Iron Deficiency: ಶರೀರದಲ್ಲಿನ ಕಬ್ಬಿಣಾಂಶದ ಕೊರತೆಯನ್ನು ತಕ್ಷಣ ದೂರ ಮಾಡುತ್ತವೆ ಈ ವಸ್ತುಗಳು, ನಿತ್ಯ ಈ ಕೆಲಸ ಮಾಡಿ

Iron Deficiency: ರಕ್ತ ಉತ್ಪಾದನೆ, ಉಸಿರಾಟ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಕಬ್ಬಿಣ ಅಗತ್ಯ. ಕಬ್ಬಿಣದ ಕೊರತೆಯು ರಕ್ತಹೀನತೆಯಿಂದ ಹಿಡಿದು ಆರೋಗ್ಯದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

Written by - Nitin Tabib | Last Updated : Sep 15, 2021, 02:43 PM IST
  • ಕ್ಯಾಲ್ಸಿಯಂ ಹಾಗೂ ಐರನ್ ಅನ್ನು ಜೊತೆಗೆ ಸೇವಿಸಬೇಡಿ.
  • ನೀವು ಎರಡನ್ನೂ ಒಟ್ಟಿಗೆ ಸೇವಿಸಿದರೆ ಕ್ಯಾಲ್ಸಿಯಂ, ನಿಮ್ಮ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
  • ನಿಮಗೆ ಸಾಕಷ್ಟು ಪೌಷ್ಟಿಕಾಂಶ ಸಿಗುವುದಿಲ್ಲ.
Iron Deficiency: ಶರೀರದಲ್ಲಿನ ಕಬ್ಬಿಣಾಂಶದ ಕೊರತೆಯನ್ನು ತಕ್ಷಣ ದೂರ ಮಾಡುತ್ತವೆ ಈ ವಸ್ತುಗಳು, ನಿತ್ಯ ಈ ಕೆಲಸ ಮಾಡಿ  title=
Iron Deficiency (File Photo)

ನವದೆಹಲಿ: Iron Deficiency - ಕಬ್ಬಿಣವು (Iron) ನಮ್ಮ ದೇಹಕ್ಕೆ ಒಂದು ಅಗತ್ಯವಾದ ಪೋಷಕಾಂಶವಾಗಿದೆ ಮತ್ತು ದೇಹದ ಒಟ್ಟಾರೆ ಬೆಳವಣಿಗೆಗೆ, ನೀವು ಕಬ್ಬಿಣದಂಶವಿರುವ ಆಹಾರವನ್ನು ಸೇವಿಸುವುದು ಅವಶ್ಯಕ. ಆರೋಗ್ಯಕರ ಜೀವನಶೈಲಿಗಾಗಿ (Lifestyle) ಕಬ್ಬಿಣದಂಶವಿರುವ ಆಹಾರವನ್ನು ತೆಗೆದುಕೊಳ್ಳಲು ತಜ್ಞರು ಶಿಫಾರಸು ಮಾಡುತ್ತಾರೆ. ಕಬ್ಬಿಣದ ಕೊರತೆಯು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ನೀವು ಕೆಲವು ಪ್ರಮುಖ ಆಹಾರ ಸಲಹೆಗಳನ್ನು ಅನುಸರಿಸುವುದು ಮುಖ್ಯ.

ಸ್ಯಾನ್ ಫ್ರಾನ್ಸಿಸ್ಕೋ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ (University of California San Francisco) ವರದಿಯ ಪ್ರಕಾರ, ರಕ್ತ ಉತ್ಪಾದನೆ, ಉಸಿರಾಟ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಕಬ್ಬಿಣ ಅಗತ್ಯ. ಕಬ್ಬಿಣದ ಕೊರತೆಯು ರಕ್ತಹೀನತೆಯಿಂದ (Anemia) ಹಿಡಿದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಶರೀರವನ್ನು ಹೈಡ್ರೇಟ್ ಆಗಿರಿಸಿ
ಪ್ರತಿನಿತ್ಯ ಸಾಕಷ್ಟು ನೀರು ಕುಡಿಯುವುದು ರಕ್ತಹೀನತೆಯ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಫುಡ್ ನ್ಯೂಟ್ರಿಷನ್ ಬುಲೆಟಿನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀರಿನಲ್ಲಿರುವ ಕಬ್ಬಿಣದ ಸಂಯುಕ್ತಗಳು ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಉಂಟುಮಾಡುವುದಿಲ್ಲ ಎನ್ನಲಾಗಿದೆ.

ಹಸಿರು ತರಕಾರಿ ಸೇವಿಸಿ (Iron Rich Food)
ಪಾಲಕ್ ಮತ್ತು ಇತರ ಹಸಿರು ತರಕಾರಿಗಳಲ್ಲಿ ಫೋಲೇಟ್ ಸಮೃದ್ಧವಾಗಿರುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅವುಗಳನ್ನು ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ. ಇದು ನಿಮ್ಮನ್ನು ರಕ್ತಹೀನತೆಯಿಂದ ರಕ್ಷಿಸುತ್ತದೆ.

ವಿಟಮಿನ್ ಸಿ
Academy of Nutrition and Dietetics ಪ್ರಕಾರ, ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಹಾಗೂ ಸಾಕಷ್ಟು ವಿಟಮಿನ್ ಸಿ ಮತ್ತು ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಸಸ್ಯಾಹಾರಿ ಮೂಲಗಳಿಂದ ಒಂದೇ ಊಟದಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ತೆಗೆದುಕೊಳ್ಳುವುದು ಕಬ್ಬಿಣದ ಕೊರತೆಯಿಂದ ನಿಮ್ಮನ್ನು ರಕ್ಷಿಸುತ್ತದೆ. 

ಮಾಂಸ ಹಾಗೂ ಪೌಲ್ಟ್ರಿ 
ಚಿಕನ್, ಮಟನ್ ನಂತಹ ಪದಾರ್ಥಗಳಲ್ಲಿ ಬಹಳಷ್ಟು ಕಬ್ಬಿಣಾಂಶ ಇರುತ್ತದೆ. ಇವು  ಫೋಲೇಟ್ ಅನ್ನು ಸಹ ಹೊಂದಿವೆ. ಇದು ನಿಮ್ಮನ್ನು ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಯಿಂದ ರಕ್ಷಿಸುತ್ತದೆ.

ಕ್ಯಾಲ್ಸಿಯಂ ಹಾಗೂ ಐರನ್ ಅನ್ನು ಜೊತೆಗೆ ಸೇವಿಸಬೇಡಿ
ಕ್ಯಾಲ್ಸಿಯಂಯುಕ್ತ  ಆಹಾರ ಪದಾರ್ಥಗಳ ಜೊತೆಗೆ ಕಬ್ಬಿಣದ ಅಂಶವಿರುವ ಆಹಾರವನ್ನು ಎಂದಿಗೂ ಸೇವಿಸಬೇಡಿ. ನೀವು ಎರಡನ್ನೂ ಒಟ್ಟಿಗೆ ಸೇವಿಸಿದರೆ ಕ್ಯಾಲ್ಸಿಯಂ, ನಿಮ್ಮ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ ಮತ್ತು ನಿಮಗೆ ಸಾಕಷ್ಟು ಪೌಷ್ಟಿಕಾಂಶ ಸಿಗುವುದಿಲ್ಲ.

ಇದನ್ನೂ ಓದಿ-Benefits of Fennel Water: ಹೊಟ್ಟೆಯ ಬೊಜ್ಜು ಕರಗಿಸಲು ಈ ಪವರ್‌ಫುಲ್ ಪಾನೀಯವನ್ನು ಒಮ್ಮೆ ಟ್ರೈ ಮಾಡಿ

ಐರನ್ ಕೊರತೆಯ ಲಕ್ಷಣಗಳು
ದೇಹದಲ್ಲಿ ಕಬ್ಬಿಣದ ಕೊರತೆ  ತಲೆತಿರುಗುವಿಕೆ, ತಲೆನೋವು, ಉಸಿರಾಟದ ತೊಂದರೆ ಮತ್ತು ಇತರ ಹಲವು ಸಮಸ್ಯೆಗಳನ್ನು ಉಂಟುಮಾಡಬಹುದು. WHO ಮಾಹಿತಿಯ ಪ್ರಕಾರ, ಈ ಸ್ಥಿತಿಯು ಸುಮಾರು ಶೇ. 33 ರಷ್ಟು ಮಹಿಳೆಯರು ಮತ್ತು ಶೇ.40 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುತ್ತದೆ. ಇದೇ ವೇಳೆ ವಿಶ್ವಾದ್ಯಂತ ಸುಮಾರು ಶೇ.42  ಮಕ್ಕಳು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ-First aid Mistakes: ಗಾಯಗೊಂಡಾಗ ಅಪ್ಪಿ-ತಪ್ಪಿಯೂ ಕೂಡ ಈ ಮಿಸ್ಟೇಕ್ ಮಾಡಬೇಡಿ, ಪ್ರಾಬ್ಲಮ್ ಹೆಚ್ಚಾಗುತ್ತೆ

(Disclaimer:ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಹಾನದ ಮೇಲೆ ಆದರಿಸಿದೆ. ಅವುಗಳನ್ನು ಅನುಸರಿಸುವ ಮೊದಲು ನುರಿತ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದುಸ್ತಾನ್ ಕನ್ನಡ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )

ಇದನ್ನೂ ಓದಿ-ಮಹಿಳೆಯರು ಈ ಸಮಯದಲ್ಲಿ ಪ್ರತಿದಿನ 1 ಬಾಳೆಹಣ್ಣನ್ನು ತಿಂದರೆ ದೂರವಾಗುತ್ತವೆ ಈ ಸಮಸ್ಯೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News