ನವದೆಹಲಿ : ಮಾರ್ಚ್ 1 ಅಂದರೆ ನಾಳೆಯಿಂದ ಮುಂದಿನ ಹಂತದ ಕರೋನಾ ವ್ಯಾಕ್ಸಿನೇಷನ್ (Corona Vaccination) ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಹಂತದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆ (Vaccine) ನೀಡಲಾಗುವುದು. ಮುಂದಿನ ಹಂತದ ಬಗ್ಗೆ ಸರ್ಕಾರ ಸೂಚನೆಗಳನ್ನು ಜಾರಿಗೊಳಿಸಿದೆ.
ಮಾರ್ಚ್ 1 ರಿಂದ ಹೊಸ ನಿಯಮಗಳು ಅನ್ವಯ:
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನಾಳೆಯಿಂದ ಕರೋನಾ ಲಸಿಕೆ (Corona vaccine) ನೀಡಲಾಗುವುದು. ಲಸಿಕೆ ನೀಡಿಕೆ ಪ್ರಕ್ರಿಯೆ ಚುರುಕುಗೊಳಿಸಲು ಖಾಸಗಿ ಆಸ್ಪತ್ರೆಗಳಲ್ಲಿಯೂ ವ್ಯಾಕ್ಸಿನೇಷನ್ (vaccination) ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬೇಕಾದರೆ 250 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಹೊಸ ಬದಲಾವಣೆಗಳು ಮಾರ್ಚ್ 1 ರಿಂದ ಜಾರಿಗೆ ಬರಲಿವೆ. COVID-19 ಲಸಿಕೆಯ ಲಾಭ ಪಡೆಯಲು ಕಾರ್ಯವಿಧಾನ ಮತ್ತು ನಿಯಮಗಳ ಬಗ್ಗೆ ತಿಳಿದಿರಬೇಕು.
ಇದನ್ನೂ ಓದಿ : Corona Vaccination : ಲಸಿಕೆ ಹಾಕಿಸಿಕೊಳ್ಳಲು ನಿಮ್ಮ ನಂಬರ್ ಬಂದಿದೆ, ಉಪಯುಕ್ತ ಮಾಹಿತಿ ಇಲ್ಲಿದೆ.
ಲಸಿಕೆಗಾಗಿ ನೋಂದಾವಣೆ ಅಗತ್ಯ :
60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಇದರ ಜೊತೆಗೆ ಗಂಭಿರ ಕಾಯಿಲೆಗಳಿಂದ ಬಳಸಲುತ್ತಿರುವ 45 ರಿಂದ 59 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲಾಗುವುದು. ರಾಷ್ಟ್ರವ್ಯಾಪಿ COVID-19 ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಖಾಸಗಿ ಆಸ್ಪತ್ರೆಗಳ (Private hospital) ಪಟ್ಟಿಯನ್ನು ಕೇಂದ್ರ ಈಗಾಗಲೇ ಬಿಡುಗಡೆ ಮಾಡಿದೆ. ವ್ಯಾಕ್ಸಿನೇಷನ್ ಗಾಗಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ನೋಂದಣಿ ವೇಳೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಬೇಕು. ಆನ್‌ಲೈನ್‌ನಲ್ಲಿಯೂ (Online) ನೋಂದಣಿ ಮಾಡಬಹುದು. ಕರೋನಾ ವ್ಯಾಕ್ಸಿನೇಷನ್‌ನ ರಿಜಿಸ್ಟ್ರೇಷನ್ ಸಂಪೂರ್ಣ ಪ್ರಕ್ರಿಯೆಯು CoWIN ಆ್ಯಪ್ ಮೂಲಕ ನಡೆಯಲಿದೆ. ಈ ಅಪ್ಲಿಕೇಶನ್‌ನಲ್ಲಿ, ವ್ಯಾಕ್ಸಿನೇಷನ್ ಕೇಂದ್ರದಿಂದ ವ್ಯಾಕ್ಸಿನೇಷನ್ ತೆಗೆದುಕೊಳ್ಳುವ ಜನರ ಸಂಪೂರ್ಣ ಪಟ್ಟಿ ಇರುತ್ತದೆ. ಕರೋನಾ ಲಸಿಕೆ ತೆಗೆದುಕೊಳ್ಳಲು ಬಯಸುವವರು, CO-WIN ಅಪ್ಲಿಕೇಶನ್‌ನಿಂದ ಅರ್ಜಿ ಸಲ್ಲಿಸಬೇಕು.
ನೋಂದಣಿ ವೇಳೆ ಯಾವ ದಾಖಲೆಗಳ ಅಗತ್ಯವಿದೆ :
ಕರೋನಾ ವ್ಯಾಕ್ಸಿನೇಷನ್ ನೋಂದಣಿಗೆ ಮತದಾರರ ಗುರುತಿನ ಚೀಟಿ (Voter Id), ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಸರ್ವಿಸ್ ಐಡಿ, ಪಾಸ್‌ಪೋರ್ಟ್, ಸ್ಮಾರ್ಟ್ ಕಾರ್ಡ್, ಪಿಂಚಣಿ ಗುರುತಿನ ಚೀಟಿ, ಬ್ಯಾಂಕ್ / ಪೋಸ್ಟ್ ಆಫೀಸ್ ಪಾಸ್‌ಬುಕ್ (post office) ಸಲ್ಲಿಸಬಹುದು. ಈ ಮೇಲಿನ ಯಾವುದೇ ದಾಖಲೆಗಳನ್ನು ಸಲ್ಲಿಸುವ ಮೂಲಕ ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಸಮಯದಲ್ಲಿ ಸಲ್ಲಿಸುವ ಡಾಕ್ಯುಮೆಂಟ್ ಅನ್ನು ವ್ಯಾಕ್ಸಿನೇಷನ್ ಸಮಯದಲ್ಲಿ ತೋರಿಸಬೇಕಾಗುತ್ತದೆ.
ಇದನ್ನೂ ಓದಿ : ಮಕ್ಕಳ Corona Vaccine ಟ್ರಯಲ್ ಗೆ ಅನುಮತಿ ಕೋರಿದ Bharat Biotech, ಮೊದಲು ದತ್ತಾಂಶ ತೋರಿಸಿ ಎಂದ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.