ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮಲಗುವ ಮುನ್ನ ಈ 2 ಪಾನೀಯಗಳನ್ನು ಸೇವಿಸಿ

Weight lose tips : ತೆಳ್ಳಗಿನ ಮೈ ಮೈಮಾಟವನ್ನು ಎಲ್ಲರೂ ಬಯಸುತ್ತಾರೆ. ರಾತ್ರಿಯಲ್ಲಿ ಎರಡು ರೀತಿಯ ಪಾನೀಯಗಳನ್ನು ಸೇವಿಸಿದರೆ, ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

Written by - Ranjitha R K | Last Updated : Apr 7, 2023, 05:36 PM IST
  • ತೂಕ ಇಳಿಸುವುದು ಸುಲಭದ ಪ್ರಕ್ರಿಯೆಯಲ್ಲ.
  • ಇದಕ್ಕಾಗಿ ಆಹಾರ ಪದ್ದತಿಯನ್ನು ಬದಲಾಯಿಸಬೇಕಾಗುತ್ತದೆ
  • ಈ ತಪ್ಪು ತೂಕ ಹೆಚ್ಚಾಗಲು ಕಾರಣವಾಗುತ್ತದೆ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮಲಗುವ ಮುನ್ನ ಈ 2 ಪಾನೀಯಗಳನ್ನು ಸೇವಿಸಿ title=

ಬೆಂಗಳೂರು : ತೂಕ ಇಳಿಸುವುದು ಸುಲಭದ ಪ್ರಕ್ರಿಯೆಯಲ್ಲ.  ಇದಕ್ಕಾಗಿ ಆಹಾರ ಪದ್ದತಿಯನ್ನು ಬದಲಾಯಿಸುವುದರ ಜೊತೆಗೆ ಕಠಿಣ ವ್ಯಾಯಾಮವನ್ನು ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ಇವೆಲ್ಲವನ್ನೂ ಪ್ರಯತ್ನಿಸಿದರೂ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕಡಿಮೆಯಾಗುವುದಿಲ್ಲ.  ಹೀಗಾದಾಗ ನಾವು ಮಾಡುವ ಪ್ರಯತ್ನದಲ್ಲಿ ಏನೋ ತಪ್ಪು ಮಾಡುತ್ತಿದ್ದೇವೆ ಎನ್ನುವುದನ್ನು ಮನಗಾಣಬೇಕು. ಕೆಲವು ಜನರಿಗೆ ನಾವು ರಾತ್ರಿಯ ಊಟಕ್ಕೆ ಏನು ತಿನ್ನುತ್ತೇವೆ ಎಷ್ಟು ತಿನ್ನುತ್ತೇವೆ ಎನ್ನುವ ಪರಿಜ್ಞಾನವೇ ಇರುವುದಿಲ್ಲ. ಹೌದು ರಾತ್ರಿ ನಾವು ಏನು ತಿನ್ನುತ್ತೇವೆ ಮತ್ತು ಎಷ್ಟು ತಿನ್ನುತ್ತೇವೆ ಎನುವುದು ಕೂಡಾ ತೂಕ ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಬಹಳ ಮುಖ್ಯ. ರಾತ್ರಿಯಲ್ಲಿ ಹೆಚ್ಚಿನ ಕ್ಯಾಲೋರಿ ಊಟವನ್ನು ಸೇವಿಸಿದರೆ, ಹೊಟ್ಟೆಯ ಕೊಬ್ಬು ವೇಗವಾಗಿ ಹೆಚ್ಚಾಗುತ್ತದೆ.

ಈ ತಪ್ಪು ತೂಕ ಹೆಚ್ಚಾಗಲು ಕಾರಣವಾಗುತ್ತದೆ :
ನೀವು ತೂಕ ಇಳಿಸುವ ಬಗ್ಗೆ ಗಂಭೀರವಾಗಿದ್ದರೆ, ರಾತ್ರಿ ಮಲಗುವ 2 ಗಂಟೆಗಳ ಮೊದಲು ರಾತ್ರಿಯ ಊಟವನ್ನು ತೆಗೆದುಕೊಳ್ಳಬೇಕು. ತಿಂದ ತಕ್ಷಣ ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದಲ್ಲದೆ, ನೀವು ಕೆಲವು ತೂಕ ನಷ್ಟ ಪಾನೀಯಗಳನ್ನು ಸೇವಿಸಬೇಕು ಇದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.

ಇದನ್ನೂ ಓದಿ: Cancer-Diabetes, BP ಗಳಂತಹ ಹಲವು ಕಾಯಿಲೆಗಳಿಗೆ ರಾಮಬಾಣ ಈ 'ಹಿಮಾಲಯನ್ ಬೆಳ್ಳುಳ್ಳಿ'!

ತೂಕ ಇಳಿಸಿಕೊಳ್ಳಲು ರಾತ್ರಿಯಲ್ಲಿ ಈ ಪಾನೀಯಗಳನ್ನು ಕುಡಿಯಿರಿ : 
1.ಅರಿಶಿನ ಹಾಲು :

ಅರಿಶಿನ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ ಈ ಮಸಾಲೆಯನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ.  ಮತ್ತೊಂದೆಡೆ, ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಎರಡೂ ಸಂಯೋಜನೆಗಳು ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳ ಸಹಾಯಕವಾಗಿವೆ. ಅದಕ್ಕಾಗಿಯೇ ರಾತ್ರಿ ಮಲಗುವ ಮುನ್ನ ಅರಿಶಿನ  ಹಾಲನ್ನು ಕುಡಿಯಬೇಕು.

2. ಮೆಂತ್ಯ ಚಹಾ :
ಸ್ಲಿಮ್ ಹೊಟ್ಟೆಯನ್ನು ಪಡೆಯಲು ಬಯಸಿದರೆ, ಇಂದಿನಿಂದಲೇ ಪ್ರತಿ ರಾತ್ರಿ ಮೆಂತ್ಯೆ ಚಹಾವನ್ನು ಕುಡಿಯಲು ಪ್ರಾರಂಭಿಸಿ. ರಾತ್ರಿಯಲ್ಲಿ ಬಹಳಷ್ಟು ಆಹಾರವನ್ನು ಸೇವಿಸಿದಾಗ, ಉತ್ತಮ ಜೀರ್ಣಕ್ರಿಯೆಯ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ಮೆಂತ್ಯೆ ಚಹಾವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ  ಹಾಕಿ ನೆನೆಸಿಡಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ ಬಿಸಿ ಮಾಡಿ ಕುಡಿಯಿರಿ.

ಇದನ್ನೂ ಓದಿ: ಬೇವಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee NEWS ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News