Condom health advice : ಕಾಂಡೋಮ್ ಜನನ ನಿಯಂತ್ರಣಕ್ಕೆ ಇರುವ ಒಂದೇ ಒಂದು ಸುರಕ್ಷಿತ ಮಾರ್ಗ. ಅಲ್ಲದೆ, ಇದು HIV, ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ ಸೋಂಕುಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯನ್ನು ತಪ್ಪಿಸಲು ನೀವು ವಿಭಿನ್ನ ರೀತಿಯ ಜನನ ನಿಯಂತ್ರಣವನ್ನು ಬಳಸುತ್ತಿದ್ದರೂ ಸಹ, STD ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಅದಕ್ಕಾಗಿ ಕಾಂಡೋಮ್ ಬಳಸುವುದು ಒಳ್ಳೆಯದು.
ಕಾಂಡೋಮ್‌ಗಳನ್ನು ವಿವಿಧ ಅಂಗಡಿಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಯೋಜಿತ ಪಿತೃತ್ವದ ಆರೋಗ್ಯ ಕೇಂದ್ರಗಳು ಮತ್ತು ಆನ್‌ಲೈನ್‌ನಿಂದ ತುಂಬಾ ಸುಲಭವಾಗಿ ಪಡೆಯಬಹುದು. ಅಲ್ಲದೆ ಇವುಗಳನ್ನು ಖರೀದಿಸಲು ನಿಮಗೆ ಪ್ರಿಸ್ಕ್ರಿಪ್ಷನ್ ಅಥವಾ ಐಡಿ ಅಗತ್ಯವಿರುವುದಿಲ್ಲ. ಇರುವಗಳ ಬೆಲೆಯೂ ಸಹ ಅಷ್ಟೇನೂ ದುಬಾರಿ ಅಲ್ಲ. ಕಾಂಡೋಮ್‌ಗಳು ವಿಭಿನ್ನ ಶೈಲಿ, ಆಕಾರ ಮತ್ತು ಟೆಕಶ್ಚರ್‌ಗಳಲ್ಲಿ ಬರುತ್ತವೆ.
ಇದನ್ನೂ ಓದಿ: ಈ ಸಮಯದಲ್ಲಿ ಎಳನೀರು ಕುಡಿದರೆ ಶಾಶ್ವತವಾಗಿ ದೂರವಾಗುವುದು ಈ ಸಮಸ್ಯೆಗಳು
ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ನಿಮ್ಮ ಸಂಗಾತಿಯು ನಿಮ್ಮ ಶಿಶ್ನಕ್ಕೆ ಕಾಂಡೋಮ್ ಹಾಕುವುದು ಶೃಂಗಾರದ ಒಂದು ಭಾಗ. ಈ ರೀತಿ ಮಾಡುವುದರಿಂದ ಪುರುಷರ ಲೈಂಗಿಕ ಹಾರ್ಮೋನುಗಳು ಉತ್ತೇಜನಗೊಂಡು ಹೆಚ್ಚಿನ ಮಾದಕತೆ ಹೊಂದುತ್ತಾರೆ. ಇದು ಫೋರ್ಪ್ಲೇನ ಒಂದು ಭಾಗವೂ ಸಹ. ಕಾಂಡೋಮ್‌ಗಳು ಸ್ಖಲನವನ್ನು ವಿಳಂಬಗೊಳಿಸುವುದರಿಂದ ಹೆಚ್ಚಿನ ಕಾಲ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು..
ಬಹು ಮುಖ್ಯವಾಗಿ ನಿಮ್ಮನ್ನು STD ಗಳಿಂದ ರಕ್ಷಿಸುತ್ತವೆ. ಗರ್ಭಧಾರಣೆ ಅಥವಾ STD ಗಳ ಬಗ್ಗೆ ಚಿಂತಿಸದೆ ಸಂತೋಷದ ಸಮಯ ಕಳೆಯಬಹುದು. ಇದರಿಂದ ಯಾವುದೇ ಭಯವಿರದೆ ನಿಮ್ಮ ಸಂಗಾತಿಯ ಮೇಲೆ ಕೇಂದ್ರೀಕರಿಸಲು ಇದು ಅನುವು ಮಾಡಿಕೊಡುತ್ತದೆ. ಸುರಕ್ಷಿತ ಲೈಂಗಿಕತೆ ಉತ್ತಮ ಲೈಂಗಿಕ ಕ್ರಿಯೆಗೆ ದಾರಿ ಎಂಬುವುದನ್ನು ಮರೆಯಬೇಡಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.