Health Tips: ತೂಕವನ್ನು ಇಳಿಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಫಿಟ್ನೆಸ್ ಅನ್ನು ರಕ್ಷಿಸಿಕೊಳ್ಳಲು, ನೀವು ಅನೇಕ ವಿಧಾನಗಳನ್ನು ಅಥವಾ ಫಿಟ್ನೆಸ್ ತಂತ್ರಗಳನ್ನು ಅನುಸರಿಸುತ್ತೀರಿ. ವಿಗನ್ ಡಯಟ್ ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳುವ ಜನರಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ವೀಗನ್ ಡಯಟ್ ಬಗ್ಗೆ ನೀವು ಎಲ್ಲೋ ಕೇಳಿರಬೇಕು, ಆದರೆ ವೀಗನ್ ಚಹಾದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಸಾಮಾನ್ಯ ಚಹಾಕ್ಕೆ ಹೋಲಿಸಿದರೆ ವೀಗನ್ ಚಹಾ ವಿಭಿನ್ನವಾಗಿದೆ ಮತ್ತು ಆರೋಗ್ಯಕ್ಕೆ ಒಳ್ಳೆಯದಾಗಿದೆ. ತೂಕ ಇಳಿಕೆಯ ಜೊತೆಗೆ ಹೃದಯದ ಆರೋಗ್ಯಕ್ಕೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸಲು ಪ್ರಾಣಿಗಳ ಹಾಲಿಗೆ ಬದಲಾಗಿ ಸಸ್ಯ ಆಧಾರಿತ ಹಾಲನ್ನು (ಸೋಯಾ ಅಥವಾ ಬಾದಾಮಿ ಹಾಲು) ಬಳಸಲಾಗುತ್ತದೆ. ಹಾಗಾದರೆ ವೀಗನ್ ಚಹಾವನ್ನು ಮಾಡುವ ಸರಿಯಾದ ವಿಧಾನ ಯಾವುದು ಮತ್ತು ಆರೋಗ್ಯಕ್ಕೆ ಅದರ ಪ್ರಯೋಜನಗಳೇನು? ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
ವೀಗನ್ ಚಹಾ ಪಾಕವಿಧಾನ
ಮೊದಲಿಗೆ, ಗ್ಯಾಸ್ ಆನ್ ಮಾಡಿ ಮತ್ತು ಬಾಣಲೆಯಲ್ಲಿ ನೀರನ್ನು ಬಿಸಿ ಮಾಡಿ. ಇದಕ್ಕೆ ಚಹಾ ಎಲೆಗಳು, ಕಂದು ಸಕ್ಕರೆ ಅಥವಾ ಬೆಲ್ಲ ಸೇರಿಸಿ ಮತ್ತು ಕುದಿಸಿ. ಅದು ಕುದಿ ಬಂದ ನಂತರ ಟೀ ಮಸಾಲಾ, ಶುಂಠಿ (ತುರಿದ) ಮತ್ತು ಹಿಸುಕಿದ ಪುದೀನಾ ಎಲೆಗಳನ್ನು ಸೇರಿಸಿ. ಇದರ ನಂತರ, ಬಾದಾಮಿ ಅಥವಾ ಸೋಯಾ ಹಾಲು ಸೇರಿಸಿ ಮತ್ತು ಚಹಾವನ್ನು ನಿರಂತರವಾಗಿ ಬೆರೆಸಿ. ಈಗ ಚಹಾವನ್ನು 1-2 ನಿಮಿಷಗಳ ಕಾಲ ಗ್ಯಾಸ್ ಜ್ವಾಲೆಯನ್ನು ಕಡಿಮೆ ಮಾಡಿ ಬಿಸಿ ಮಾಡಿ. ಈಗ ನೀವು ಅದನ್ನು ಫಿಲ್ಟರ್ ಮಾಡಿ ಮತ್ತು ಸೇವಿಸಿ.
ಇದನ್ನೂ ಓದಿ-ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ ಮನೆಯಲ್ಲಿನ ಈ ಸಾಂಬಾರ ಪದಾರ್ಥ
ವೀಗನ್ ಚಹಾದ ಪ್ರಯೋಜನಗಳು
>> ವೀಗನ್ ಟೀ ಬೊಜ್ಜು ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
>> ವೀಗನ್ ಟೀ ಹಾಲಿನ ಚಹಾಕ್ಕಿಂತ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ, ಇದರಿಂದಾಗಿ ವ್ಯಕ್ತಿಯ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿದೆ.
ಇದನ್ನೂ ಓದಿ-ನೈಸರ್ಗಿಕ ಪದ್ಧತಿಯಿಂದ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೇ? ಇಂದಿನಿಂದಲೇ ಈ ಸೂಪ್ ಸೇವನೆ ಆರಂಭಿಸಿ
>> ವೀಗನ್ ಟೀ ನಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
>> ಮಧುಮೇಹ ರೋಗಿಗಳಿಗೆ ವೀಗನ್ ಟೀ ಒಂದು ಉತ್ತಮ ಆಯ್ಕೆಯಾಗಿದೆ. ಇದು ಅಧಿಕ ರಕ್ತದೊತ್ತಡವನ್ನೂ ಸಹ ಕಡಿಮೆ ಮಾಡುತ್ತದೆ.
ಇದನ್ನೂ ಓದಿ-ಪುರುಷ ಅಥವಾ ಮಹಿಳೆ, ಯಾರಿಗೆ ಕ್ಯಾನ್ಸರ್ ಅಪಾಯ ಹೆಚ್ಚು?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.