Diabetes Treatment : ಮಧುಮೇಹಿಗಳೇ 'ಅಧಿಕ ಸಕ್ಕರೆ ನಿಯಂತ್ರಿಸಲು' ಈ ತ್ರಿಫಲ ಚೂರ್ಣ ಆಹಾರಗಳನ್ನ ಸೇವಿಸಿ!

Written by - Channabasava A Kashinakunti | Last Updated : Sep 24, 2021, 01:27 PM IST
  • ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯ ಜನ ಮಧುಮೇಹದಿಂದ ಬಳಲುತ್ತಿದ್ದಾರೆ
  • ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತ್ರಿಫಲ
  • ನಿಯಮಿತವಾಗಿ 45 ದಿನಗಳವರೆಗೆ 5 ಗ್ರಾಂ ತ್ರಿಫಲ ಚೂರ್ಣ ಸೇವಿಸಿ
Diabetes Treatment : ಮಧುಮೇಹಿಗಳೇ 'ಅಧಿಕ ಸಕ್ಕರೆ ನಿಯಂತ್ರಿಸಲು' ಈ ತ್ರಿಫಲ ಚೂರ್ಣ ಆಹಾರಗಳನ್ನ ಸೇವಿಸಿ! title=

ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಈ ರೋಗದಲ್ಲಿ, ದೇಹದೊಳಗಿನ ಇನ್ಸುಲಿನ್ ಪ್ರಮಾಣವು ಸಾಕಾಗುವುದಿಲ್ಲ, ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಆರಂಭವಾಗುತ್ತದೆ. ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ರೋಗವು ದೀರ್ಘಕಾಲದವರೆಗೆ ಮುಂದುವರಿದರೆ ದೇಹದಲ್ಲಿನ  ಹೃದಯ, ಮೂತ್ರಪಿಂಡಗಳು ಮತ್ತು ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡಬಹುದು.

ಆದರೆ ಮಧುಮೇಹ(Diabetes)ದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ತ್ರಿಫಲ(Triphala Powder)ವು ಸಹಾಯಕವಾಗಿದೆ ಎಂಬುವುದು ನಿಮಗೆ ಗೊತ್ತಾ?. ಎನ್‌ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಯಮಿತವಾಗಿ 45 ದಿನಗಳವರೆಗೆ 5 ಗ್ರಾಂ ತ್ರಿಫಲ ಚೂರ್ಣವನ್ನು ಸೇವಿಸುವುದರಿಂದ  ರಕ್ತದಲ್ಲಿನ ಸಕ್ಕರೆಯ ಮಟ್ಟವು ಗಮನಾರ್ಹವಾಗಿ ನಿಯಂತ್ರಣದಲ್ಲಿರುವುದು ಕಂಡುಬರುತ್ತದೆ.

ಇದನ್ನೂ ಓದಿ : Ragi Health Benefits : ತೂಕ ಇಳಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ 'ರಾಗಿ', ಈ 5 ಪ್ರಚಂಡ ಪ್ರಯೋಜನಗಳ ಬಗ್ಗೆ ತಿಳಿಯಿರಿ!

ಮಧುಮೇಹವನ್ನು ನಿಯಂತ್ರಿಸಲು ತ್ರಿಫಲ ಪರಿಹಾರ

ಈಸಿ ಆಯುರ್ವೇದದ ಪ್ರಕಾರ, ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ(Sugar Control)ವನ್ನು ನಿಯಂತ್ರಿಸಲು ತ್ರಿಫಲವನ್ನು ಈ 3 ವಿಧಾನಗಳಲ್ಲಿ ಸೇವಿಸಬಹುದು. 

ಪರಿಹಾರ 1

ಮಧುಮೇಹಿ ರೋಗಿಗಳು ಪ್ರತಿದಿನ ಮಧ್ಯಾಹ್ನ ಮಜ್ಜಿಗೆಯೊಂದಿಗೆ ತ್ರಿಫಲ ಪುಡಿಯನ್ನು ಸೇವಿಸಬೇಕು. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರ ಜೊತೆಗೆ, ಜೀರ್ಣಕ್ರಿಯೆಯೂ ಸರಿಯಾಗಿರುತ್ತದೆ.

ಪರಿಹಾರ 2

ಪ್ರತಿ ರಾತ್ರಿ ಒಂದೂವರೆ ಚಮಚ ತ್ರಿಫಲ ಪುಡಿಯನ್ನು ಕಬ್ಬಿಣದ ಪಾತ್ರೆಯಲ್ಲಿ ಒಂದು ಕಪ್ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆ(Empty Stomach)ಯಲ್ಲಿ, ಈ ಪೇಸ್ಟ್‌ನಲ್ಲಿ ಜೇನುತುಪ್ಪವನ್ನು ಬೆರೆಸಿ ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಇದನ್ನೂ ಓದಿ : 

ಪರಿಹಾರ 3Adulteration in Turmeric Powder: ನೀವು ಕಲಬೆರಕೆ ಅರಿಶಿನ ತಿನ್ನುತ್ತಿದ್ದೀರಾ? ನೈಜ ಮತ್ತು ನಕಲಿ ಅರಿಶಿನವನ್ನು ಗುರುತಿಸುವುದು ಹೇಗೆ?

ತ್ರಿಫಲ ಪುಡಿಯನ್ನು ದೇಸಿ ತುಪ್ಪದೊಂದಿಗೆ ಬೆರೆಸಿ ಪ್ರತಿ ರಾತ್ರಿ ಮಲಗುವ ಮುನ್ನ ತಿನ್ನಬಹುದು. ಇದರ ನಂತರ ನೀವು ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ. ಮಧುಮೇಹ ರೋಗಿಗೆ ಈ ಪರಿಹಾರವು ತುಂಬಾ ಸಹಾಯಕವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News