Tamannaah Beauty Secret : ನಟಿ ತಮನ್ನಾ ಭಾಟಿಯಾ ಬ್ಯೂಟಿ ಸೀಕ್ರೆಟ್ಸ್ : ಬೆಳಿಗ್ಗೆ-ಬೆಳಿಗ್ಗೆ ಮಾಡುತ್ತಾರೆ ಒಂದು ಕೆಲಸ

ತಮನ್ನಾ ಭಾಟಿಯಾ ಅವರು ರಾತ್ರಿಯಿಡೀ ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ ಅಥವಾ ಚಿತ್ರೀಕರಣದಿಂದಾಗಿ ಕಡಿಮೆ ನಿದ್ದೆ ಮಾಡಿದಾಗ, ಅವರ ಮುಖ ಊದಿಕೊಳ್ಳುತ್ತದೆ

Written by - Channabasava A Kashinakunti | Last Updated : Aug 26, 2021, 01:28 PM IST
  • 'ಮಿಲ್ಕ್ ಬ್ಯೂಟಿ' ತಮನ್ನಾ ಭಾಟಿಯಾ
  • ತಮನ್ನಾ ಭಾಟಿಯಾ ಬೆಳಿಗ್ಗೆ ಒಂದು ಬ್ಯೂಟಿ ಟ್ರಿಕ್
  • ತಮನ್ನಾ ಮುಖ ಊದಿಕೊಳ್ಳುತ್ತದೆ
Tamannaah Beauty Secret : ನಟಿ ತಮನ್ನಾ ಭಾಟಿಯಾ ಬ್ಯೂಟಿ ಸೀಕ್ರೆಟ್ಸ್ : ಬೆಳಿಗ್ಗೆ-ಬೆಳಿಗ್ಗೆ ಮಾಡುತ್ತಾರೆ ಒಂದು ಕೆಲಸ title=

ತಮನ್ನಾ ಭಾಟಿಯಾ(Actress Tamannaah Bhatia) ಸಿನಿ ಲೋಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಹೀಗಾಗಿ ಇವರನ್ನ 'ಮಿಲ್ಕ್ ಬ್ಯೂಟಿ' ಎಂದು ಕೂಡ ಕರೆಯುತ್ತಾರೆ. ಪ್ರತಿಯೊಬ್ಬರೂ ಇವರ ಬ್ಯೂಟಿ ಸೀಕ್ರೆಟ್ಸ್ (Tamannaah Bhatia's Beauty Secrets)ತಿಳಿದುಕೊಳ್ಳಲು ಬಯಸುತ್ತಾರೆ. ಹಾಗಾಗಿ ತಮನ್ನಾ ಭಾಟಿಯಾ ಬೆಳಿಗ್ಗೆ ಒಂದು ಬ್ಯೂಟಿ ಟ್ರಿಕ್ ಅನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಮುಖದ ಸೌಂದರ್ಯ ಯವ್ವನದ ಹಾಗೆ ಹೊಳೆಯುತ್ತದೆ. ಬೆಳಿಗ್ಗೆ ತಮನ್ನಾ ಮಾಡುವ ಕೆಲಸ ಏನು ಇಲ್ಲಿದೆ ನೋಡಿ..

ಯಾವ ಸಮಸ್ಯೆಗೆ ತಮನ್ನಾ ಟ್ರಿಕ್ ಅಳವಡಿಸಿಕೊಂಡಿದ್ದಾರೆ?

ತಮನ್ನಾ ಭಾಟಿಯಾ(Tamannaah Bhatia) ಅವರು ರಾತ್ರಿಯಿಡೀ ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ ಅಥವಾ ಚಿತ್ರೀಕರಣದಿಂದಾಗಿ ಕಡಿಮೆ ನಿದ್ದೆ ಮಾಡಿದಾಗ, ಅವರ ಮುಖ ಊದಿಕೊಳ್ಳುತ್ತದೆ ಎಂದು ಹೇಳಿದರು. ವಾಸ್ತವವಾಗಿ, ಕಡಿಮೆ ನಿದ್ರೆ ಅಥವಾ ನಿದ್ರೆಯಿಂದ ಎದ್ದ ನಂತರ, ಅನೇಕ ಜನರಿಗೆ ಮುಖದಲ್ಲಿ ಊತ ಅಥವಾ ಮುಖದ ಊತದ ಸಮಸ್ಯೆ ಇರುತ್ತದೆ. ಈ ಸಮಸ್ಯೆಯಿಂದಾಗಿ ಮುಖದ ಮೇಕ್ಅಪ್ ಸರಿಯಾಗಿ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದು ತಮನ್ನಾ ಹೇಳಿದ್ದಾರೆ. ಆದ್ದರಿಂದ ಮುಖದ ಊತದಿಂದ ಪರಿಹಾರವನ್ನು ಪಡೆಯುವುದು ಅವಶ್ಯಕ.

ಇದನ್ನೂ ಓದಿ : Benefits of Garlic : ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ 'ಬೆಳ್ಳುಳ್ಳಿ' : ಇದನ್ನು ಈ ರೀತಿ ಸೇವಿಸಬೇಕು!

ಊದಿಕೊಂಡ ಮುಖಕ್ಕೆ ಈ ಟ್ರಿಕ್ ಅನುಸರಿಸಿ?

ಇದಕ್ಕೆ ತಮನ್ನಾ ಭಾಟಿಯಾ ಒಂದು ದೊಡ್ಡ ಪಾತ್ರೆಯಲ್ಲಿ ಬಹಳಷ್ಟು ಐಸ್ ಕ್ಯೂಬ್‌(Ice Qube) ಮತ್ತು ನೀರನ್ನು  ತುಂಬಿಸಿ ನಂತರ, ನಿಧಾನವಾಗಿ ನಿಮ್ಮ ಮುಖವನ್ನು ನೀರಿನ ಮೇಲೆ ಇರಿಸಿ. ಮೊದಲು ಮೂಗು ಮತ್ತು ಬಾಯಿಯನ್ನು ನೀರಿನ ಅಡಿಯಲ್ಲಿ ಇರಿಸಿ ನಂತರ ಮುಖದ ಎರಡೂ ಬದಿಗಳನ್ನು ನೀರಿನ ಮೇಲೆ ಇರಿಸಿ. ಸ್ವಲ್ಪ ಸಮಯದವರೆಗೆ ಈ ರೀತಿ ಮಾಡಿ. ಇದರಿಂದ ಮುಖದ ಮೊಡವೆ, ಮುಖದ ಊತ ಅಥವಾ ಮುಖದ ಊತದ ಸಮಸ್ಯೆ ದೂರವಾಗುತ್ತದೆ. ಇದಲ್ಲದೆ ನೀವು ಫ್ರೆಶ್ ಮುಖವನ್ನು ಪಡೆಯುತ್ತೀರಿ.

ಮುಖದ ಮೇಲೆ ಐಸ್ ಅಥವಾ ಐಸ್ ನೀರನ್ನು ಬಳಸುವ ಮುನ್ನ ನೆನಪಿರಲಿ

ನೀವು ಮುಖಕ್ಕೆ ಐಸ್ ಬಳಸುತ್ತಿದ್ದರೆ ಅಥವಾ ಐಸ್ ಬೌಲ್‌ನಲ್ಲಿ ಮುಖ ಇಡುವ ಮುನ್ನ  ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ಇದನ್ನೂ ಓದಿ : Daily Health Tips : ರಾತ್ರಿ ನೆನೆಸಿದ ಈ 5 ಆಹಾರಗಳನ್ನ ಬೆಳಗ್ಗೆ ಸೇವಿಸಿ : ಇದರಿಂದ ನಿಮ್ಮ ಬಳಿ ಯಾವ ರೋಗವು ಸುಳಿಯುವುದಿಲ್ಲ 

1. ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.
2. ನೀವು ಮುಖಕ್ಕೆ ಐಸ್ ಕ್ಯೂಬ್‌ಗಳನ್ನು ಹಚ್ಚುತ್ತಿದ್ದರೆ ಅದನ್ನು ತೆಳುವಾದ ಮತ್ತು ಹತ್ತಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. 
3. ನಿಮ್ಮ ಮುಖವನ್ನು ಐಸ್ ಬಟ್ಟಲಿನಲ್ಲಿ ಅದ್ದುವಾಗ ನಿಮ್ಮ ಮುಖವನ್ನು ಹೆಚ್ಚು ಆಳಕ್ಕೆ ಇಡಬೇಡಿ.
4. ಐಸ್ ಅಥವಾ ಐಸ್ ನೀರಿನೊಂದಿಗೆ ಮುಖವನ್ನು ಒಂದೇ ಸ್ಥಳದಲ್ಲಿ ದೀರ್ಘಕಾಲ ಇಟ್ಟುಕೊಳ್ಳಬೇಡಿ.
5. ಐಸ್ ಬೌಲ್ ಅನ್ನು 5 ನಿಮಿಷಗಳಿಗಿಂತ ಹೆಚ್ಚು ಬಳಸಬೇಡಿ. ಇದು ಐಸ್ ಬರ್ನ್ ಗೆ ಕಾರಣವಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News