ನಿಮ್ಮ ಡಯಟ್‌ನಲ್ಲಿ ಇರಲಿ ಈ ಸ್ವಾದಿಷ್ಟ ಆಹಾರ!

ಆಹಾರ ಮತ್ತು ಆರೋಗ್ಯ, ಈ ಎರಡು ಪದಗಳು ಯುವಕರಿಗೆ ಮಾತ್ರವಲ್ಲದೆ ಎಲ್ಲಾ ವಯಸ್ಸಿನವರಿಗೂ ಬಹಳ ಮುಖ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮಾ ಮತ್ತು ಸರಿಯಾದ ಆಹಾರವನ್ನು ಹೊಂದಿರುವುದು ಬಹಳ ಮುಖ್ಯ ಎಂದು ಜನರು ಭಾವಿಸುತ್ತಾರೆ.

Updated: Oct 29, 2019 , 02:46 PM IST
ನಿಮ್ಮ ಡಯಟ್‌ನಲ್ಲಿ ಇರಲಿ ಈ ಸ್ವಾದಿಷ್ಟ ಆಹಾರ!

ಆಹಾರ (Diet) ಮತ್ತು ಆರೋಗ್ಯ(Health) , ಈ ಎರಡು ಪದಗಳು ಯುವಕರಿಗೆ ಮಾತ್ರವಲ್ಲದೆ ಎಲ್ಲಾ ವಯಸ್ಸಿನವರಿಗೂ ಬಹಳ ಮುಖ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮಾ ಮತ್ತು ಸರಿಯಾದ ಆಹಾರವನ್ನು ಹೊಂದಿರುವುದು ಬಹಳ ಮುಖ್ಯ ಎಂದು ಜನರು ಭಾವಿಸುತ್ತಾರೆ. ಆದರೆ ಆಹಾರದ ಬಗ್ಗೆ ತಪ್ಪು ಪರಿಕಲ್ಪನೆಯೆಂದರೆ ಡಯಟ್‌ ಆಹಾರದಲ್ಲಿ ಕೆಲ ಪದಾರ್ಥಗಳನ್ನು ಬಳಸದೇ ಇರುವುದು. ಡಯಟ್‌ನಲ್ಲಿ ಸ್ವಾದಿಷ್ಟ ಆಹಾರವನ್ನೂ ತಯಾರಿಸಬಹುದು. ಅಂತಹ ಕೆಲವು ರುಚಿಕರವಾದ ಆಹಾರದ ಬಗ್ಗೆ ತಿಳಿದುಕೊಳ್ಳೋಣ...

ಪಾಸ್ಟಾ ಡಯಟ್:
ಪಾಸ್ಟಾವನ್ನು ಯಾವಾಗಲೂ ಜಂಕ್ ಫುಡ್‌ನ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಡಯಟ್ ಪಾಸ್ಟಾ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಡಯಟ್ ಪಾಸ್ಟಾ ಕಂದು ಬಣ್ಣದ ಪಾಸ್ಟಾವನ್ನು ಸೂಚಿಸುತ್ತದೆ. ಇದನ್ನು ನೀವು ಹತ್ತಿರದ ಯಾವುದೇ ಅಂಗಡಿಯಿಂದ ಖರೀದಿಸಬಹುದು. ಇದು ಬಿಳಿ ಪಾಸ್ಟಾಕ್ಕಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಇದನ್ನು ತಯಾರಿಸಲು ಸಾಕಷ್ಟು ತರಕಾರಿಗಳು ಬೇಕಾಗುತ್ತವೆ.

ಮೆಡಿಟರೇನಿಯನ್ ಆಮ್ಲೆಟ್:
ಈ ಆಮ್ಲೆಟ್ ನಿಮ್ಮ ಮೆಡಿಟರೇನಿಯನ್ ಆಹಾರವನ್ನು ಚೆನ್ನಾಗಿ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಈ ಆಮ್ಲೆಟ್ ಉಳಿದ ಆಮ್ಲೆಟ್ ಭಕ್ಷ್ಯಗಳಿಗಿಂತ ಕಡಿಮೆ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದಕ್ಕೆ ಹೆಚ್ಚು ಹೆಚ್ಚು ಗಿಡಮೂಲಿಕೆಗಳನ್ನು ಸೇರಿಸುವ ಮೂಲಕ ಇದನ್ನು ಹೆಚ್ಚು ಆರೋಗ್ಯಕರಗೊಳಿಸಲಾಗುತ್ತದೆ.

ಬೇರೀಸ್ (ಹಣ್ಣುಗಳು) ಮತ್ತು ತುಳಸಿ ಕ್ರೀಮ್ ಚೀಸ್ ಟೋಸ್ಟ್:
ಇದನ್ನು ಆಹಾರದ ಸಿಹಿ ಖಾದ್ಯ ಎಂದು ಕರೆಯಲಾಗುತ್ತದೆ. ಈ ಖಾದ್ಯವನ್ನು ತಯಾರಿಸಲು, ಹಣ್ಣುಗಳ ಜೊತೆಗೆ, ಜೇನುತುಪ್ಪ, ನಿಂಬೆ, ಆಲಿವ್ ಎಣ್ಣೆ, ತುಳಸಿ, ಬಿಳಿ ಬ್ರೆಡ್, ಕೊಬ್ಬು ಮುಕ್ತ ಕ್ರೀಮ್ ಚೀಸ್ ಅಗತ್ಯವಿದೆ. ತುಳಸಿ ಮತ್ತು ಹಣ್ಣುಗಳು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದರೆ, ಬಿಳಿ ಬ್ರೆಡ್‌ನಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಇದರಲ್ಲಿ ವಿಟಮಿನ್ 'ಬಿ' ಸಮೃದ್ಧವಾಗಿದೆ.

ಇಟಾಲಿಯನ್ ಕ್ವಿನೋವಾ ಸಲಾಡ್:
ಸಿಹಿ ನಿಂಬೆ ಮತ್ತು ಬೆಳ್ಳುಳ್ಳಿಯೊಂದಿಗೆ ಇಟಾಲಿಯನ್ ಕ್ವಿನೋವಾ ಸಲಾಡ್ ವಿಭಿನ್ನ ಪರಿಮಳವನ್ನು ನೀಡುತ್ತದೆ. ಇದು ಊಟ ಅಥವಾ ಭೋಜನಕ್ಕೆ ಉತ್ತಮ ಆಯ್ಕೆಯಾಗಿದೆ. ಇದನ್ನು ಹುರಿದ ಟೊಮ್ಯಾಟೊ, ಅರುಗುಲಾ(ಒಂದು ರೀತಿಯ ಸೊಪ್ಪು)ದೊಂದಿಗೆ ತಯಾರಿಸಲಾಗುತ್ತದೆ.