Diabetes Control Tips: ತಪ್ಪು ಆಹಾರ ಪದ್ಧತಿ, ನಿಷ್ಕ್ರಿಯ ಜೀವನಶೈಲಿ ಮತ್ತು ಆನುವಂಶಿಕ ಕಾರಣಗಳಿಂದ ಇಂದು ನಮ್ಮ ದೇಶದಲ್ಲಿ ಮಧುಮೇಹ ವೇಗವಾಗಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಹುತೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಮಧುಮೇಹ ಪ್ರಕರಣಗಳು ಭಾರತದಲ್ಲಿ ಕಾಣಿಸಿಕೊಂಡರೆ ಅತಿಶಯೋಕ್ತಿ ಅಲ್ಲ. ಹೆಚ್ಚಿನ ಜನರು ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿನ ಅಡಚಣೆಗಳಿಂದ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ - ಒಂದು ಟೈಪ್ 1 ಮಧುಮೇಹ ಮತ್ತು ಇನ್ನೊಂದು ಟೈಪ್ 2 ಮಧುಮೇಹ. ಮಧುಮೇಹದ ಲಕ್ಷಣಗಳು ಕಾಣಿಸಿಕೊಂಡಾಗ, ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು ಪ್ರಯೋಜನಕಾರಿ ಸಾಬೀತಾಗುತ್ತದೆ. ಈ ರೋಗದಲ್ಲಿ ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮೊಳಕೆಯೊಡೆದ ಗೋಧಿಯ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹದಲ್ಲಿ ಮೊಳಕೆಯೊಡೆದ ಗೋಧಿಯನ್ನು ತಿನ್ನುವ ಪ್ರಯೋಜನಗಳು ಮತ್ತು ಸರಿಯಾದ ಮಾರ್ಗ ಯಾವುದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ (Health News In Kannada)
ಮಧುಮೇಹದಲ್ಲಿ ಮೊಳಕೆಯೊಡೆದ ಗೋಧಿಯನ್ನು ತಿನ್ನುವ ಪ್ರಯೋಜನಗಳು (how to eat sprouted wheat to control diabetes )
ಮೊಳಕೆಯೊಡೆದ ಗೋಧಿಯ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದನ್ನು ನಿಯಮಿತ ಸೇವನೆ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಮತ್ತು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ‘ಮೊಳಕೆಯೊಡೆದ ಗೋಧಿಯಲ್ಲಿ ಪ್ರೊಟೀನ್, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ಗಳಲ್ಲದೆ ಹಲವು ಅಗತ್ಯ ಖನಿಜಾಂಶಗಳಿದ್ದು, ಮಧುಮೇಹವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.ಇದರ ಸೇವನೆಯು ತೂಕ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ಅವುಗಳಿಂದ ಉಂಟಾಗುವ ಹಾನಿಯನ್ನು ನಡೆಯುತ್ತದೆ.
ಮೊಳಕೆಯೊಡೆದ ಗೋಧಿ ಸೇವನೆಯ ಆರೋಗ್ಯ ಪ್ರಯೋಜನಗಳು(sprouted wheat benefits for diabetes patients)
1. ಮಧುಮೇಹ ನಿರ್ವಹಣೆಯಲ್ಲಿ ಸಹಕಾರಿ (sprouted wheat for diabetes)
ಮೊಳಕೆಯೊಡೆದ ಗೋಧಿಯಲ್ಲಿ ಹೆಚ್ಚಿನ ಪ್ರೋಟೀನ್, ಉತ್ತಮ ಪ್ರಮಾಣದ ಫೈಬರ್, ವಿಟಮಿನ್ ಮತ್ತು ಖನಿಜಗಳಿವೆ. ಇದರಲ್ಲಿರುವ ಫೈಬರ್ ದೇಹದಲ್ಲಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಪಡಿಸಲು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
2. ಜೀವಸತ್ವಗಳು ಮತ್ತು ಖನಿಜಗಳ ಆಗರ (health benefits of sprouted wheat )
ಮೊಳಕೆಯೊಡೆದ ಗೋಧಿಯು ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಪೋಷಕಾಂಶಗಳನ್ನು ಸೇವಿಸುವುದರಿಂದ ಮಧುಮೇಹದಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
3. ಹೆಚ್ಚಿನ ಫೈಬರ್ (Sprouted wheat for cholesterol)
ಮೊಳಕೆಯೊಡೆದ ಗೋಧಿಯು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮಧುಮೇಹಿಗಳ ದೇಹದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
4. ತೂಕವನ್ನು ನಿಯಂತ್ರಿಸುತ್ತದೆ (sprouted wheat for weight loss )
ಮೊಳಕೆಯೊಡೆದ ಗೋಧಿಯ ಸೇವನೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಹೊಟ್ಟೆ ತುಂಬಿರುವ ಭಾವನೆ ನಿಮ್ಮಲ್ಲಿ ಬರುತ್ತದೆ ಮತ್ತು ನಿಮಗೆ ಮತ್ತೆ ಮತ್ತೆ ಹಸಿವಾಗುವುದಿಲ್ಲ. ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಮತ್ತು ಹೆಚ್ಚುವರಿ ಕೊಬ್ಬನ್ನು ಸುಡಲು ಇದರ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ-Tomato Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ಈ ಹಣ್ಣು ತರಕಾರಿ ಒಂದು ವರದಾನ!
ಮಧುಮೇಹದಲ್ಲಿ ಮೊಳಕೆಯೊಡೆದ ಗೋಧಿಯನ್ನು ಹೇಗೆ ಸೇವಿಸಬೇಕು? (How to eat sprouted wheat)
ಮಧುಮೇಹಿಗಳು ಮೊಳಕೆಯೊಡೆದ ಗೋಧಿಯನ್ನು ಪ್ರತಿದಿನ ಬೆಳಗ್ಗೆ ಸೇವಿಸಬೇಕು. ಇದನ್ನು ಮಾಡಲು, ಗೋಧಿಯನ್ನು ನೀರಿನಲ್ಲಿ ನೆನೆಸಿ ಮತ್ತು ಮರುದಿನ ಅದನ್ನು ಫಿಲ್ಟರ್ ಮಾಡಿ ಮತ್ತು ಹತ್ತಿ ಬಟ್ಟೆಯ ಸಹಾಯದಿಂದ ಕಟ್ಟಿ ಪಕ್ಕಕ್ಕೆ ಇರಿಸಿ. ಗೋಧಿ ಮೊಳಕೆಯೊಡೆದಾಗ, ಅದನ್ನು ಸೇವಿಸಿ. ಬೆಳಗ್ಗೆ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆ, ದೌರ್ಬಲ್ಯ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ-Bad Cholesterol ವಿರುದ್ಧ ಹೋರಾಡುವ ಶಕ್ತಿ ನೀಡುತ್ತವೆ ಈ ವಿಟಮಿನ್ ಡಿ ಯುಕ್ತ ಆಹಾರಗಳು!
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಲೇಖನ ಕೇವಲ ನಿಮ್ಮ ಮಾಹಿತಿಯಾಗಿ ಮಾತ್ರ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ನಿಮಗೆ ಯಾವುದೇ ರೀತಿಯ ಹೂಡಿಕೆಯ ಸಲಹೆಯನ್ನು ನೀಡುವುದಿಲ್ಲ ಮತ್ತು ಅದರಿಂದ ಸಿಗುವ ಲಾಭ ನಷ್ಟದ ಹೊಣೆಯನ್ನು ಕೂಡ ಹೊರುವುದಿಲ್ಲ. ಹಣ ಹೂಡಿಕೆ ಮಾಡುವ ಮುನ್ನ ಒಮ್ಮೆ ವಿಷಯ ತಜ್ಞರನ್ನು ಸಂಪರ್ಕಿಸಿ ಅವರಿಂದ ಸಲಹೆಗಳನ್ನು ಪಡೆದುಕೊಳ್ಳಲು ಸೂಚಿಸಲಾಗುತ್ತದೆ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ