ್ಶಿಯಮ್‌ನ ಉತ್ತಮ ಮೂಲವಾಗಿವೆ. ರಾಗಿ ದೋಸೆ (Ragi[xiv]), ಎಳ್ಳಿನ( til[xv])ಚಟ್ನಿ, ಮತ್ತು ಪನ್ನೀರ್( paneer[xvi] )ಮಸಾಲೆ, ಮುಂತಾದ ಭಾರತೀಯ ಖಾದ್ಯಗಳು, ಪ್ರೋಟೀನ್ ಸಮೃದ್ಧವಾಗಿವೆ. 

ಇದನ್ನೂ ಓದಿ: ಬಿಳಿ ಮಾವಿನ ಹಣ್ಣು ನೋಡಿದ್ದೀರಾ? ಕ್ಯಾನ್ಸರ್ ಸೇರಿ ಈ 5 ಮಾರಕ ಕಾಯಿಲೆಗೆ ಇದೇ ಮದ್ದು

ವಿಟಮಿನ್ ಡಿ, ಆರೋಗ್ಯಕರ ಮೂಳೆಗಳಿಗೆ ಬಹಳ ಮುಖ್ಯ, ಮತ್ತು ಇದನ್ನು ಚರ್ಮವು ನೇರವಾಗಿ ಸೂರ್ಯನಬಿಸಿಲಿಗೆ ತೆರೆದುಕೊಂಡಾಗ ಮಾತ್ರ ತಯಾರಿಸಬಹುದು. ಇದನ್ನು ಕೊಬ್ಬಿರುವ ಮೀನು, ಮೊಟ್ಟೆಗಳು, ಮತ್ತು ವಿಟಮಿನ್ ಡಿ-ಫೋರ್ಟೀಫೈಡ್ ಡೈರಿ ಉತ್ಪನ್ನಗಳಲ್ಲಿ ಕಾಣಬಹುದು. 

ಪೋಷಕಾಂಶ ಪೂರಕಾಹಾರಗಳು : ದಿನನಿತ್ಯದ ಪೋಷಕಾಂಶ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ನಿಮಗೆ ವಯಸ್ಸಾಗುತ್ತಿದ್ದಂತೆ, ಶಕ್ತಿಯುತವಾದ ಸ್ನಾಯುಗಳನ್ನು ಬೆಳೆಸಿಕೊಳ್ಳುವುದಕ್ಕೆ ನಿಯಮಿತವಾದ, ಸಮತೋಲನ ಆಹಾರ ಬಹಳ ಮುಖ್ಯ. ಆದರೆ, ಸ್ನಾಯುಗಳ ವಿಷಯ ಅರ್ಥಮಾಡಿಕೊಂಡು ನಾವು ಅದಕ್ಕೆ ತಕ್ಕಂತೆ ಆಹಾರ ಸೇವಿಸಿದರೂ, ಕೆಲವೊಂದು ಪೋಷಕಾಂಶ ಕೊರತೆಗಳು ಏರ್ಪಡಬಹುದು. ಈ ಅಂತರಗಳನ್ನು ಭರ್ತಿ ಮಾಡಲು, ವ್ಯಕ್ತಿ 32 ಪ್ರಮುಖ ಪೋಷಕಾಂಶಗಳು ಮತ್ತು HMB ಅಥವಾ β-hydroxy-β-methyl butyrate ಎಂಬ ವಿಶೇಷ ವಸ್ತುವನ್ನು ಒಳಗೊಂಡ, ವೈಜ್ಞಾನಿಕ-ಆಧಾರದ ಪೋಷಕಾಂಶ ಪೂರಕಾಹಾರವಾದ ಎನ್ಶೂರ್ HMB ಯಂತಹ ಸಮತೋಲನ ಪೋಷಕಾಂಶ ಪೂರಕಾಹಾರವನ್ನು ಸೇವಿಸಿ ಸ್ನಾಯು ನಷ್ಟವನ್ನು ಸರಿಪಡಿಸಿಕೊಂಡು, ಶಕ್ತಿ ಹಾಗೂ ಬಲವನ್ನು ಮರಳಿ ಪಡೆದುಕೊಳ್ಳಬಹುದು. 

ಜೀವನದುದ್ದಕ್ಕೂ ಪ್ರತಿಯೊಬ್ಬ ವ್ಯಕ್ತಿಯೂ ಅನೇಕ ಮೈಲಿಗಲ್ಲುಗಳನ್ನು ದಾಟುತ್ತಾರೆ ಮತ್ತು ಈ ಮಾರ್ಗದ ಪ್ರತಿಯೊಂದು ಹೆಜ್ಜೆಯಲ್ಲೂ ಆರೋಗ್ಯ ಎಲ್ಲಕ್ಕಿಂತ ಮಿಗಿಲಾದ ಆದ್ಯತೆ ಪಡೆದುಕೊಳ್ಳಬೇಕು. ಸ್ಥಳೀಯವಾಗಿ ಮತ್ತು ಜೈವಿಕ ಮೂಲದ ಆಹಾರ ಪದಾರ್ಥಗಳಿಂದ ತಯಾರಿಸಲಾದ ನಿಮ್ಮ ಸಾಂಸ್ಕೃತಿಕ ಖಾದ್ಯಗಳನ್ನು ಅಳವಡಿಸಿಕೊಂಡು ವಯಸ್ಸಾಗುತ್ತಿದ್ದರೂ ನೀವು ಆರೋಗ್ಯವಂತರಆಗಿ ಇರಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News