ನಿಮ್ಮ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಈ ವಸ್ತುವಿನಿಂದ ಚಿಕ್ಕ ಮಕ್ಕಳನ್ನು ದೂರವಿಡಿ

ಮನೆಯಲ್ಲಿರುವ ಟಾಯ್ಲೆಟ್ ಗೆ ಹೋಲಿಸಿದರೆ ನಿಮ್ಮ ಮನಯಲ್ಲಿರುವ ಟಿವಿ ರಿಮೋಟ್ ಶೇ.20ರಷ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ.

Last Updated : Aug 19, 2020, 10:56 PM IST
ನಿಮ್ಮ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಈ ವಸ್ತುವಿನಿಂದ ಚಿಕ್ಕ ಮಕ್ಕಳನ್ನು ದೂರವಿಡಿ title=

ನವದೆಹಲಿ: ನಿಮ್ಮ ಮನೆಯಲ್ಲಿ ಇರುವ ನಿಮ್ಮ ಮಾತು ಬಾರದ ಹಸುಳೆ ಟಿವಿ ರಿಮೋಟ್ ಅನ್ನು ಹೆಚ್ಚಾಗಿ ತನ್ನ ಬಾಯಿಯಲ್ಲಿ ಇಟ್ಟುಕೊಳ್ಳುವುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಕಂದನನ್ನು ಸುಮ್ಮನಾಗಿಸಲು ಟಿವಿ ರಿಮೋಟ್ ನೀಡುವುದು ಒಂದು ಉತ್ತಮ ಪರ್ಯಾಯ ಅಂತ ನಿಮಗೂ ಅನಿಸುತ್ತದೆಯೇ? ಹಾಗಿದ್ದರೆ, ನಿಮ್ಮ ಈ ಅನಿಸಿಕೆಯನ್ನು ಇನ್ಮುಂದೆ ಬದಲಾಯಿಸಿ. ಇತ್ತೀಚೆಗಷ್ಟೇ ನಡೆಸಲಾದ ಒಂದು ಸಮೀಕ್ಷೆ ಟಿವಿ ರಿಮೋಟ್ ಮನೆಯಲ್ಲಿ ಇರುವ ಅತ್ಯಂತ ಕೊಳಕು ಸಾಮಗ್ರಿಗಳಲ್ಲಿ ಒಂದು ಎಂದು ಹೇಳಿದೆ. ಮನೆಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಪಸರಿಸುವಲ್ಲಿ ಇದು ಹೆಚ್ಚಿನ ಪಾತ್ರವಹಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.

ಟಾಯ್ಲೆಟ್ ಸೀಟ್ ಗಿಂತ ಶೇ.20ರಷ್ಟು ಹೆಚ್ಚು ಕೊಳಕಾಗಿರುತ್ತದೆ ಟಿವಿ ರಿಮೋಟ್
ಬ್ರಿಟನ್ ನಲ್ಲಿರುವ ಒಂದು ಸಂಸ್ಥೆ ScS ನಡೆಸಿರುವ ಒಂದು ಸಂಶೋಧನೆಯ ಪ್ರಕಾರ ಮನೆಯಲ್ಲಿರುವ ಎಲ್ಲ ಸಾಮಗ್ರಿಗಳಲ್ಲಿ ಟಿವಿ ರಿಮೋಟ್ ಒಂದು ಇಂತಹ ಉಪಕರಣವಾಗಿದ್ದು, ಇದರಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕು ಪಸರಿಸುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ನಿಮ್ಮ ಮನೆಯ ಟಾಯ್ಲೆಟ್ ತುಲನೆಯಲ್ಲಿ ಟಿವಿ ರಿಮೋಟ್ ಶೇ.20ರಷ್ಟು ಹೆಚ್ಚು ಕೊಳಕಾಗಿರುತ್ತದೆ ಎಂದು ಈ ಸಮೀಕ್ಷೆ ಹೇಳಿದೆ. ಈ ಸಂಶೋಧನೆ ನಡೆಸಿರುವ ಸಂಶೋಧಕ ಡೆಲ್ ಗಿಲ್ಸಪಿ ಹೇಳುವ ಪ್ರಕಾರ ಟಿವಿ ರಿಮೋಟ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ, ಈಸ್ಟ್ ಹಾಗೂ ಮೋಲ್ಡ್ ಇರುತ್ತವೆ ಎನ್ನುತ್ತಾರೆ.

ಈ ವಸ್ತುಗಳು ಕೂಡ ಟಾಯ್ಲೆಟ್ ಗಿಂತ ಹೆಚ್ಚು ಕೊಳಕಾಗಿರುತ್ತವೆ
ಬ್ರಿಟನ್ ನ ಸುಮಾರು 2000 ಮನೆಗಳಲ್ಲಿ ನಡೆಸಲಾಗಿರುವ ಈ ಸಂಶೋಧನೆ ಪ್ರಕಾರ ಮನೆಯ ಡ್ರಾಯಿಂಗ್ ರೂಮ್ ಹಾಗೂ ಬೆಡ್ ರೂಮ್ ನ ಕಾರ್ಪೆಟ್ ಹಾಗೂ ಬಾತ್ ರೂಮ್ ಗಳಲ್ಲಿಯೂ ಕೂಡ ಭಾರಿ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಇರುವುದು ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ ಮನೆ ಬಾಗಿಲಗಳ ಹ್ಯಾಂಡಲ್ ಗಳಲ್ಲಿ ಕೂಡ ಭಾರಿ ಪ್ರಮಾಣದ ಸೋಂಕು ಇರುವುದು ಕಂಡುಬಂದಿದೆ.

ಈ ಕುರಿತು ವೈದ್ಯರು ಹೇಳುವ ಪ್ರಕಾರ ರಿಮೋಟ್ ನಲ್ಲಿ ಭಾರಿ ಪ್ರಮಾಣದ ಬ್ಯಾಕ್ಟೀರಿಯಾ ಕಂಡು ಬಂದಿರುವುದು ಗಂಭೀರ ವಿಷಯವಾಗಿದೆ ಎಂದಿದ್ದಾರೆ. ಮನೆಯಲ್ಲಿರುವ ಬಹುತೇಕರು ರಿಮೋಟ್ ಬಳಕೆ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಈ ರಿಮೋಟ್ ಹೆಚ್ಚಾಗಿ ಉಪಯೋಗಿಸುವುದು ಮತ್ತು ಅದನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು ಇನ್ನೂ ಗಂಭೀರ ವಿಷಯವಾಗಿದೆ. ಹೀಗಾಗಿ ಇದೆ ಕಾರಣದಿಂದ ಚಿಕ್ಕ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

Trending News