ಈ ಒಂದು ತರಕಾರಿ ಸೇವನೆ ಮಾಡಿದರೆ ಸಾಕು, ಮಾಯವಾಗಿ ಬಿಡುತ್ತದೆ ಬಿಪಿ ಶುಗರ್ .!

Radish Benefits: ಮೂಲಂಗಿ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಮೂಲಂಗಿಯಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಬಿಪಿ, ಶುಗರ್ ಮತ್ತು ಕ್ಯಾನ್ಸರ್ ನಂತಹ ಅನೇಕ ಕಾಯಿಲೆಗಳನ್ನು ತಪ್ಪಿಸಲು ಇದು  ಸಹಕಾರಿ. 

Written by - Ranjitha R K | Last Updated : Nov 11, 2022, 09:24 AM IST
  • ಚಳಿಗಾಲದಲ್ಲಿ, ಹೇರಳವಾಗಿ ಸಿಗುವ ತರಕಾರಿ ಮೂಲಂಗಿ
  • ಆರೋಗ್ಯದ ಗಣಿ ಈ ಮೂಲಂಗಿ
  • ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಈ ಒಂದು ತರಕಾರಿ ಸೇವನೆ ಮಾಡಿದರೆ ಸಾಕು, ಮಾಯವಾಗಿ ಬಿಡುತ್ತದೆ ಬಿಪಿ ಶುಗರ್ .! title=
Radish Benefits (file photo)

Radish Benefits : ನಮ್ಮ ಆರೋಗ್ಯಕ್ಕೆ ಏನು ಬೇಕೋ ಅದು ನಮಗೆ ಪ್ರಕೃತಿ ದತ್ತವಾಗಿಯೇ ಸಿಗುತ್ತದೆ. ಪ್ರತಿ ಋತುವಿಗೆ ಅನುಗುಣವಾಗಿ ನಮ್ಮ ದೇಹಕ್ಕೆ , ಆರೋಗ್ಯಕ್ಕೆ ಅಗತ್ಯವಾಗಿರುವ ಹಣ್ಣು ತರಕಾರಿಗಳು ಪ್ರಕೃತಿ ನಮಗೆ ಕರುಣಿಸುತ್ತದೆ. ವಿಶೇಷವಾಗಿ ಚಳಿಗಾಲದ ದಿನಗಳಲ್ಲಿ, ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು ತರಕಾರಿಗಳಿವೆ. ಚಳಿಗಾಲದಲ್ಲಿ, ಹೇರಳವಾಗಿ ಸಿಗುವ ತರಕಾರಿಗಳಲ್ಲಿ ಮೂಲಂಗಿ ಕೂಡಾ ಒಂದು.  ಮೂಲಂಗಿ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಮೂಲಂಗಿಯಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಬಿಪಿ, ಶುಗರ್ ಮತ್ತು ಕ್ಯಾನ್ಸರ್ ನಂತಹ ಅನೇಕ ಕಾಯಿಲೆಗಳನ್ನು ತಪ್ಪಿಸಲು ಇದು  ಸಹಕಾರಿ. 

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : 
ಮೂಲಂಗಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣವಿದೆ. ಮೂಲಂಗಿಯಂತಹ ತರಕಾರಿಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು. ಮೂಲಂಗಿಯಂತಹ ಕ್ರೂಸಿಫೆರಸ್ ತರಕಾರಿಗಳು ನೀರಿನೊಂದಿಗೆ ಬೆರೆಸಿದಾಗ ಐಸೊಥಿಯೋಸೈನೇಟ್‌ಗಳಾಗಿ ಒಡೆಯುವ ಸಂಯುಕ್ತಗಳನ್ನು ಹೊಂದಿರುತ್ತವೆ. ಐಸೊಥಿಯೋಸೈನೇಟ್‌ಗಳು ಕ್ಯಾನ್ಸರ್ ಗೆಡ್ಡೆಗಳು ಮತ್ತು ಅವುಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಪ್ರಯೋಜನಕಾರಿ ಅಗಸೆ ಬೀಜಗಳು

ಮಧುಮೇಹವನ್ನು ನಿಯಂತ್ರಿಸುತ್ತದೆ : 
ಮೂಲಂಗಿಯಲ್ಲಿರುವ ಗುಣಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮೂಲಂಗಿ ಅಡಿಪೋನೆಕ್ಟಿನ್ ಎಂಬ ಹಾರ್ಮೋನ್ ಅನ್ನು ನಿಯಂತ್ರಿಸುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್. ಈ ರೀತಿಯಾಗಿ, ಮೂಲಂಗಿಯಲ್ಲಿರುವ ಪೋಷಕಾಂಶಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. 

ಹೃದಯದ ಆರೋಗ್ಯಕ್ಕಾಗಿ ಮತ್ತು ರಕ್ತದೊತ್ತಡ  ನಿವಾರಿಸುತ್ತದೆ : 
ಮೂಲಂಗಿ ಪೊಟ್ಯಾಸಿಯಮ್ ನ ಉತ್ತಮ ಮೂಲವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಸುವ ಕೆಲಸ ಮಾಡುತ್ತದೆ. ಪೊಟ್ಯಾಸಿಯಮ್ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮೂಲಂಗಿಯು ಆಂಥೋಸಯಾನಿನ್‌ಗಳನ್ನು ಹೊಂದಿದ್ದು, ಅದು ರಕ್ತ ಪರಿಚಲನೆ ಮತ್ತು ರಕ್ತದೊತ್ತಡವನ್ನು ಸುಧಾರಿಸುತ್ತದೆ. 

ಇದನ್ನೂ ಓದಿ : ಮಧುಮೇಹಕ್ಕೂ ಮುನ್ನ ದೇಹ ಈ ಸಂಕೇತಗಳನ್ನು ನೀಡುತ್ತದೆ.! ಎಚ್ಚರ ತಪ್ಪಿದರೆ ಅಪಾಯ ಖಂಡಿತಾ.!

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :
ಮೂಲಂಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೂಲಂಗಿಯು ಕರಗಬಲ್ಲ ಮತ್ತು ಕರಗದ ಫೈಬರ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿಯಾಗಿದೆ. ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮೂಲಂಗಿಯನ್ನು ತಿನ್ನುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ಉಂಟಾಗುವುದಿಲ್ಲ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News