ನವದೆಹಲಿ : Diet For Heart Health : ಹೃದಯವು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಒತ್ತಡದ ಜೀವನ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ನಾವು ಹೃದಯದ ಆರೋಗ್ಯದ ಬಗ್ಗೆ ಅಸಡ್ಡೆ ತೋರುವುದೇ ಹೆಚ್ಚು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ಅನಾರೋಗ್ಯಕರ ಆಹಾರ ಮತ್ತು ಒತ್ತಡ ನಮ್ಮ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ದಿನದಿಂದ ದಿನಕ್ಕೆ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೃದಯದ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಅತ್ಯಂತ ಮುಖ್ಯವಾಗಿರುತ್ತದೆ. ನಮ್ಮ ಆಹಾರವು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ್ದರೆ, ನಾವು ಹೃದಯವನ್ನು ಅನೇಕ ರೋಗಗಳ ಅಪಾಯದಿಂದ ರಕ್ಷಿಸಬಹುದು.
ಹೃದಯವನ್ನು ಆರೋಗ್ಯವಾಗಿಡಲು ಈ ವಸ್ತುಗಳು ಸಹಾಯಕವಾಗಿವೆ:
1. ಹಸಿರು ತರಕಾರಿಗಳು: ಹಸಿರು ತರಕಾರಿಗಳು (Green vegies) ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಹೃದಯವನ್ನು ಆರೋಗ್ಯವಾಗಿಡುವಲ್ಲಿಯೂ ತರಕಾರಿಗಳು ಪ್ರಮುಖ ಪಾತ್ರವಹಿಸುತ್ತವೆ. ಹಸಿರು ತರಕಾರಿಗಳಲ್ಲಿ, ಬೆಂಡೆಕಾಯಿ, ಬದನೆ, ಬೀನ್ಸ್ ಅನ್ನು ಹೆಚ್ಚು ಬಳಸಬೇಕು. ಅವು ಕೊಲೆಸ್ಟ್ರಾಲ್ (cholesterol) ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Heart attack : ಶರೀರದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಖಂಡಿತಾ ನಿರ್ಲಕ್ಷ್ಯ ಬೇಡ
ಡ್ರೈ ಫ್ರುಟ್ಸ್ : ಡ್ರೈ ಫ್ರುಟ್ಸ್ ಗಳು ಆರೋಗ್ಯಕ್ಕೆ (Benefits of dry fruits) ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಾಲ್ನಟ್ಸ್, ಬಾದಾಮಿಯಲ್ಲಿರುವ ಅನ್ ಸ್ಯಾಚುರೇಟೆಡ್ ಫ್ಯಾಟ್, ಫೈಬರ್ ಹೃದಯದ ಆರೋಗ್ಯವನ್ನು ವೃದ್ದಿಸುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿ (Garlic) ಹೃದಯಕ್ಕೆ ಬಹಳ ಪ್ರಯೋಜನಕಾರಿ. ಇದು ಸೋಂಕು ಮತ್ತು ಕ್ಯಾನ್ಸರ್ ಅಪಾಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಲಿಸಿನ್ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಬೆರಿಹಣ್ಣುಗಳು: ಬೆರಿ ಹಣ್ಣುಗಳನ್ನು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅದು ರಾಸ್ ಬೆರಿಸ್, ಸ್ಟ್ರಾಬೆರಿ, ಬ್ಲ್ಯಾಕ್ ಬೆರಿ , ಬ್ಲೂಬೆರಿಗಳಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ, ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Healthy Breakfast Tips : ಬೆಳಗಿನ ಉಪಾಹಾರದಲ್ಲಿ ಈ 2 ಆಹಾರಗಳನ್ನ ತಪ್ಪದೆ ಸೇವಿಸಿ, ರೋಗಗಳಿಂದ ದೂರವಿರಿ!
ಧಾನ್ಯಗಳು: ಧಾನ್ಯಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಗೋಧಿ , ಬ್ರೆಡ್, ಬೇಳೆ ಇತ್ಯಾದಿಗಳನ್ನು ತಿನ್ನುವ ಮೂಲಕ ಹೃದಯವನ್ನು ಆರೋಗ್ಯವಾಗಿಡಬಹುದು. ಜೀವಸತ್ವಗಳು, ಕಬ್ಬಿಣ ಮತ್ತು ಫೈಬರ್ ಇದರಲ್ಲಿ ಅಧಿಕವಾಗಿದ್ದು, ಇದು ಹೃದಯದ ಅಪಾಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ .
6. ಮೊಸರು: ಮೊಸರನ್ನು (Curd benefits) ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಹೃದಯವನ್ನು ಆರೋಗ್ಯವಾಗಿಡಲು, ನೀವು ಕ್ಯಾಲ್ಸಿಯಂ ಅನ್ನು ಸಹ ಬಳಸಬೇಕು, ನೀವು ಮೊಸರನ್ನು ಮೊಸರು ಬಜ್ಜಿ ಮತ್ತು ಲಸ್ಸಿ ರೂಪದಲ್ಲಿ ಬಳಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.