ಮೊಸರು ತಿನ್ನುವುದರಿಂದ ಸಿಗುತ್ತೆ ಈ 5 ಅದ್ಭುತ ಪ್ರಯೋಜನಗಳು

ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ನಿಮಗೆ ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು.

Written by - Yashaswini V | Last Updated : Feb 13, 2020, 01:42 PM IST
ಮೊಸರು ತಿನ್ನುವುದರಿಂದ ಸಿಗುತ್ತೆ ಈ 5 ಅದ್ಭುತ ಪ್ರಯೋಜನಗಳು title=

ಬೆಂಗಳೂರು: ನೀವು ಯಾವುದಾದರೂ ಶುಭ ಕಾರ್ಯ ಅಥವಾ ಪ್ರಯಾಣಕ್ಕೆ ಹೊರಟಾಗಲೆಲ್ಲಾ ನೀವು ಖಂಡಿತವಾಗಿಯೂ ಒಂದು ಚಮಚ ಮೊಸರು ತಿಂದು ಅಥವಾ ಒಂದು ಲೋಟ ಮಜ್ಜಿಗೆ ಕುಡಿದು ಹೊರಡಿ. ಪ್ರತಿದಿನ ಒಂದು ಬಟ್ಟಲು ಮೊಸರನ್ನು ತಿನ್ನುವಂತೆಯೇ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಮೊಸರು ಹಾಲಿನೊಂದಿಗೆ ತ್ವರಿತವಾಗಿ ಜೀರ್ಣವಾಗುತ್ತದೆ, ಏಕೆಂದರೆ ಇದರಲ್ಲಿ ಕೆಲವು ಪ್ರಮುಖ ರಾಸಾಯನಿಕ ಪದಾರ್ಥಗಳಿವೆ. ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ನಿಮಗೆ ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು. ಮೊಸರು ತಿನ್ನುವುದರ ಪ್ರಯೋಜನಗಳ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ...

ಮೊಸರಿನಲ್ಲಿರುವ ಪೋಷಕಾಂಶಗಳು:
ಮೊಸರಿನಲ್ಲಿ ಕ್ಯಾಲ್ಸಿಯಂ, ರಿಬೋಫ್ಲಾವಿನ್, ಪ್ರೋಟೀನ್, ವಿಟಮಿನ್ ಬಿ ಇತ್ಯಾದಿ ಪೋಷಕಾಂಶಗಳಿವೆ. ನೀವು ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢವಾಗಿಡಲು ಬಯಸಿದರೆ, ಖಂಡಿತವಾಗಿಯೂ ಮೊಸರು ತಿನ್ನಿರಿ. ಮೊಸರು ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ.

1.  ನಿಮ್ಮ ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ:
ಮೊಸರು ತಿನ್ನುವುದರಿಂದ, ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ, ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಇದು ಸಹಾಯಕ. ನೀವು ಕಡಿಮೆ ಹಸಿವನ್ನು ಅನುಭವಿಸಿದರೂ ಅದನ್ನು ಸೇವಿಸಬಹುದು.

2. ಹೊಟ್ಟೆಯನ್ನು ತಂಪಾಗಿಡಲು:
ಬೇಸಿಗೆ ಕಾಲದಲ್ಲಿ ಕಡೆದ ಮಜ್ಜಿಗೆಯನ್ನು ಸೇವಿಸಬೇಕು. ಇದು ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಹೊಟ್ಟೆಯ ಶಾಖವನ್ನು ಶಾಂತಗೊಳಿಸುತ್ತದೆ. ನೀವು ಮೊಸರನ್ನು ಅನ್ನದೊಂದಿಗೆ ಬೆರೆಸಿ ತಿನ್ನಬಹುದು. ಇದು ಹೊಟ್ಟೆಯನ್ನು ಆರೋಗ್ಯವಾಗಿರಿಸುತ್ತದೆ, ಅತಿಸಾರದ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

3. ಹೃದಯವನ್ನು ಆರೋಗ್ಯವಾಗಿಡಿ:
ಮೊಸರು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ. ಹೀಗಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮೊಸರು ನಮ್ಮನ್ನು ರಕ್ಷಿಸುತ್ತದೆ.

4. ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ:
ಮೊಸರಿನಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿದೆ ಮತ್ತು ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಇದು ಮೂಳೆಗಳ ಬೆಳವಣಿಗೆಗೂ ಕಾರಣವಾಗುತ್ತದೆ. ಹಲ್ಲು, ಉಗುರುಗಳು, ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತದೆ. ನೀವು ನಿಯಮಿತವಾಗಿ ಮೊಸರು ಸೇವಿಸುವುದರಿಂದ ಕೀಲು ನೋವಿನಿಂದ ದೂರವಿರಬಹುದು.

5. ಮೂಲವ್ಯಾಧಿ ನಿವಾರಣೆ:
ಆಗಾಗ್ಗೆ ಕೆಲವರು ಮೂಲವ್ಯಾಧಿಯಿಂದ ಬಳಲುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಲ ವಿಸರ್ಜಿಸುವಾಗ ರಕ್ತಸ್ರಾವ, ತಿರುಳಿನ ಹಾದಿಯಲ್ಲಿ ಊತ, ನೋವು ಉಂಟಾಗುತ್ತದೆ. ನೀವು ಮಜ್ಜಿಗೆಯನ್ನು ಸೇವಿಸಿದರೆ ಇದರಿಂದ ಪರಿಹಾರ ಪಡೆಯಬಹುದು.

Trending News