ಈ ಸಮಸ್ಯೆಗಳಲ್ಲಿ ವಿಷದಂತೆ ಕೆಲಸ ಮಾಡುತ್ತದೆ ಪಾಲಕ್ ಸೊಪ್ಪು .!

ಆರೋಗ್ಯದ ದೃಷ್ಟಿಯಿಂದ ಪಾಲಕ್ ಸೊಪ್ಪನ್ನು ತಿನ್ನುವುದು ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಮಿತಿ ಮೀರಿ ತಿಂದರೆ ಅಪಾಯ ಕೂಡಾ ತಪ್ಪಿದ್ದಲ್ಲ. ಪಾಲಕ್ ಸೇವನೆ ಅತಿಯಾದರೆ ಕೆಲವು ಆರಿಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ.   

Written by - Ranjitha R K | Last Updated : Dec 12, 2022, 04:28 PM IST
  • ಹಸಿರು ಸೊಪ್ಪು ತರಕಾರಿಗಳ ಪೈಕಿ ಪಾಲಕ್ ಸೊಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
  • ಪಾಲಕ್ ಅನ್ನು ಸೊಪ್ಪು ಸಾರು, ಪಲ್ಯ, ಬಾತ್ ಗಳಲ್ಲಿ ಬಳಸಲಾಗುತ್ತದೆ.
  • ಇದರಲ್ಲಿ ಪೋಷಕಾಂಶಗಳ ಕೊರತೆ ಇಲ್ಲ
ಈ ಸಮಸ್ಯೆಗಳಲ್ಲಿ ವಿಷದಂತೆ ಕೆಲಸ ಮಾಡುತ್ತದೆ ಪಾಲಕ್ ಸೊಪ್ಪು .! title=
Palak Side effects

ಬೆಂಗಳೂರು : ಉತ್ತಮ ಆರೋಗ್ಯಕ್ಕಾಗಿ ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಆರೋಗ್ಯದ ವಿಷಯ ಬಂದಾಗ ಹಸಿರು ಸೊಪ್ಪು ತರಕಾರಿಗಳ  ಪೈಕಿ ಪಾಲಕ್ ಸೊಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.  ಪಾಲಕ್ ಅನ್ನು ಸೊಪ್ಪು ಸಾರು, ಪಲ್ಯ, ಬಾತ್ ಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿ ಪೋಷಕಾಂಶಗಳ ಕೊರತೆ ಇಲ್ಲ. ಇದನ್ನು ಸೇವಿಸಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಸಿಗುತ್ತವೆ. ಆರೋಗ್ಯದ ದೃಷ್ಟಿಯಿಂದ ಪಾಲಕ್ ಸೊಪ್ಪನ್ನು ತಿನ್ನುವುದು ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಮಿತಿ ಮೀರಿ ತಿಂದರೆ ಅಪಾಯ ಕೂಡಾ ತಪ್ಪಿದ್ದಲ್ಲ. ಪಾಲಕ್ ಸೇವನೆ ಅತಿಯಾದರೆ ಕೆಲವು ಆರಿಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. 

ಪಾಲಕ್ ಸೊಪ್ಪನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅನಾನುಕೂಲಗಳು:
ಅತಿಯಾದರೆ ಅಮೃತ ಕೂಡಾ ವಿಷ ಎನ್ನುವ ಮಾತಿದೆ. ಹಾಗೆಯೇ ಕೂಡಾ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಸೇವಿಸಿದರೆ ಪಾಲಕ್ ಕೂಡಾ ವಿಷವಾಗಿಯೇ ಕೆಲಸ ಮಾಡುತ್ತದೆ. ಪಾಲಕ್ ಸೊಪ್ಪನ್ನು ಹಿತ ಮಿತವಾಗಿ ತಿಂದರೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳನ್ನೂ ನೀಡುತ್ತದೆ. ಇಲ್ಲವಾದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ಬಿಡುತ್ತದೆ. 

ಇದನ್ನೂ ಓದಿ :  ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಯನ್ನು ಈ ರೀತಿ ಬಳಸಿ

1. ಕಿಡ್ನಿ ಸ್ಟೋನ್:
ಪಾಲಕ್ ಸೊಪ್ಪನ್ನು ಅತಿಯಾಗಿ ಸೇವಿಸುವವರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗಬಹುದು. ಈ ಹಸಿರು ಎಲೆಗಳ ತರಕಾರಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹೇರಳವಾಗಿ ಕಂಡುಬರುತ್ತದೆ. ಇದರ ಅತಿಯಾದ ಸೇವನೆಯ ಕಾರಣ ಕಿಡ್ನಿಯಲ್ಲಿ ಸಣ್ಣ ಕಲ್ಲುಗಳಾಗುತ್ತವೆ.

2. ಹೊಟ್ಟೆಯ ಸಮಸ್ಯೆಗಳು :
ಪಾಲಕ್  ಸೊಪ್ಪು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಆದ್ದರಿಂದ ಅನೇಕ ಆರೋಗ್ಯ ತಜ್ಞರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಆದರೆ ಮಿತಿ ಮೀರಿ ಸೇವಿಸಿದರೆ, ಅದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.

ಇದನ್ನೂ ಓದಿ : Bad Urine Smell: ಮೂತ್ರ ವಿಸರ್ಜನೆ ವೇಳೆ ಬರುವ ಕೆಟ್ಟ ವಾಸನೆ ಈ ಗಂಭೀರ ಕಾಯಿಲೆಗಳ ಮುನ್ಸೂಚನೆ!

3. ಕೀಲು ನೋವು :
ನಿಗದಿತ ಮಿತಿಗಿಂತ ಹೆಚ್ಚು ಪಾಲಕ್ ಸೇವಿಸಿದರೆ, ಕೀಲು ನೋವು ಮತ್ತು ಸಂಧಿವಾತದ ಸಮಸ್ಯೆ ಎದುರಾಗಬಹುದು. ಅದಕ್ಕಾಗಿಯೇ ಪಾಲಕ್  ತಿನ್ನುವಾಗ ಎಷ್ಟು ಬೇಕೋ ಅಷ್ಟೇ ತಿನ್ನಬೇಕು. ಆರೋಗ್ಯ ಲಾಭ ಸಿಗುತ್ತದೆ ಎಂದು ನಿತ್ಯ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. 

 

 ( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News