ಶ್ರಾವಣ ಮಾಸದ ನಂತರ ತಿನ್ನಬೇಕು ಈ ಆಹಾರಗಳನ್ನು , ತಜ್ಞರ ಸಲಹೆ ಏನಿದೆ ನೋಡಿ

ನಿರಂತರವಾಗಿ ಉಪವಾಸ ಮಾಡುತ್ತಿದ್ದರೆ, ಅದು ನಿಮ್ಮ ರೋಗನಿರೋಧಕ ಶಕ್ತಿಯ  ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.  ಇದಕ್ಕಾಗಿ ಈ ಕೆಳಗಿನ ವಸ್ತುಗಳನ್ನು ಸೇವಿಸುವುದು ಉತ್ತಮ. 

Written by - Ranjitha R K | Last Updated : Aug 23, 2021, 07:25 PM IST
  • ಶ್ರಾವಣ ಮಾಸ ಅನ್ನುವುದು ಪವಿತ್ರವಾದ ತಿಂಗಳು.
  • ಈ ತಿಂಗಳು ಉಪವಾಸ, ವೃತಗಳನ್ನು ಆಚರಿಸಲಾಗುತ್ತದೆ.
  • ಸಂಪ್ರದಾಯ ಮತ್ತು ನಿಯಮಗಳಿಂದಾಗಿ, ಜನರು ಕಡಿಮೆ ಆಹಾರ ತಿನ್ನುತ್ತಾರೆ.
ಶ್ರಾವಣ ಮಾಸದ ನಂತರ ತಿನ್ನಬೇಕು ಈ ಆಹಾರಗಳನ್ನು , ತಜ್ಞರ ಸಲಹೆ ಏನಿದೆ ನೋಡಿ  title=
ಶ್ರಾವಣ ಮಾಸದ ನಂತರ ತಿನ್ನಬೇಕು ಈ ಆಹಾರಗಳನ್ನು (file photo)

ನವದೆಹಲಿ : ಶ್ರಾವಣ ಮಾಸ ಅನ್ನುವುದು ಪವಿತ್ರವಾದ ತಿಂಗಳು.  ಈ ತಿಂಗಳು ಉಪವಾಸ, ವೃತಗಳನ್ನು ಆಚರಿಸಲಾಗುತ್ತದೆ.  ಹೀಗಾಗಿ ದೇಹದ ರೋಗನಿರೋಧಕ ಶಕ್ತಿ (Immunity) ಕಡಿಮೆಯಾಗುತ್ತದೆ. ಆದ್ದರಿಂದ, ರೋಗನಿರೋಧಕ ಶಕ್ತಿ ಯನ್ನು ಹೆಚ್ಚಿಸಲು, ಅಂಥಹ ಆಹಾರದ ಕಡೆಗೆ ಗಮನ ಹರಿಸಬೇಕು. ಉಪವಾಸದ ಸಮಯದಲ್ಲಿ, ಸಂಪ್ರದಾಯ ಮತ್ತು ನಿಯಮಗಳಿಂದಾಗಿ, ಜನರು ಕಡಿಮೆ ಆಹಾರ ತಿನ್ನುತ್ತಾರೆ. ಇದರಿಂದ ದೇಹದಲ್ಲಿ  ಪೌಷ್ಟಿಕಾಂಶದ ಕೊರತೆ ಕಾಡುತ್ತದೆ.  ಈ ಕಾರಣದಿಂದಾಗಿ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹ ಕಳೆದುಕೊಂಡಿರುತ್ತದೆ.  

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ :
ನಿರಂತರವಾಗಿ ಉಪವಾಸ ಮಾಡುತ್ತಿದ್ದರೆ, ಅದು ನಿಮ್ಮ ರೋಗನಿರೋಧಕ ಶಕ್ತಿಯ (Immunity) ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.  ಇದಕ್ಕಾಗಿ ಈ ಕೆಳಗಿನ ವಸ್ತುಗಳನ್ನು ಸೇವಿಸುವುದು ಉತ್ತಮ. 

ಇದನ್ನೂ ಓದಿ : Coronavirus 3rd Wave: 'ಕೋರೋನಾ ಮೂರನೇ ಅಲೆ ಇಲ್ಲಕ್ಕೆ ಸಮಾನ, ಅಕ್ಟೋಬರ್ ವರೆಗೆ ಮಹಾಮಾರಿಯಿಂದ ಮುಕ್ತಿ'

ನಿಂಬೆ :
ತಜ್ಞರ ಪ್ರಕಾರ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವಿಟಮಿನ್ ಸಿ ಬಹಳ ಮುಖ್ಯ. ಸೋಂಕಿನ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ಉತ್ಪಾದನೆಯಲ್ಲಿ ಇದು ಸಹಾಯಕ. ಅದಕ್ಕಾಗಿಯೇ ನಿಂಬೆಹಣ್ಣು (Lemon) ಸೇವಿಸಬೇಕು. ನೀವು ಕಿತ್ತಳೆ, ದ್ರಾಕ್ಷಿಹಣ್ಣು, ಟ್ಯಾಂಗರಿನ್ ಇತ್ಯಾದಿಗಳನ್ನು ಕೂಡಾ ನಿಂಬೆಯೊಂದಿಗೆ ಸೇವಿಸಬಹುದು.

ಬ್ರೊಕೊಲಿ:
ಶ್ರಾವಣ ಮಾಸದ ನಂತರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬ್ರೊಕೊಲಿಯನ್ನು ಸೇವಿಸಬಹುದು. ಏಕೆಂದರೆ, ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೈಬರ್ (Fiber), ವಿಟಮಿನ್ ಇ ಮತ್ತು  ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ.  ಬ್ರೊಕೊಲಿಯನ್ನು ತಿನ್ನುವುದರಿಂದ  ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಬೆಳ್ಳುಳ್ಳಿ :
ಕೆಲವರು ಶ್ರಾವಣದಲ್ಲಿ ಬೆಳ್ಳುಳ್ಳಿಯನ್ನು (Garlic) ಬಳಸುವುದಿಲ್ಲ. ಆದರೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು  ಬಹಳ ಮುಖ್ಯ. ಆದ್ದರಿಂದ, ಶ್ರಾವಣ ಮಾಸದ ನಂತರ, ಬೆಳ್ಳುಳ್ಳಿಯನ್ನು ಸೇವಿಸಿ. ತಜ್ಞರ ಪ್ರಕಾರ, ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು allicin  ನಂತಹ ಸಂಯುಕ್ತಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Ayurvedic Treatment For Skin: ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಈ 4 ಆಯುರ್ವೇದ ಟಿಪ್ಸ್

ಬಾದಾಮಿ :
ವಿಟಮಿನ್-ಸಿ ಜೊತೆಗೆ, ವಿಟಮಿನ್-ಇ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಇ ಫ್ಯಾಟ್ ಸೋಲ್ಯುಬಲ್ ವಿಟಮಿನ್ ಆಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿಯನ್ನು (Almond) ನಿಯಮಿತವಾಗಿ ಸೇವಿಸಬಹುದು.

ಅರಿಶಿನ :
ಆಹಾರದಲ್ಲಿ ಅರಿಶಿನವನ್ನು (Turmeric) ಸೇರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಏಕೆಂದರೆ, ಅರಿಶಿನದಲ್ಲಿ , ಆ್ಯಂಟಿ ಇಂಫ್ಲ ಮೆಟರಿ, ವೈರಸ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಕರ್ಕ್ಯುಮಿನ್   ಇರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಸಹಾಯಕವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News