Juices : ನೀವು ಕೊರೋನಾದಿಂದ ಗುಣಮುಖರಾಗಿದ್ದೀರಾ? ಹಾಗಿದ್ರೆ ತಪ್ಪದೆ ಈ ಜ್ಯೂಸ್ ಗಳನ್ನ ಸೇವಿಸಿ!

ಇದು ಸಂತೋಷದ ವಿಷಯ. ಆದರೆ ಕೊರೋನಾ ಚೇತರಿಕೆ ಕಂಡಮೇಲೆ ನಿಮ್ಮ ಆರೋಗ್ಯದ ಮೇಲೆ ಬಹಳ ಕಾಳಜಿ ವಹಿಸಬೇಕು. ಅದಕ್ಕಾಗಿ ನೀವು ಸೇವನೆ ಮಾಡಬೇಕಾದ ಜ್ಯೂಸ್ ಗಳ ಮಾಹಿತಿ ಇಲ್ಲಿದೆ

Last Updated : May 20, 2021, 03:28 PM IST
  • ಕೊರೋನಾ ಚೇತರಿಕೆ ಕಂಡಮೇಲೆ ನಿಮ್ಮ ಆರೋಗ್ಯದ ಮೇಲೆ ಬಹಳ ಕಾಳಜಿ ವಹಿಸಬೇಕು
  • ಕ್ಯಾರೆಟ್, ಬೀಟ್ ರೂಟ್, ಆಮ್ಲಾ ಮತ್ತು ಶುಂಠಿ ಜ್ಯೂಸ್
  • ಅನಾನಸ್, ಹಸಿರು ಸೇಬು, ಮತ್ತು ಸಿಹಿ ನಿಂಬೆ ಜ್ಯೂಸ್
Juices : ನೀವು ಕೊರೋನಾದಿಂದ ಗುಣಮುಖರಾಗಿದ್ದೀರಾ? ಹಾಗಿದ್ರೆ ತಪ್ಪದೆ ಈ ಜ್ಯೂಸ್ ಗಳನ್ನ ಸೇವಿಸಿ! title=

ಸಧ್ಯ ದೇಶದಲ್ಲಿ ಕೊರೋನಾ ತಾಂಡವಾಡುತ್ತಿದೆ. ಸಾಕಷ್ಟು ಜನರು, ಕೊರೋನಾಗೆ ಒಳಗಾಗಿದ್ದಾರೆ. ಜೊತೆಗೆ ಹಲವರು ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣ ಏರಿಕೆಯಾಗಿದೆ. ಇದು ಸಂತೋಷದ ವಿಷಯ. ಆದರೆ ಕೊರೋನಾ ಚೇತರಿಕೆ ಕಂಡಮೇಲೆ ನಿಮ್ಮ ಆರೋಗ್ಯದ ಮೇಲೆ ಬಹಳ ಕಾಳಜಿ ವಹಿಸಬೇಕು. ಅದಕ್ಕಾಗಿ ನೀವು ಸೇವನೆ ಮಾಡಬೇಕಾದ ಜ್ಯೂಸ್ ಗಳ ಮಾಹಿತಿ ಇಲ್ಲಿದೆ..

1. ಕ್ಯಾರೆಟ್, ಬೀಟ್ ರೂಟ್, ಆಮ್ಲಾ ಮತ್ತು ಶುಂಠಿ ಜ್ಯೂಸ್ :

ಬೀಟ್ ರೂಟ್ ಮತ್ತು ಕ್ಯಾರೆಟ್ ದೇಹವು ಆರೋಗ್ಯ ಮತ್ತು ಯಕೃತ್ತಿನ ಆರೋಗ್ಯ(Health)ವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಆಮ್ಲಾ ವಿಟಮಿನ್ ಸಿ ಯಿಂದ ದಟ್ಟವಾಗಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿದೆ. 2 ಕತ್ತರಿಸಿದ ಕ್ಯಾರೆಟ್, 1 ಬೀಟ್ ರೂಟ್, 2 ಆಮ್ಲ ಮತ್ತು 1-ಇಂಚಿನ ಶುಂಠಿ ತುಂಡುಗಳನ್ನು ಮಿಕ್ಸಿ ಮಾಡಿ. ಸ್ವಲ್ಪ ಕಪ್ಪು ಉಪ್ಪು ಮತ್ತು ನಿಂಬೆಯನ್ನು ಸೇರಿಸಿ ಕುಡಿಯಿರಿ.

ಇದನ್ನೂ ಓದಿ : Weight Loss: ಪ್ರತಿದಿನ ಒಂದು ಬಟ್ಟಲು ದಾಲ್ ಪಾನಿ ಕುಡಿದು ಬೇಗ ತೂಕ ಇಳಿಸಿ

2. ಪುದೀನಾ-ಟೊಮೆಟೊ ಜ್ಯೂಸ್ :

ಈ ಜ್ಯೂಸ್ ದಲ್ಲಿ ಆಂಟಿ ಆಕ್ಸಿಡೆಂಟುಗಳು ತುಂಬಾ ಸಮೃದ್ಧವಾಗಿದ್ದು ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುತ್ತದೆ. ಈ ಜ್ಯೂಸ್(Juices) ತಯಾರಿಸಲು, 4 ಟೊಮೆಟೊ 10-12 ಪುದೀನಾ ಎಲೆಗಳು ಮತ್ತು ಒಂದು ಲೋಟ ನೀರಿನೊಂದಿಗೆ ಮಿಶ್ರಣ ಮಾಡಿ. ಜ್ಯೂಸ್ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ನೀವು ಸ್ವಲ್ಪ ಕರಿಮೆಣಸು, ಕಪ್ಪು ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಬಹುದು.

ಇದನ್ನೂ ಓದಿ : ಆರೋಗ್ಯ ಚೆನ್ನಾಗಿರಬೇಕಾದರೆ ಕರಂಡೆಕಾಯಿಯನ್ನು ಕಡೆಗಣಿಸಬಾರದು..!

3. ಕಿವಿ, ಸ್ಟ್ರಾಬೆರಿ ಮತ್ತು ಕಿತ್ತಳೆ ಜ್ಯೂಸ್ :

ಸಂಪೂರ್ಣ ಆರೋಗ್ಯ ವರ್ಧಕವಾಗಿರುವ ಈ ಜ್ಯೂಸ್ ನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿ(Immunity)ಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೆ, ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮತ್ತಷ್ಟು ಅನಾರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ರಸವನ್ನು ತಯಾರಿಸಲು, 2 ಸಿಪ್ಪೆ ಸುಲಿದ ಕಿವೀಸ್, 1 ಕಪ್ ಸ್ಟ್ರಾಬೆರಿ, 1 ಸಿಪ್ಪೆ ಸುಲಿದ ಕಿತ್ತಳೆ, 1/2 ಕಪ್ ನೀರು ಮತ್ತು 1 ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ. ಅವುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಸೇವಿಸಿ.

ಇದನ್ನೂ ಓದಿ : ಹಾಲು ಯಾವಾಗ ಕುಡಿದರೆ ಒಳ್ಳೆಯದು..! ಸಿಂಪಲ್ ಹೆಲ್ತ್ ಟಿಪ್ಸ್

4. ಅನಾನಸ್, ಹಸಿರು ಸೇಬು, ಮತ್ತು ಸಿಹಿ ನಿಂಬೆ ಜ್ಯೂಸ್ :

ಈ ಜ್ಯೂಸ್ ನಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂನ ತುಂಬಿದೆ. ಇದು ಜೀರ್ಣಕ್ರಿಯೆ(Digestion)ಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಇದನ್ನು ತಯಾರಿಸಲು, 250 ಗ್ರಾಂ ಕತ್ತರಿಸಿದ ಅನಾನಸ್, 2 ಸಿಪ್ಪೆ ಸುಲಿದ ಸಿಹಿ ನಿಂಬೆ ಮತ್ತು 1 ಕತ್ತರಿಸಿದ ಗ್ರೀನ್ ಸೇಬು  ಒಟ್ಟಿಗೆ ಮಿಶ್ರಣ ಮಾಡಿ. ಸ್ವಲ್ಪ ಕಪ್ಪು ಉಪ್ಪು ಮತ್ತು ಪುದೀನಾ ಎಲೆಗಳನ್ನು ಹಾಕಿ ಸೇವಿಸಿ.

ಇದನ್ನೂ ಓದಿ : Garlic Juice Benefits: ಬೆಳ್ಳುಳ್ಳಿ ರಸದ ಪ್ರಯೋಜನಗಳ ಬಗ್ಗೆ ತಪ್ಪದೇ ತಿಳಿಯಿರಿ

5. ಅರಿಶಿನ, ಶುಂಠಿ, ನಿಂಬೆ, ಮತ್ತು ಕಿತ್ತಳೆ ಜ್ಯೂಸ್ : 

ಈ ಜ್ಯೂಸ್ ದಲ್ಲಿರುವ ಎಲ್ಲಾ ಪದಾರ್ಥಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಸ್(Virus) ನಿರೋಧಕ ಗುಣಲಕ್ಷಣಗಳಿಂದ ತುಂಬಿರುವ ಉರಿಯೂತ ನಿವಾರಕ ಸಂಯುಕ್ತಗಳನ್ನು ಹೊಂದಿವೆ. ರಸವನ್ನು ತಯಾರಿಸಲು, 2 ಸಿಪ್ಪೆ ಸುಲಿದ ಕಿತ್ತಳೆ, 5 ಚಮಚ ನಿಂಬೆ ರಸ, 1-ಇಂಚಿನ ಶುಂಠಿ ಮತ್ತು 2 ಚಮಚ ಅರಿಶಿನ ಪುಡಿಯನ್ನು ಒಟ್ಟಿಗೆ ಮಿಶ್ರಣ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News