Health tipes:ಸರ್ವ ರೋಗಕ್ಕೂ ಮದ್ದು ತುಳಸಿ !

Health tipes:ತುಳಸಿಯನ್ನು ಎಲ್ಲಾ ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ, ಇದನ್ನು ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆಯ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ನೈಸರ್ಗಿಕ ರೀತಿಯಲ್ಲಿ ಮಾನವ ದೇಹಕ್ಕೆ ಎಲ್ಲಾ ರೀತಿಯಿಂದ ಸಹಕರಿಸುತ್ತದೆ.

Written by - Zee Kannada News Desk | Last Updated : Feb 7, 2023, 05:18 PM IST
  • ಸರ್ವ ರೋಗಕ್ಕೂ ಮದ್ದು ತುಳಸಿ
  • ತುಳಸಿ ಎಲೆಗಳು ಮಾತ್ರವಲ್ಲಅವುಗಳ ಹೂವುಗಳೂ ಪ್ರಯೋಜನಕಾರಿಯಾಗಿದೆ
  • ಚರ್ಮದ ಕಾಂತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ
 Health tipes:ಸರ್ವ ರೋಗಕ್ಕೂ ಮದ್ದು ತುಳಸಿ ! title=

Health tipes:ತುಳಸಿಯನ್ನು ಎಲ್ಲಾ ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ, ಇದನ್ನು ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆಯ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ನೈಸರ್ಗಿಕ ರೀತಿಯಲ್ಲಿ ಮಾನವ ದೇಹಕ್ಕೆ ಎಲ್ಲಾ ರೀತಿಯಿಂದ ಸಹಕರಿಸುತ್ತದೆ.ತುಳಸಿ ಎಲೆಗಳು ಮಾತ್ರವಲ್ಲಅವುಗಳ ಹೂವುಗಳೂ ಪ್ರಯೋಜನಕಾರಿಯಾಗಿದೆ.  ತುಳಸಿಯು ಜ್ವರದಿಂದ ಹಿಡಿದು ಮೂತ್ರಪಿಂಡದ ಕಲ್ಲುಗಳವರೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 

ಹಿಂದೂ ಧರ್ಮದಲ್ಲಿ, ಪವಿತ್ರ ತುಳಸಿ ಧಾರ್ಮಿಕ ಸಂಕೇತವಾಗಿದೆ ಮತ್ತು ಉತ್ತಮ ವೈದ್ಯಕೀಯ ಪರಿಹಾರವಾಗಿದೆ.ವೈದ್ಯಕೀಯವಾಗಿ  ಇದನ್ನು ಪ್ರಾಚೀನ ಆಯುರ್ವೇದ ಆರೋಗ್ಯ ವ್ಯವಸ್ಥೆಯಲ್ಲಿ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಇದರಲ್ಲಿರುವ ಪೌಷ್ಟಿಕಾಂಶಗಳು 
 ಕಾರ್ಬೋಹೈಡ್ರೇಟ್‌ಗಳು, ಫೈಬರ್ ,ಪ್ರೋಟೀನ್,ಸೋಡಿಯಂ ,ಪೊಟ್ಯಾಸಿಯಮ್,ಮೆಗ್ನೀಸಿಯಮ್ ,ಕ್ಯಾಲ್ಸಿಯಂ ,ವಿಟಮಿನ್ ಸಿಗಳನ್ನು ಹೊಂದಿದೆ. 

ತುಳಸಿಯ ಉಪಯೋಗಗಳು:

1. ಚರ್ಮದ ಬಳಕೆಗೆ
ತುಳಸಿಯನ್ನು ಮೊಟ್ಟೆಯೊಂದಿಗೆ ಬೆರೆಸಿ ಮಿಶ್ರಣ ಮಾಡಿದರೆ ಚರ್ಮವನ್ನು ವೃಧು ವಾಗಿಸುತ್ತದೆ. ಈ ಗಿಡ ಮೂಲಿಕೆಯನ್ನು ಮೊಡವೆ, ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡಲು, ಕಪ್ಪು ಕಲೆಗಳನ್ನು  ಹೋಗಿಸಲು ಚರ್ಮದ  ಕಾಂತಿಯನ್ನು ಹೆಚ್ಚಿಸಲು  ಬಳಸಲಾಗುತ್ತದೆ. 

ಇದನ್ನೂ ಓದಿ: ಬೆಳಗಿನ ಜಾವ ಬೆಲ್ಲ ಹಾಗೂ ಕಡಲೆ ಬೀಜವನ್ನು ಸೇವಿಸುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ ..

2. ಉತ್ತಮ ಕುದಲಿಗಾಗಿ
 ತುಳಸಿಯನ್ನು ನಿಮ್ಮ ಕೂದಲಿಗೆ ಹಲವಾರು ಕಾರಣಗಳಿಗಾಗಿ ಅನ್ವಯಿಸಬಹುದು ಮತ್ತು ಅದು ನಿಮ್ಮ ಕೂದಲನ್ನು ಎಲ್ಲಾ ರೀತಿಯಲ್ಲಿ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. 
-ತುಳಸಿ ಕೂದಲು ಉದುರುವುದನ್ನು ತಡೆಯುತ್ತದೆ.
-ಕೂದಲು ಬಿಳಿಯಾಗುವುದನ್ನು ಕಡಿಮೆ ಮಾಡುತ್ತದೆ.
 -ದಟ್ಟವಾಗಿ ಮತ್ತು ಕಪ್ಪಾಗಿ ಇಡುತ್ತದೆ.
-ತುಳಸಿಯು ತಲೆಹೊಟ್ಟು ನ್ನು ಕಡಿಮೆ ಮಾಡುತ್ತದೆ.
-ಒಣ ನೆತ್ತಿಯನ್ನು ತಡೆಯಲು ತುಳಸಿ ಸಹಾಯ ಮಾಡುತ್ತದೆ.

ತುಳಸಿಯು  ಉತ್ತಮ ದೃಷ್ಠಿಗೆ ಸಹಕಾರಿಯಾಗಿದೆ.
ರಾತ್ರಿಯಿಡೀ  ನೆನೆಸಿದ  ತುಳಸಿ ಎಲೆಗಳ  ನೀರಿನಲ್ಲಿ  ಕಣ್ಣುಗಳನ್ನು ತೊಳೆಯಲು ಬಳಸುವುದರಿಂದ ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.ಕಾಂಜಂಕ್ಟಿವಿಟಿಸ್ ಮತ್ತು  ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News