ಎಲೆ ಕೋಸು ಹೂ ಕೋಸುಗಳಲ್ಲಿ ಅಡಗಿರುವ ಹುಳುಗಳನ್ನು ಚಿಟಕಿಯಲ್ಲಿ ಹೊರತೆಗೆಯಲು ಹೀಗೆ ಮಾಡಿ

ಕೀಟಗಳು ತರಕಾರಿಗಳನ್ನು ಒಳಗಿನಿಂದ ಕೊರೆಯುವ ಮೂಲಕ ಟೊಳ್ಳಾಗಿಸುತ್ತವೆ.  ತರಕಾರಿಗಳಲ್ಲಿ ಅಡಗಿರುವ ಕೀಟಗಳನ್ನು ಸುಲಭವಾಗಿ ಹೊರ ತೆಗೆಯಬಹುದು. 

Written by - Ranjitha R K | Last Updated : Jan 24, 2023, 05:01 PM IST
  • ಹೂಕೋಸಿನಲ್ಲಿರುವ ಹುಳುಗಳನ್ನು ತೆಗೆಯುವುದು ಹೇಗೆ?
  • ಸೊಪ್ಪುಗಳಲ್ಲಿರುವ ಹುಳುಗಳನ್ನು ಹೊರ ತೆಗೆಯುವುದು ಹೇಗೆ ?
  • ಎಲೆಕೋಸಿನಲ್ಲಿರುವ ಹುಳುಗಳನ್ನು ಹೊರ ತೆಗೆಯುವುದು ಹೇಗೆ ?
ಎಲೆ ಕೋಸು ಹೂ ಕೋಸುಗಳಲ್ಲಿ ಅಡಗಿರುವ ಹುಳುಗಳನ್ನು ಚಿಟಕಿಯಲ್ಲಿ  ಹೊರತೆಗೆಯಲು ಹೀಗೆ ಮಾಡಿ  title=

ಬೆಂಗಳೂರು : ಎಲೆಕೋಸು, ಹೂಕೋಸು, ಸೊಪ್ಪು, ಬ್ರೊಕೊಲಿ ಮುಂತಾದ ತರಕಾರಿಗಳನ್ನು ಕತ್ತರಿಸುವಾಗ, ಅವುಗಳೊಳಗೆ ಅನೇಕ ಸಣ್ಣ ಕೀಟಗಳು ಕಂಡುಬರುತ್ತವೆ.  ಈ ಕೀಟಗಳು ತರಕಾರಿಗಳನ್ನು ಒಳಗಿನಿಂದ ಕೊರೆಯುವ ಮೂಲಕ ಟೊಳ್ಳಾಗಿಸುತ್ತವೆ.  ತರಕಾರಿಗಳಲ್ಲಿ ಅಡಗಿರುವ ಕೀಟಗಳನ್ನು ಸುಲಭವಾಗಿ ಹೊರ ತೆಗೆಯಬಹುದು. 

ಹೂಕೋಸಿನಲ್ಲಿರುವ ಹುಳುಗಳನ್ನು ತೆಗೆಯುವುದು ಹೇಗೆ? :
ಎಲೆಕೋಸು ಅಥವಾ ಹೂಕೋಸುಗಳಂತಹ ತರಕಾರಿಗಳಲ್ಲಿರುವ ಕೀಟಗಳು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಇದಕ್ಕಾಗಿಯೇ ತರಕಾರಿಗಳನ್ನು  ಬಳಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಹೇಳಲಾಗುತ್ತದೆ. ಹೂಕೋಸಿನಲ್ಲಿ ಅತಿ ಹೆಚ್ಚು ಕೀಟಗಳಿರುತ್ತವೆ. ಇವುಗಳನ್ನು ಹೊರ ತೆಗೆಯಲು ಎಲೆಕೋಸನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಹಾಕಿ. ಆ ಪಾತ್ರೆಗೆ ನೀರು ಮತ್ತು ಒಂದು ಚಮಚ ಉಪ್ಪು ಸೇರಿಸಿ ಸ್ವಲ್ಪ ಸಮಯ ಬಿಡಿ. ಈಗ ಹೀ ಕೊಸಿನಲ್ಲಿರುವ ಹುಳಗಳು ಹೊರ ಬರಲು ಆರಂಭಿಸುತ್ತವೆ. ಇನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ಅರಿಶಿನ ಪುಡಿಯನ್ನು ಬೆರೆಸಿ ಹೂಕೋಸು ಹಾಕಿಟ್ಟರೂ ಕೀಟಗಳು ತಾನಾಗಿಯೇ ಹೊರಬರುತ್ತವೆ.

ಇದನ್ನೂ ಓದಿ : ಋತುಚಕ್ರದ ಸಮಯದಲ್ಲಿ ನೀವೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದಿರಾ.? ಇಲ್ಲಿವೆ ಸುಲಭ ಪರಿಹಾರ

ಸೊಪ್ಪುಗಳಲ್ಲಿರುವ ಹುಳುಗಳನ್ನು  ಹೊರ ತೆಗೆಯುವುದು ಹೇಗೆ ? :  
ಸೊಪ್ಪು ತಿನ್ನಲು ಬಲು ರುಚಿ, ಆದರೆ ಅದನ್ನು ಕಟ್ ಮಾಡುವುದು ಮತ್ತಿಉ ಕ್ಲೀನ್ ಮಾಡುವುದು ಬಹಳ ಕಷ್ಟದ ಕೆಲಸ.  ಸೊಪ್ಪಿನಲ್ಲಿ ಅಡಗಿರುವ ಸಣ್ಣ ಕೀಟಗಳು ಸುಲಭವಾಗಿ ಗೋಚರಿಸುವುದಿಲ್ಲ.  ಸೊಪ್ಪನ್ನು ಕಟ್ ಮಾಡುವಾಗ ಅದನ್ನು ಉಪ್ಪು ನೀರಿನಲ್ಲಿ ಹಾಕಿ10-15 ನಿಮಿಷಗಳ ಕಾಲ ಹಾಗೆಯೇ ಬಿಡಿ.  ನಂತರ ಸರಳ ನೀರಿನಿಂದ ಎರಡು ಮೂರು ಬಾರಿ ತೊಳೆಯಿರಿ. 

ಎಲೆಕೋಸಿನಲ್ಲಿರುವ ಹುಳುಗಳನ್ನು ಹೊರ ತೆಗೆಯುವುದು ಹೇಗೆ ? :  
ಎಲೆಕೋಸಿನಲ್ಲಿರುವ ಹುಳಗಳು ಆರೋಗ್ಯಕ್ಕೆ ಬಹಳ ಹಾನಿಕಾರಕ ಎನ್ನುವುದು ಸಂಶೋಧನೆಯಲ್ಲಿ ಪತ್ತೆಯಾಗಿವೆ. ಇದು ಮೆದುಳಿಗೆ ತಲುಪುವ ಮೂಲಕ ಆರೋಗ್ಯವನ್ನು ಹಾನಿ ಮಾಡುತ್ತದೆ. ಎಲೆಕೋಸು ಕತ್ತರಿಸುವಾಗ, ಅದರ ಮೇಲಿನ ಎರಡು ಪದರಗಳನ್ನು ತೆಗೆದುಹಾಕಿ. ನಂತರ ಅದನ್ನು  ಕತ್ತರಿಸಿ ಅರಿಶಿನ ಹಾಕಿರುವ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತಿನವರೆಗೆ ಹಾಗೆಯೇ ಬಿಡಿ. 15 ನಿಮಿಷಗಳ ನಂತರ, ಅದನ್ನು ಮತ್ತೊಂದು ಪಾತ್ರೆಗೆ ಹಾಕಿ ಸರಳ ನೀರಿನಲ್ಲಿ ತೊಳೆಯಿರಿ. 

ಇದನ್ನೂ ಓದಿ : ಹೆಚ್ಚಾಗಿ ಮೀನು ತಿನ್ನುವವರೇ ಎಚ್ಚರ! ಕ್ಯಾನ್ಸರ್ ಮತ್ತು ಬ್ರೈನ್ ಸ್ಟ್ರೋಕ್ ಸಾಧ್ಯತೆ!

 

(ಸೂಚನೆ :ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News