Winter Health Tips: ಡಯಾಬಿಟಿಸ್ ನಿಯಂತ್ರಣಕ್ಕೆ ಈ ಗೆಡ್ಡೆ ತರಕಾರಿಗಳು ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ

Winter Diabetes Control Tips: ಚಳಿಗಾಲ ಬಂತೆಂದರೆ ಡಯಾಬಿಟಿಸ್ ರೋಗಿಗಳ ಪರಿಸ್ಥಿತಿ ಹದಗೆಡುತ್ತದೆ. ಹೀಗಿರುವಾಗ ಡಯಾಬಿಟಿಸ್ ರೋಗಿಗಳು ಈ ಋತುವಿನಲ್ಲಿ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಕೆಲ ಗೆಡ್ಡೆ ತರಕಾರಿಗಳನ್ನು ಶಾಮೀಲುಗೊಳಿಸುವುದು ತುಂಬಾ ಮುಖ್ಯ.  

Written by - Nitin Tabib | Last Updated : Dec 5, 2022, 05:22 PM IST
  • ಮತ್ತೊಂದೆಡೆ ಈ ಋತುವಿನಲ್ಲಿ ವಿವಿಧ ರೀತಿಯ ವೈರಸ್ಗಳ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ.
  • ಇದೇ ವೇಳೆ, ಚಳಿಗಾಲದಲ್ಲಿ ಮಧುಮೇಹ ರೋಗಿಗಳ ಸಮಸ್ಯೆಯೂ ಹೆಚ್ಚಾಗುತ್ತದೆ.
  • ಅದಕ್ಕಾಗಿಯೇ ಈ ಋತುವಿನಲ್ಲಿ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು
Winter Health Tips: ಡಯಾಬಿಟಿಸ್ ನಿಯಂತ್ರಣಕ್ಕೆ ಈ ಗೆಡ್ಡೆ ತರಕಾರಿಗಳು ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ title=
Winter Diabetes Tips

Winter Diabetes Tips: ಪ್ರಸ್ತುತ ಚಳಿಗಾಲದ ಋತು ಆರಂಭಗೊಂಡಿದೆ. ಈ ಋತುವಿನಲ್ಲಿ, ನೀವು ನಿಮ್ಮ ಬಗ್ಗೆ ವಿಶೇಷ ಗಮನ ಹರಿಸಬೇಕು. ಮತ್ತೊಂದೆಡೆ ಈ ಋತುವಿನಲ್ಲಿ ವಿವಿಧ ರೀತಿಯ ವೈರಸ್ಗಳ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಇದೇ ವೇಳೆ, ಚಳಿಗಾಲದಲ್ಲಿ ಮಧುಮೇಹ ರೋಗಿಗಳ ಸಮಸ್ಯೆಯೂ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಈ ಋತುವಿನಲ್ಲಿ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಕೆಲವು ಗೆಡ್ಡೆ ತರಕಾರಿಗಳನ್ನು ಶಾಮೀಲುಗೊಳಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೌದು, ಚಳಿಗಾಲದಲ್ಲಿ ಇಂತಹ ಹಲವು ತರಕಾರಿಗಳು ಮಾರುಕಟ್ಟೆಗೆ ಬರುತ್ತವೆ ಮತ್ತು ಅವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿವೆ, ಮಧುಮೇಹ ರೋಗಿಗಳು ಯಾವ ಗೆಡ್ಡೆ ತರಕಾರಿಗಳನ್ನು ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಮಧುಮೇಹಿಗಳು ಈ ಗೆಡ್ಡೆ ತರಕಾರಿಗಳನ್ನು ಸೇವಿಸಬೇಕು
ನವಿಲುಕೋಸು

ಟರ್ನಿಪ್ ಒಂದು ರೀತಿಯ ಇದರಲ್ಲಿ ಕಾರ್ಬ್ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ.ಇದರ ಜೊತೆಗೆ, ಇದು ಸಾಕಷ್ಟು ನೀರಿನಿಂದ ಕೂಡಿದೆ. ಇದರಿಂದಾಗಿ ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ, ಆದ್ದರಿಂದ ನೀವು ಮಧುಮೇಹ ರೋಗಿಗಳಾಗಿದ್ದರೆ, ಖಂಡಿತವಾಗಿಯೂ ಟರ್ನಿಪ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

ಬೀಟ್ರೂಟ್
ಮಧುಮೇಹ ರೋಗಿಗಳಿಗೆ ಬೀಟ್ರೂಟ್ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿ ಬೆಟಾಲೈನ್ ಮತ್ತು ನಿಯೋ ಬೆಟಾನಿನ್ ಇದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕ್ಯಾರೆಟ್
ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಸಿಗುವ ಮತ್ತೊಂದು ಗೆಡ್ಡೆ ತರಕಾರಿ ಎಂದರೆ ಅದುವೇ ಕ್ಯಾರೆಟ್. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಕಂಡುಬರುತ್ತವೆ. ಇದನ್ನು ತರಕಾರಿ, ಸಲಾಡ್ ಮತ್ತು ಜ್ಯೂಸ್ ರೂಪದಲ್ಲಿ ಸೇವಿಸಬಹುದು.

ಇದನ್ನೂ ಓದಿ-Tea To Reduce Cholesterol: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ ಚಹಾ ಒಮ್ಮೆ ಟ್ರೈ ಮಾಡಿ ನೋಡಿ

ಮೂಲಂಗಿ
ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುವ ಅಂತಹ ಹಲವಾರು ಗುಣಗಳು ಮೂಲಂಗಿಯಲ್ಲಿ ಕಂಡುಬರುತ್ತವೆ. ಹೀಗಾಗಿ ನೀವೂ ಕೂಡ ಮಧುಮೇಹ ರೋಗಿಗಳಾಗಿದ್ದರೆ, ನೀವು ಪ್ರತಿದಿನ ಮೂಲಂಗಿಯನ್ನು ಸೇವಿಸಬಹುದು.

ಇದನ್ನೂ ಓದಿ-High BP: ಚಳಿಗಾಲದಲ್ಲಿ ಕಡಲೆಕಾಯಿ ತಿನ್ನುವುದು ನಿಮಗೂ ಇಷ್ಟವೇ.. ಹಾಗಾದ್ರೆ ಮೊದಲು ಈ ಲೇಖನ ಓದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News