Heart Attack Risk:ಇವರನ್ನು ಅತಿಯಾಗಿ ಕಾಡುತ್ತದೆಯಂತೆ ಹೃದಯಾಘಾತದ ಅಪಾಯ ..!

Heart Attack Risk & Precautions: ಹೃದಯಾಘಾತ, ಪರಿಧಮನಿಯ ಕಾಯಿಲೆ ಅಥವಾ ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಕಾಯಿಲೆಗಳು ಎದುರಾಗಬಾರದು ಎಂದಾದಲ್ಲಿ  ಇಂದಿನಿಂದಲೇ ಹೃದಯದ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

Written by - Ranjitha R K | Last Updated : Jun 30, 2022, 12:44 PM IST
  • ಹೃದಯ ನಮ್ಮ ದೇಹದ ಬಹು ಮುಖ್ಯ ಅಂಗ.
  • ಹೃದಯ ಸುರಕ್ಷತೆಯ ಬಗ್ಗೆ ನಾವು ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ.
  • ಈ ರೋಗಗಳಿಂದ ಹೃದಯವನ್ನು ಕಾಪಾಡಿ
Heart Attack Risk:ಇವರನ್ನು ಅತಿಯಾಗಿ ಕಾಡುತ್ತದೆಯಂತೆ ಹೃದಯಾಘಾತದ ಅಪಾಯ ..! title=
Heart Attack Risk & Precautions (file photo)

ಬೆಂಗಳೂರು : Heart Attack Risk & Precautions: ಹೃದಯ ನಮ್ಮ ದೇಹದ ಬಹು ಮುಖ್ಯ ಅಂಗ. ಹುಟ್ಟಿನಿಂದ ಸಾಯುವವರೆಗೂ ನಿರಂತರವಾಗಿ ಬಡಿಯುತ್ತಿರುತ್ತದೆ.  ಆದರೆ ಈ  ಅಂಗದ ಸುರಕ್ಷತೆಯ ಬಗ್ಗೆ ನಾವು ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ. ಹೃದಯದಲ್ಲಿ ಕೆಲವು ಸಮಸ್ಯೆಗಳು ಬರುತ್ತವೆ ಎಂದಾದಲ್ಲಿ, ಅದಕ್ಕೂ ಮುನ್ನ ಕೆಲವು ಮುನ್ಸೂಚನೆಗಳು ಸಿಗುತ್ತವೆ. ಈ ಸೂಚನೆಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

ಈ ರೋಗಗಳಿಂದ ಹೃದಯವನ್ನು  ಕಾಪಾಡಿ : 
ಹೃದಯಾಘಾತ, ಪರಿಧಮನಿಯ ಕಾಯಿಲೆ ಅಥವಾ ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಕಾಯಿಲೆಗಳು ಎದುರಾಗಬಾರದು ಎಂದಾದಲ್ಲಿ ಇಂದಿನಿಂದಲೇ ಹೃದಯದ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ : ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿ ಪಡೆಯಬಹುದು ಜಿರಳೆ ಕಾಟದಿಂದ ಮುಕ್ತಿ

ಹೃದಯಾಘಾತವನ್ನು ತಡೆಗಟ್ಟುವ ಮಾರ್ಗಗಳು :
1. ನಿಯಮಿತವಾಗಿ ನಿಮ್ಮ ತೂಕವನ್ನು ಪರೀಕ್ಷಿಸಿ ಮತ್ತು ಅನಗತ್ಯವಾಗಿ ತೂಕ  ಹೆಚ್ಚಾಗಲು ಬಿಡಬೇಡಿ
2. ಬೊಜ್ಜು ಇರುವವರು ಮತ್ತು ನಿಯಮಿತ ವ್ಯಾಯಾಮದತ್ತ ಗಮನ ಹರಿಸಬೇಕು 
3.ದೈನಂದಿನ ಆಹಾರದಲ್ಲಿ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ.
4. ಅಧಿಕ ರಕ್ತದೊತ್ತಡ ಇದ್ದರೆ, ಉಪ್ಪು ಸೇವನೆಯನ್ನು ಕಡಿಮೆ ಮಾಡಿ
5. ಹೆಚ್ಚು ಕಾಫಿ ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ,
6. ಮಧುಮೇಹ ರೋಗಿಗಳು ಹೃದಯ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ.
ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ
7.ಸಾಧ್ಯವಾದಷ್ಟು ಎಣ್ಣೆಯುಕ್ತ ಆಹಾರದಿಂದ ದೂರವಿರಿ.

ಈ ಆಹಾರವನ್ನು ಸೇವಿಸಿ :
ಆರೋಗ್ಯಕರ ಹೃದಯ ಹೊಂದಬೇಕಾದರೆ ಮೊದಲು ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿ. ಇದಕ್ಕಾಗಿ, ಒಮೆಗಾ -3, ಆಂಟಿಆಕ್ಸಿಡೆಂಟ್ ಗಳು, ಫೈಬರ್ ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ವಿಶೇಷವಾಗಿ ರಸಭರಿತವಾದ ಹಣ್ಣುಗಳು,  ಡ್ರೈ ಫ್ರುಇತ್ಸ್ ಅನ್ನು ಆಹಾರದಲ್ಲಿ ಸೇವಿಸಿ. ಕರಿದ ಮತ್ತು ಮಸಾಲೆಯುಕ್ತ ವಸ್ತುಗಳಿಂದ ದೂರವಿರಿ.

ಇದನ್ನೂ ಓದಿ : Coriander Leaves Benefits: ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಕೊತ್ತಂಬರಿ ಸೊಪ್ಪು

ದೈಹಿಕ ಚಟುವಟಿಕೆಗಳು ಸಹ ಅಗತ್ಯ :
ಹೃದಯವನ್ನು ಆರೋಗ್ಯವಾಗಿಡಲು, ಆರೋಗ್ಯಕರ ಆಹಾರದ ಜೊತೆಗೆ ದೈಹಿಕ ಚಟುವಟಿಕೆಗಳು ಬಹಳ ಮುಖ್ಯ. ಇಲ್ಲದಿದ್ದರೆ ನಿಮ್ಮ ದೇಹದ ಕೊಬ್ಬು ಸುಲಭವಾಗಿ ಕಡಿಮೆಯಾಗುವುದಿಲ್ಲ.

ಸಿಗರೇಟ್ ಆಲ್ಕೋಹಾಲ್ ನಿಂದ ಅಂತರ ಕಾಯ್ದುಕೊಳ್ಳಿ :
ನಮ್ಮ ಆರೋಗ್ಯವನ್ನು ಹಾಳು ಮಾಡುವ ಕೆಲವು ಕೆಟ್ಟ ಅಭ್ಯಾಸಗಳಿವೆ. ಬಹುತೇಕ ಯುವಕರು ಧೂಮಪಾನ, ಮದ್ಯಪಾನದ ಚಟಕ್ಕೆ ಬಿದ್ದಿರುತ್ತಾರೆ.   ಇದು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಷ್ಟು ಬೇಗ ಈ ಅಭ್ಯಾಸಗಳಿಂದ ದೂರವಿರುತ್ತಿರೋ ಅಷ್ಟು ಒಳ್ಳೆಯದು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News