30ರ ನಂತರ ನಿಮ್ಮ ಹೃದಯವನ್ನು ಆರೋಗ್ಯಯುತವಾಗಿಡಲು ಇಲ್ಲಿವೆ ನಾಲ್ಕು ಮಾರ್ಗಗಳು..!

ನಮ್ಮಲ್ಲಿ ಹೆಚ್ಚಿನ ಜನರು 30ರ ಆಸುಪಾಸಿನಲ್ಲಿ ಆರೋಗ್ಯಯುತ ಹೃದಯ ಮತ್ತು ಚುರುಕಾದ ದೈಹಿಕ ಸ್ಥಿತಿಯನ್ನು ಹೊಂದಿರುತ್ತೇವೆ. "ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತು ನಮ್ಮಲ್ಲಿ ಜನಜನಿತ. ಈ ಮಾತು ನಮ್ಮ ಹೃದಯದ ಆರೋಗ್ಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ 30 ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಹೇಳಿಕೆಯಾಗಿದೆ. ಭವಿಷ್ಯದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಈಗ ಬಿತ್ತಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:

Written by - Krishna N K | Last Updated : Jun 21, 2023, 03:26 PM IST
  • 30ರ ಆಸುಪಾಸಿನಲ್ಲಿ ಆರೋಗ್ಯಯುತ ಹೃದಯ ಮತ್ತು ಚುರುಕಾದ ದೈಹಿಕ ಸ್ಥಿತಿಯನ್ನು ಹೊಂದಿರುತ್ತೇವೆ.
  • "ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತು ನಮ್ಮಲ್ಲಿ ಜನಜನಿತ.
  • 30 ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಹೇಳಿಕೆ.
30ರ ನಂತರ ನಿಮ್ಮ ಹೃದಯವನ್ನು ಆರೋಗ್ಯಯುತವಾಗಿಡಲು ಇಲ್ಲಿವೆ ನಾಲ್ಕು ಮಾರ್ಗಗಳು..! title=

Healthy heart tips : ನಮ್ಮಲ್ಲಿ ಹೆಚ್ಚಿನ ಜನರು 30ರ ಆಸುಪಾಸಿನಲ್ಲಿ ಆರೋಗ್ಯಯುತ ಹೃದಯ ಮತ್ತು ಚುರುಕಾದ ದೈಹಿಕ ಸ್ಥಿತಿಯನ್ನು ಹೊಂದಿರುತ್ತೇವೆ. "ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತು ನಮ್ಮಲ್ಲಿ ಜನಜನಿತ. ಈ ಮಾತು ನಮ್ಮ ಹೃದಯದ ಆರೋಗ್ಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ 30 ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಹೇಳಿಕೆಯಾಗಿದೆ. ಭವಿಷ್ಯದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಈಗ ಬಿತ್ತಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:

1. ನಿಯಮಿತ ವ್ಯಾಯಾಮ : ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಅತಿಯಾದ ಕೊಬ್ಬಿನ ಪ್ರಮಾಣ ಮೊದಲಾದ ಹೃದಯ ಸಂಬಂಧಿ ಅಪಾಯಗಳನ್ನು ಕಡಿಮೆ ಮಾಡಲು ದೈಹಿಕ ವ್ಯಾಯಾಮದ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ವ್ಯಾಯಾಮವು ಯಾವುದೇ ರೂಪದಲ್ಲಿರಬಹುದು, ಕ್ರೀಡೆ, ಈಜು ಅಥವಾ ಪ್ರತಿದಿನ 40 ನಿಮಿಷಗಳ ಅಥವಾ ವಾರಕ್ಕೆ ಕನಿಷ್ಠ 5 ಬಾರಿ ಸರಳವಾದ ನಡುಗೆಯೊಂದಿಗೆ ದೇಹದಲ್ಲಿ ಬೆವರು ತರಿಸುವ ಯಾವುದೇ ರೂಪದ ವ್ಯಾಯಾಮವಾಗಬಹುದು.

ಇದನ್ನೂ ಓದಿ:  Covid-19 ವ್ಯಾಕ್ಸಿನ್ ಕಾರಣ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆಯೇ? ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?

2. ಸೂಕ್ಷ್ಮ ಆಹಾರ ಪದ್ಧತಿ : ಪ್ರೋಟೀನ್‌ಯುಕ್ತ ಮತ್ತು ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ವಿಮುಖವಾಗಿರುವ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಒಣ ಹಣ್ಣುಗಳ ಸೇವನೆ ಆರೋಗ್ಯಕರ. ದಿನಕ್ಕೆ 5 ಭಾಗ ಹಣ್ಣುಗಳನ್ನು ಸೇವಿಸುವುದು ಉತ್ತಮ. ಉಪ್ಪಿನ ಬಳಕೆ ಕಡಿಮೆ ಇರಲಿ. ಹೈಡ್ರೇಷನ್‌ ಉತ್ತಮವಾಗಿರಲಿ ಮತ್ತು ಆಲ್ಕೋಹಾಲ್ ಮಿತವಾಗಿರಲಿ. ಒಂದೇ ಸಲ ಅತಿಯಾಗಿ ತಿನ್ನುವ ಬದಲು ನಿಯಮಿತ ಮಧ್ಯಂತರದಲ್ಲಿ ಸ್ವಲ್ಪ, ಸ್ವಲ್ಪ ಆಹಾರ ಸೇವಿಸಬೇಕು.

3. ಧೂಮಪಾನವನ್ನು ನಿಲ್ಲಿಸಿ : ಹೃದಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಧೂಮಪಾನವು ಅತಿ ದೊಡ್ಡ ಶತೃವಾಗಿದೆ. ಧೂಮಪಾನ ಮಾಡುವವರಲ್ಲಿ ಹೃದಯಾಘಾತ ಸಾಧ್ಯತೆಯು ಧೂಮಪಾನ ಮಾಡದವರಿಗಿಂತ ಎರಡು ಪಟ್ಟು ಅಧಿಕ ಮತ್ತು ಸಾಯುವ ಸಾಧ್ಯತೆ 3-4 ಪಟ್ಟು ಹೆಚ್ಚು.

ಇದನ್ನೂ ಓದಿ: ನ್ಯುಮೋನಿಯಾದ ಪ್ರಾರಂಭಿಕ ಸೂಚನೆಗಳನ್ನು ಗುರುತಿಸುವುದು ಹೇಗೆ..?

ಧೂಮಪಾನವನ್ನು ನಿಲ್ಲಿಸಿದ ನಂತರ ಧೂಮಪಾನಿಗಳ ಹೃದಯ ರಕ್ತನಾಳದ ಅಪಾಯವು ಅರ್ಧದಷ್ಟು ಕಡಿಮೆಯಾಗಲು ಕೇವಲ ಒಂದು ವರ್ಷ ತೆಗೆದುಕೊಳ್ಳುತ್ತದೆ ಮತ್ತು ಧೂಮಪಾನಿಗಳಲ್ಲದವರಲ್ಲಿ ಈ ಅಪಾಯ ಅಭಿವೃದ್ಧಿಗೊಳ್ಳಲು ಎರಡು ವರ್ಷ ಬೇಕಾಗುತ್ತದೆ. ನಿಷ್ಕ್ರಿಯ ಅಥವಾ ಅಪರೂಪದ ಧೂಮಪಾನ ಕೂಡ ಇದೇ ರೀತಿಯ ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ, ಯಾವುದೇ ವಯಸ್ಸಿನ ಧೂಮಪಾನಿಗಳು, ವಿಶೇಷವಾಗಿ 30 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ತಕ್ಷಣವೇ ಧೂಮಪಾನವನ್ನು ನಿಲ್ಲಿಸಬೇಕು.

4. ಆರೋಗ್ಯ ತಪಾಸಣೆ : "ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ" ಎಂಬ ಮಾತಿದೆ. ಒಮ್ಮೆ ನೀವು 30 ವರ್ಷ ದಾಟಿದರೆ, ವರ್ಷಕ್ಕೊಮ್ಮೆಯಾದರೂ ನಿಯಮಿತ ಹೃದಯ ಮತ್ತು ಆರೋಗ್ಯ ತಪಾಸಣೆಯನ್ನು ನಿಮಗೆ ಶಿಫಾರಸು ಮಾಡಲಾಗುತ್ತದೆ. ಧೂಮಪಾನಿಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯದ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಅಪಾಯ ಹೆಚ್ಚು. ಕುಟುಂಬದಲ್ಲಿ ಅಕಾಲಿಕ ಹೃದ್ರೋಗಗಳ ಇತಿಹಾಸ ಹೊಂದಿರುವವರು ಹೃದ್ರೋಗ ತಜ್ಞರನ್ನು ಭೇಟಿ ಮಾಡಿ ಮತ್ತು ಸಲಹೆ ಪಡೆಯಬೇಕು.

ಇದನ್ನೂ ಓದಿ: ನೀವು ಮೊಮೊಸ್‌ ಪ್ರಿಯರೇ... ಹಾಗಿದ್ರೆ ಮಿಸ್‌ ಮಾಡ್ದೆ ಈ ಸ್ಟೋರಿ ಓದಿ...! 

ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಒಟ್ಟಿಗೆ ಪಾಲಿಸಬೇಕು ಮತ್ತು ಉತ್ತಮ ನಿದ್ರೆ ಮತ್ತು ಧನಾತ್ಮಕ ಆಲೋಚನೆಗಳು ಜೊತೆಯಾಗಿ ನಿಮ್ಮ 30 ನಂತರದ ದಿನಗಳಲ್ಲಿ ಹೃದಯವನ್ನು ಆರೋಗ್ಯವಾಗಿಡಲು ಮತ್ತು ಸಂತೋಷವಾಗಿಡಲು ಸಹಕಾರಿ.

ಡಾ.ರಾಜಪಾಲ್ ಸಿಂಗ್-ನಿರ್ದೇಶಕರು,
ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ, ಫೋರ್ಟಿಸ್ ಆಸ್ಪತ್ರೆ, 
ರಿಚ್‌ಮಂಡ್ ರಸ್ತೆ, ಬೆಂಗಳೂರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News