Vitamin B Veg Foods: ಈ ಆಹಾರಗಳ ಸೇವನೆಯಿಂದಲೂ ವಿಟಮಿನ್ ಬಿ ಕೊರತೆ ನೀಗಿಸಬಹುದು

Vitamin B Veg Foods: ದೇಹದಲ್ಲಿ ವಿಟಮಿನ್ ಬಿ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಮೊಟ್ಟೆ ಮತ್ತು ಮಾಂಸಾಹಾರ ಅತ್ಯುತ್ತಮ ಆಹಾರಗಳು. ಆದಾಗ್ಯೂ, ಕೆಲವು ಸಸ್ಯಾಹಾರಗಳಿಂದಲೂ ಕೂಡ ವಿಟಮಿನ್ ಬಿ ಕೊರತೆಯನ್ನು ನೀಗಿಸಬಹುದು. 

Written by - Yashaswini V | Last Updated : Apr 10, 2023, 12:18 PM IST
  • ಇತರ ಪೋಷಕಾಂಶಗಳಂತೆ ವಿಟಮಿನ್ ಬಿ ಕೂಡ ಬಹಳ ಮುಖ್ಯ.
  • ದೇಹದಲ್ಲಿ ವಿಟಮಿನ್ ಬಿ ಕೊರತೆ ಉಂಟಾದಾಗ ಅದು ದೇಹದಲ್ಲಿ ದೌರ್ಬಲ್ಯ, ಆಯಾಸ, ಆಲಸ್ಯ, ಮೈಕೈ ನೋವಿನಂತಹ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
  • ವಿಟಮಿನ್ ಬಿ ಕೊರತೆಯನ್ನು ನೀಡಿಸಲು ಮೊಟ್ಟೆ, ಮಾಂಸಾಹಾರ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ.
Vitamin B Veg Foods: ಈ ಆಹಾರಗಳ ಸೇವನೆಯಿಂದಲೂ ವಿಟಮಿನ್ ಬಿ ಕೊರತೆ ನೀಗಿಸಬಹುದು  title=

Vegetarian Source Of Vitamin B: ಆರೋಗ್ಯವಂತರಾಗಿರಲು ದೇಹಕ್ಕೆ ಇತರ ಪೋಷಕಾಂಶಗಳಂತೆ ವಿಟಮಿನ್ ಬಿ ಕೂಡ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ ಕೊರತೆ ಉಂಟಾದಾಗ ಅದು ದೇಹದಲ್ಲಿ ದೌರ್ಬಲ್ಯ, ಆಯಾಸ, ಆಲಸ್ಯ, ಮೈಕೈ ನೋವಿನಂತಹ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಟಮಿನ್ ಬಿ ಕೊರತೆಯನ್ನು ನೀಡಿಸಲು ಮೊಟ್ಟೆ, ಮಾಂಸಾಹಾರ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆದರೆ, ಕೆಲವು ಸಸ್ಯಾಹಾರಗಳಿಂದಲೂ ಸಹ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ... 

ವಿಟಮಿನ್ ಬಿ ನೀರಿನಲ್ಲಿ ಕರಗುತ್ತವೆ, ಅಂದರೆ ಅವು ದೇಹದಲ್ಲಿ ಸಂಗ್ರಹವಾಗುವುದಿಲ್ಲ, ಬದಲಿಗೆ ದೇಹದ ಅಂಗಾಂಶಗಳಿಗೆ ಸಾಗಿಸಲ್ಪಡುತ್ತವೆ. ಈ ಜೀವಸತ್ವಗಳು ದೇಹದಲ್ಲಿನ ಅನೇಕ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವಿಟಮಿನ್ ಬಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ, ಹೊಸ ರಕ್ತ ಕಣಗಳನ್ನು ರಚಿಸುವ ಮೂಲಕ ಮತ್ತು ಆರೋಗ್ಯಕರ ಚರ್ಮದ ಕೋಶಗಳು, ಮೆದುಳಿನ ಕೋಶಗಳು ಮತ್ತು ಇತರ ದೇಹದ ಅಂಗಾಂಶಗಳನ್ನು ನಿರ್ವಹಿಸುವ ಮೂಲಕ ಅವು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ.  ವಾಸ್ತವವಾಗಿ ಹಲವು ಸಸ್ಯಾಹಾರಗಳಲ್ಲಿಯೂ ಸಹ ವಿಟಮಿನ್ ಬಿ ಕಂಡು ಬರುತ್ತದೆ. 

ಇದನ್ನೂ ಓದಿ- Black Coffee: ಕಾಫಿ ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್‌ 

ವಿಟಮಿನ್ ಬಿ ಕೊರತೆ ನೀಗಿಸಬಲ್ಲ ಸಸ್ಯಾಹಾರಗಳಿವು: 
ಹಸಿರು ಸೊಪ್ಪು ತರಕಾರಿಗಳು: 

ಹಸಿರು ಸೊಪ್ಪುಗಳು ಅದರಲ್ಲೂ ಮುಖ್ಯವಾಗಿ  ಪಾಲಕ್ ಸೊಪ್ಪು, ಟರ್ನಿಪ್ ಎಲೆಗಳು, ಎಲೆಕೋಸಿನಂತರ ತರಕಾರಿಗಳಲ್ಲಿಯೂ ಕಬ್ಬಿಣದ ಜೊತೆಗೆ, ವಿಟಮಿನ್ ಬಿ ಹೇರಳವಾಗಿ ಇದರಲ್ಲಿ ಕಂಡುಬರುತ್ತದೆ.  

ದ್ವಿದಳ ಧಾನ್ಯಗಳು:
ಕಪ್ಪು ಉದ್ದಿನ ಕಾಳು, ಹಸಿರು ಬಟಾಣಿ, ಕಡಲೆ, ರಾಜ್ಮಾ (ಕಿಡ್ನಿ ಬೀನ್ಸ್) ನಂತಹ  ದ್ವಿದಳ ಧಾನ್ಯಗಳನ್ನು ವಿಟಮಿನ್ ಬಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. 

ಡೈರಿ ಉತ್ಪನ್ನಗಳು : 
ಹಾಲನ್ನು ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಇದು ವಿಟಮಿನ್ ಬಿ ಯ ಉತ್ತಮ ಮೂಲವಾಗಿದೆ. ಹಾಗಾಗಿ ಡೈರಿ ಉತ್ಪನ್ನಗಳಾದ ಪನೀರ್, ಚೀಸ್ ನಂತಹ ಆಹಾರಗಳ ಸೇವನೆಯಿಂದಲೂ ವಿಟಮಿನ್ ಬಿ ಕೊರತೆಯನ್ನು ನೀಗಿಸಬಹುದು. 

ಇದನ್ನೂ ಓದಿ- Uric Acid : ಅಡುಗೆ ಮನೆಯಲ್ಲಿರುವ ಈ ಮಸಾಲೆ ಯೂರಿಕ್ ಆಸಿಡ್‌ ಸಮಸ್ಯೆಗೆ ರಾಮಬಾಣ!

ಸೂರ್ಯಕಾಂತಿ ಬೀಜಗಳು: 
ಸೂರ್ಯಕಾಂತಿ ಬೀಜಗಳನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸೂರ್ಯಕಾಂತಿ ಬೀಜಗಳನ್ನು ಬೇಯಿಸಿಯೂ ತಿನ್ನಬಹುದು, ಇಲ್ಲವೇ ಅಡುಗೆ ಎಣ್ಣೆಯ ರೂಪದಲ್ಲಿಯೂ ಬಳಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News