ನವದೆಹಲಿ: ಮೂರ್ಛೆ (Unconsciousness) ಹೋಗಲು ಕಾರಣಗಳೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಫಿಟ್ ಮತ್ತು ಆರೋಗ್ಯವಂತನಾಗಿ ಕಾಣುತ್ತಿದ್ದರೂ, ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ.
ಇದನ್ನೂ ಓದಿ:ಹ್ಯಾಂಡ್ ಸಮ್ ಅಲ್ಲು ಅರ್ಜುನ್ ಪುಷ್ಪಾದ ರಗಡ್ ಲುಕ್ ಗೆ ಬದಲಾದಾಗ.. ಇಲ್ಲಿದೆ ನಟನ Transforming ವಿಡಿಯೋ
ಹಠಾತ್ ಮೂರ್ಛೆಗೆ 4 ದೊಡ್ಡ ಕಾರಣಗಳು ಇವೆ. ಮೆದುಳಿನಲ್ಲಿ ಆಮ್ಲಜನಕದ ಕೊರತೆಯಿಂದ ಮೂರ್ಛೆ ಹೋಗಬಹುದು. ಆದರೆ ಕೆಲವು ಅಂಶಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ. ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು ನಾವು ಅವುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
1. ಕಡಿಮೆ ರಕ್ತದೊತ್ತಡ: ಮೂರ್ಛೆಗೆ ಮುಖ್ಯ ಕಾರಣ ಕಡಿಮೆ ರಕ್ತದೊತ್ತಡ (Low BP) ಎಂದು ಹೇಳಲಾಗುತ್ತದೆ. ಇದು ವಿಶೇಷವಾಗಿ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಜಾಸ್ತಿ ಕಾಣಿಸಿಕೊಳ್ಳುತ್ತದೆ.
2. ನಿರ್ಜಲೀಕರಣ: ನಿಮ್ಮ ದೇಹವು ನಿರ್ಜಲೀಕರಣಗೊಂಡಾಗ (Dehydration), ನಿಮ್ಮ ರಕ್ತದಲ್ಲಿನ ದ್ರವದ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ರಕ್ತದೊತ್ತಡದಲ್ಲಿನ ಇಳಿಕೆಯಿಂದಾಗಿ ಮೂರ್ಛೆಯಾಗುವ ಅಪಾಯವು ಹೆಚ್ಚಾಗುತ್ತದೆ.
3. ಮಧುಮೇಹ: ನೀವು ಮಧುಮೇಹಿಗಳಾಗಿದ್ದರೆ, ಮೂರ್ಛೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಧುಮೇಹದಿಂದ (Diabetes) ನಿರ್ಜಲೀಕರಣ ಹೆಚ್ಚುತ್ತದೆ. ಇದು ಮೂರ್ಛೆಗೆ ಕಾರಣವಾಗಬಹುದು.
4. ಹೃದಯ ರೋಗ: ಹೃದಯಾಘಾತವು (Heart disease) ಮೂರ್ಛೆಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಸಂಭವಿಸಿದಾಗ, ನಿಮ್ಮ ಮೆದುಳಿಗೆ ರಕ್ತ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Love Mocktail-2 : ಮತ್ತೆ ಕಳೆಗಟ್ಟಿದ ಕನ್ನಡ ಚಿತ್ರರಂಗ : ಇದು ಸ್ಯಾಂಡಲ್ವುಡ್ ಸಂಭ್ರಮ!
(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.