ಬೆಂಗಳೂರು : ತೂಕ ಇಳಿಸಿಕೊಳ್ಳಲು ಬಯಸುವಿರಾ? ಈ ಪ್ರಶ್ನೆಗೆ ನಿಮ್ಮ ಉತ್ತರ 'ಹೌದು' ಎಂದಾದರೆ, ದೈಹಿಕ ಚಟುವಟಿಕೆಯ ಜೊತೆಗೆ ಆರೋಗ್ಯಕರ ಆಹಾರವು ಕೂಡಾ ಇದಕ್ಕೆ ಬಹಳ ಮುಖ್ಯ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ದೊಡ್ಡ ಸಮಸ್ಯೆಯಾಗಿದೆ. ಜನರು ತೂಕ ಇಳಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ಏನೇ ಮಾಡಿದರೂ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ತೂಕವನ್ನು ಕಳೆದುಕೊಳ್ಳುವ ಸರಳ ಮತ್ತು ನೈಸರ್ಗಿಕ ಮಾರ್ಗವನ್ನು ಈ ಲೇಖನದಲ್ಲಿ ನೋಡಬಹುದು.
ತೂಕ ನಷ್ಟಕ್ಕೆ ಮೆಂತ್ಯೆ :
ತೂಕ ಇಳಿಸಿಕೊಳ್ಳಲು ಮೆಂತ್ಯೆಯನ್ನು ಆಹಾರದಲ್ಲಿ ಸೇರಿಸಬಹುದು. ಮೆಂತ್ಯೆ ಬೀಜಗಳನ್ನು ಶತಮಾನಗಳಿಂದಲೂ ಔಷಧಿಯಾಗಿ ಬಳಸಲಾಗುತ್ತಿದೆ. ಇದು ಫೈಬರ್, ಕಬ್ಬಿಣ, ವಿಟಮಿನ್ ಎ ಮತ್ತು ಡಿಯಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಮೆಂತ್ಯೆ ಬೀಜಗಳನ್ನು ಸರಿಯಾಗಿ ಸೇವಿಸಿದರೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಬಾಳೆಹಣ್ಣು ಕೂಡ ಆರೋಗ್ಯಕ್ಕೆ ಹಾನಿಕಾರಕವೇ?
ತೂಕ ನಷ್ಟಕ್ಕೆ ಮೆಂತ್ಯೆ ಹೇಗೆ ಉಪಯುಕ್ತ ? :
ಆಯುರ್ವೇದದ ಪ್ರಕಾರ, ಮೆಂತ್ಯೆ ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಮೆಂತ್ಯೆ ಬೀಜಗಳಲ್ಲಿ ಕರಗದ ಫೈಬರ್ ಸಮೃದ್ಧವಾಗಿವೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ದೇಹದಿಂದ ವಿಷವನ್ನು ಹೊರಹಾಕಲು ಕೂಡಾ ಮೆಂತ್ಯೆ ಬೀಜ ಸಹಾಯ ಮಾಡುತ್ತದೆ. ಈ ಸೂಪರ್ಫುಡ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ವೇಗಗೊಳಿಸುತ್ತದೆ. ಮೆಂತ್ಯೆಯಲ್ಲಿರುವ ಪೋಷಕಾಂಶಗಳು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ.
ತೂಕ ನಷ್ಟಕ್ಕೆ ಮೆಂತ್ಯೆ ಬೀಜದ ನೀರು :
ಆಹಾರದಲ್ಲಿ ಮೆಂತ್ಯೆ ನೀರನ್ನು ಸೇವಿಸುವುದು ತೂಕ ನಷ್ಟಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ರಾತ್ರಿ ಒಂದು ಚಮಚ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿಡಿ. ಅಥವಾ ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ಕುದಿಸಬಹುದು. ನಂತರ ಇದನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಇದನ್ನೂ ಓದಿ : ಈ ಹುಲ್ಲಿನ ರಸದಿಂದ ಒಂದೇ ವಾರದಲ್ಲಿ ಇಳಿಯುತ್ತೆ ತೂಕ
ಮೆಂತ್ಯೆ ಚಹಾ ತಯಾರಿಸುವ ವಿಧಾನ :
- ಮೆಂತ್ಯೆ ಚಹಾವನ್ನು ತಯಾರಿಸಲು, ಒಂದು ಟೀ ಚಮಚ ಮೆಂತ್ಯೆ ಬೀಜಗಳು, ಒಂದು ಚಿಟಿಕೆ ಚಕ್ಕೆ ಮತ್ತು ಶುಂಠಿ ಬೇಕಾಗುತ್ತದೆ.
- ನೀರಿಗೆ ಮೇಲೆ ಹೇಳಿದ ಮೂರು ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.
- ಈ ನೀರನ್ನು 5 ನಿಮಿಷಗಳವರೆಗೆ ಕುದಿಸಿದರೆ ಸಾಕು. ಮೆಂತ್ಯೆ ಚಹಾ ತಯಾರಾಗುತ್ತದೆ.
- ಈ ಚಹಾ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
- ಶುಂಠಿ ಮತ್ತು ಚಕ್ಕೆ ಎರಡರಲ್ಲೂ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.
- ಇವೆರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೊಳಕೆಯೊಡೆದ ಮೆಂತ್ಯೆ ಬೀಜಗಳನ್ನು ಸೇವಿಸಬಹುದು :
- ಎರಡು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ನಂತರ ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಮುಚ್ಚಿಡಿ.
- ಬೆಳಿಗ್ಗೆ ಈ ಮೊಳಕೆಯೊಡೆದ ಮೆಂತ್ಯೆ ಬೀಜಗಳನ್ನು ತಿನ್ನಿರಿ.
- ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
- ಇದಲ್ಲದೆ, ಅವುಗಳನ್ನು ಊಟದ ನಡುವೆಯೂ ಸೇವಿಸಬಹುದು.
ಇದನ್ನೂ ಓದಿ : ಮಧುಮೇಹಿಗಳು ಬೆಲ್ಲ ತಿನ್ನಬಹುದೇ...? ತಿಳಿದುಕೊಳ್ಳಲೇಬೇಕಾದ ವಿಚಾರವಿದು
ಮೆಂತ್ಯೆ ಮತ್ತು ಜೇನುತುಪ್ಪದ ಪೇಸ್ಟ್ :
- ಇದಕ್ಕೆ ಮೆಂತ್ಯೆಯನ್ನು ಪುಡಿಮಾಡಿ.
- ಅದರ ನಂತರ, ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ.
- ಇದಲ್ಲದೆ, ಈ ಮೆಂತ್ಯೆ ಪುಡಿಯನ್ನು ನೀರಿನಲ್ಲಿ ಕುದಿಸಬಹುದು.
- ಅದರ ನಂತರ, ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಮತ್ತು ಹರ್ಬಲ್ ಟೀಯಂತೆ ಸೇವಿಸಬಹುದು.
- ಜೇನುತುಪ್ಪದಲ್ಲಿ ವಿಟಮಿನ್ ಬಿ, ಕ್ಯಾಲ್ಸಿಯಂ, ಸತು, ಕಬ್ಬಿಣ ಮತ್ತು ತಾಮ್ರವಿದೆ. ಇವು ದೇಹಕ್ಕೆ ತುಂಬಾ ಪ್ರಯೋಜನಕಾರಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.