Sweet Potatoes For Weight Loss: ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ಈ ರೀತಿ ಸೇವಿಸಿ

Sweet Potatoes For Weight Loss: ಸಿಹಿ ಗೆಣಸು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯದ ಗಣಿಯೂ ಹೌದು. ಅದರಲ್ಲೂ ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಿಹಿ ಗೆಣಸು ಒಂದು ವರದಾನವಿದ್ದಂತೆ ಎಂದು ನಿಮಗೆ ತಿಳಿದಿದೆಯೇ? ಸ್ವಭಾವತಃ ರುಚಿಯಲ್ಲಿ ಸಿಹಿಯಾಗಿರುವ ಈ ಗೆಣಸು ತೂಕ ಇಳಿಕೆಯಲ್ಲಿ ಹೇಗೆ ಸಹಾಯ ಮಾಡಬಹುದು ಎಂದು ನೀವು ಯೋಚಿಸುತ್ತಿದ್ದರೆ, ಈ ಲೇಖನವನ್ನು ತಪ್ಪದೇ ಓದಿ.

Written by - Yashaswini V | Last Updated : Dec 6, 2022, 02:53 PM IST
  • ನೈಸರ್ಗಿಕ ಸಿಹಿ ಪದಾರ್ಥವಾಗಿರುವ ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಖನಿಜಾಂಶಗಳಂತಹ ಅಂಶಗಳು ಕಂಡು ಬರುತ್ತವೆ.
  • ಇದು ತೂಕ ಇಳಿಕೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ.
  • ಅಷ್ಟೇ ಅಲ್ಲ, ಸಿಹಿ ಗೆಣಸಿನ ಸೇವನೆಯಿಂದ ಸಿಹಿ ತಿನಿಸುಗಳನ್ನು ತಿನ್ನುವ ಹಂಬಲ ಕೂಡ ಕಡಿಮೆ ಆಗುತ್ತದೆ.
Sweet Potatoes For Weight Loss: ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ಈ ರೀತಿ ಸೇವಿಸಿ  title=
Sweet Potatoes For Weight Loss

Sweet Potatoes For Weight Loss: ಕೆಲವರಿಗೆ ತುಂಬಾ ಪ್ರಿಯವಾದ ತರಕಾರಿ ಆಗಿರುವ ಸಿಹಿ ಗೆಣಸು ಬೇರೆ ಋತುಗಳಿಗಿಂತ ಚಳಿಗಾಲದಲ್ಲಿ ಯಥೇಚ್ಛವಾಗಿ ಲಭ್ಯವಾಗಲಿದೆ. ಸಿಹಿ ಗೆಣಸು ತಿನ್ನಲು ರುಚಿಕರ ಮಾತ್ರವಲ್ಲ, ಅದು ಆರೋಗ್ಯದ ಗಣಿಯೂ ಹೌದು. ನಮ್ಮಲ್ಲಿ, ಕೆಲವರು ಸಿಹಿ ಗೆಣಸಿನ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ, ತೂಕ ಹೆಚ್ಚಳವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಆಹಾರ ತಜ್ಞರ ಪ್ರಕಾರ, ಸಿಹಿ ಗೆಣಸಿನ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

ವಾಸ್ತವವಾಗಿ, ನೈಸರ್ಗಿಕ ಸಿಹಿ ಪದಾರ್ಥವಾಗಿರುವ ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಖನಿಜಾಂಶಗಳಂತಹ ಅಂಶಗಳು ಕಂಡು ಬರುತ್ತವೆ. ಇದು ತೂಕ ಇಳಿಕೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲ, ಸಿಹಿ ಗೆಣಸಿನ ಸೇವನೆಯಿಂದ ಸಿಹಿ ತಿನಿಸುಗಳನ್ನು ತಿನ್ನುವ ಹಂಬಲ ಕೂಡ ಕಡಿಮೆ ಆಗುತ್ತದೆ. ಆದರೆ, ಸಿಹಿ ಗೆಣಸನ್ನು ಸರಿಯಾದ ರೀತಿಯಲ್ಲಿ ಸೇವಿಸಿದರಷ್ಟೇ ಇದು ತೂಕ ಇಳಿಕೆಗೆ ಸಹಾಯಕವಾಗಲಿದೆ. ಹಾಗಿದ್ದರೆ, ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ಹೇಗೆ ಸೇವಿಸಬೇಕು ಎಂದು ತಿಳಿಯೋಣ...

ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ತಿನ್ನುವ ಸರಿಯಾದ ಮಾರ್ಗ:
ನೀವು ತೂಕ ಇಳಿಕೆಗಾಗಿ ಸಿಹಿ ಗೆಣಸನ್ನು ತಿನ್ನಲು ಬಯಸಿದರೆ ಇದನ್ನು ಬೇಯಿಸಿ,ಸಿಪ್ಪೆ ತೆಗೆದು ಹಾಗೆಯೇ ಸೇವಿಸಿ. ಇದರೊಂದಿಗೆ ಇತರ ಸಿಹಿಕಾರಕಗಳನ್ನು ಅಂದರೆ ಸಕ್ಕರೆ, ಬೆಲ್ಲ, ಜೇನು ತುಪ್ಪವನ್ನು ಬೆರೆಸಿ ಸೇವಿಸಬೇಡಿ.

ಇದನ್ನೂ ಓದಿ- Best Fruits For Uric Acid: ನಿಮಗೂ ಯೂರಿಕ್ ಆಸಿಡ್ ಸಮಸ್ಯೆ ಇದೆಯೇ? ಈ ಹಣ್ಣುಗಳನ್ನು ತಪ್ಪದೇ ಸೇವಿಸಿ

ಸಿಹಿ ಗೆಣಸು ತೂಕ ಇಳಿಕೆಗೆ ಹೇಗೆ ಸಹಾಯಕವಾಗುತ್ತದೆ?
ನಿರ್ಜಲೀಕರಣ ಸಮಸ್ಯೆ ನಿವಾರಿಸುತ್ತದೆ:

ಸಿಹಿ ಗೆಣಸು ಹೆಚ್ಚು ನೀರಿನ ಅಂಶವನ್ನು ಹೊಂದಿದೆ. ಹಾಗಾಗಿ ಸಿಹಿ ಗೆಣಸಿನ ಸೇವನೆಯಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಇರುವುದಿಲ್ಲ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. 

ಇದನ್ನೂ ಓದಿ- Radish Leaves Benefits: ಆರೋಗ್ಯದ ನಿಧಿ ಮೂಲಂಗಿ ಸೊಪ್ಪು

ಫೈಬರ್ ಸಮೃದ್ಧವಾಗಿದೆ:
ಸಿಹಿ ಗೆಣಸು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ಯುಕ್ತ ಆಹಾರದ ಸೇವನೆಯಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ, ಕಡಿಮೆ ಆಹಾರ ಸೇವಿಸಲು ಸಹಕಾರಿ ಆಗಿದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News