ನವದೆಹಲಿ: ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಮಾನವನ ದೇಹದಲ್ಲಿನ ಮೊಳೆಯು ಸವೆಯಬಹುದೆಂದು ವೈಜ್ಞಾನಿಕ ಸಂಶೋಧನಾ ವರದಿಯೊಂದು ತಿಳಿಸಿದೆ.
ಈ ವಿಷಯವಾಗಿ ಸಂಶೋಧನೆಯನ್ನು ಕೈಗೊಂಡ ಕೊಲಂಬಿಯಾ ವಿವಿಯ ಮೇಲ್ಮನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಸಂಶೋಧಕರಾಗಿರುವ ಆಂಡ್ರೆಯಾ ಬ್ಯಾಕರೆಲಿಯ ಮಾನವನ ದೇಹದಲ್ಲಿ PM2.5 ರಷ್ಟು ಕಣಗಳ ಹೆಚ್ಚಳದಿಂದಾಗಿ ಇತ್ತೀಚಿಗೆ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಒಳಪಡುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳಗೊಂಡಿದೆ ಎಂದು ತಿಳಿಸಿದ್ದಾರೆ.
"ದಶಕಗಳ ಸಂಶೋಧನೆಯ ದಾಖಲೆಯ ಪ್ರತಿಫಲವಾಗಿ ವಾಯುಮಾಲಿನ್ಯ ಉಸಿರಾಟಕ್ಕೆ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್, ಶ್ರವಣ ದೋಷ ಮುಂತಾದ ಕಾಯಿಲೆಗಳು ವಾಯುಮಾಲಿನ್ಯದಿಂದ ಉಂಟಾಗುತ್ತಿದೆ ಎಂಬ ವಿಷಯ ತಿಳಿದುಬಂದಿದೆ ಎಂದು ಬ್ಯಾಕೆರೆಲಿಯವರು ತಿಳಿಸಿದ್ದಾರೆ.
2003-2010 ರ ನಡುವೆ ಆಸ್ಟಿಯೊಪೊರೋಸಿಸ್-ಖಾಯಿಲೆಗೆ ಸಂಬಂಧಿಸಿದಂತೆ 9.2 ದಶಲಕ್ಷ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು PM2.5 ಸಾಂದ್ರತೆಗಳಲ್ಲಿ ಸಣ್ಣ ಹೆಚ್ಚಳ ಕೂಡ ವಯಸ್ಕರಲ್ಲಿ ಮೂಳೆಯ ಮುರಿತಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.
ವಾಹನ ಹೊರಸೂಸುವಿಕೆಯ ಹೊಗೆಯಿಂದ ವಾಯು ಮಾಲಿನ್ಯದ ಒಂದು ಅಂಶವು ಕಡಿಮೆ ಮಟ್ಟದ ಪ್ಯಾರಾಥೈರಾಯ್ಡ್ ಹಾರ್ಮೋನ್ ಮತ್ತು ಮೂಳೆ ಖನಿಜಾಂಶದ ಸಾಂದ್ರತೆಯು ಹೆಚ್ಚಾಗುವುದಕ್ಕೆ ಕಾರಣ. ಸತತ 8 ವರ್ಷಗಳಲ್ಲಿ 692 ಮಧ್ಯ ವಯಸ್ಕರಲ್ಲಿ PM2.5 ಮತ್ತು ಕಪ್ಪು ಕಾರ್ಬನ್ಗಳ ಕಂಡು ಬಂದಿದೆ ಎಂದು ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಇದಲ್ಲದೆ ಧೂಮಪಾನದಂತಹ ಕ್ರಿಯೆಗಳಿಂದಾಗಿಯೂ ಕೂಡಾ ಮೂಳೆ ಸವೆತ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.