10th Board Exam 2021: ದೇಶಾದ್ಯಂತ 8 ರಾಜ್ಯಗಳಲ್ಲಿ 10ನೇ ತರಗತಿ ಬೋರ್ಡ್ ರದ್ದು

ದೇಶಾದ್ಯಂತ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ, ದೇಶದ 8 ರಾಜ್ಯಗಳಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Written by - Yashaswini V | Last Updated : May 20, 2021, 01:44 PM IST
  • ದೇಶದ 8 ರಾಜ್ಯಗಳಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ
  • ದೇಶಾದ್ಯಂತ ಯಾವ ಯಾವ ರಾಜ್ಯಗಳಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಗೊಂಡಿದೆ
  • ಯಾವ ಆಧಾರದ ಮೇಲೆ ಮಕ್ಕಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುತ್ತದೆ ಎಂದು ತಿಳಿಯಿರಿ
10th Board Exam 2021: ದೇಶಾದ್ಯಂತ 8 ರಾಜ್ಯಗಳಲ್ಲಿ 10ನೇ ತರಗತಿ ಬೋರ್ಡ್ ರದ್ದು  title=
10th Board Exam 2021

ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೇಶದ 8 ರಾಜ್ಯಗಳಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. 

ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ರದ್ದುಗೊಂಡ 10 ನೇ ತರಗತಿ ಬೋರ್ಡ್ ಪರೀಕ್ಷೆಯ (10th Board Exam 2021) ಫಲಿತಾಂಶವನ್ನೂ ಘೋಷಿಸಲಾಗಿದೆ. ರದ್ದಾದ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸಿದ ಮೊದಲ ರಾಜ್ಯ ಇದಾಗಿದೆ.

ದೇಶಾದ್ಯಂತ ಯಾವ ಯಾವ ರಾಜ್ಯಗಳಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಗೊಂಡಿದೆ ಮತ್ತು ಯಾವ ಆಧಾರದ ಮೇಲೆ ಮಕ್ಕಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುತ್ತದೆ ಎಂದು ತಿಳಿಯಿರಿ...

1. ಮಧ್ಯಪ್ರದೇಶ:
ಮಧ್ಯಪ್ರದೇಶದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ವರ್ಷ 10ನೇ ತರಗತಿಗೆ ಪರೀಕ್ಷೆ ಇರುವುದಿಲ್ಲ, ಮೌಲ್ಯಮಾಪನದ ಆಧಾರದ ಮೇಲೆ ಮಾರ್ಕ್‌ಶೀಟ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಯಾವ ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನದಿಂದ ತೃಪ್ತರಾಗುವುದಿಲ್ಲವೋ ಅಂತಹವರಿಗೆ ಕರೋನಾ ನಂತರ ಪರೀಕ್ಷೆಯಲ್ಲಿ ಹಾಜರಾಗಲು ಅವರಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ - White Fungus: ಬ್ಲಾಕ್ ಫಂಗಸ್ ಬಳಿಕ ವೈಟ್ ಫಂಗಸ್, ಅದು ದೇಹದ ಮೇಲೆ ಹೇಗೆ ದಾಳಿ ಮಾಡುತ್ತೆ ಗೊತ್ತಾ

2. ತಮಿಳುನಾಡು:
2021 ರ ಫೆಬ್ರವರಿಯಲ್ಲಿಯೇ ತಮಿಳುನಾಡು ರಾಜ್ಯವು 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಮೊದಲು ರದ್ದುಗೊಳಿಸಿತು. ರಾಜ್ಯದಲ್ಲಿ 10ನೇ ತರಗತಿಯೊಂದಿಗೆ 9 ಮತ್ತು 11 ನೇ ತರಗತಿಯ ಪರೀಕ್ಷೆಗಳನ್ನೂ ರದ್ದುಪಡಿಸಲಾಗಿದೆ. ಇಲ್ಲಿ, ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

3. ತೆಲಂಗಾಣ :
ಕರೋನಾ ಪ್ರಕರಣಗಳಿಂದಾಗಿ ತೆಲಂಗಾಣದಲ್ಲೂ 10 ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳನ್ನು ವಸ್ತುನಿಷ್ಠ (ಸರಿಯಾದ ಆಯ್ಕೆ) ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಇದರ ನಂತರ ಅವರನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು.

4. ಜಮ್ಮು ಮತ್ತು ಕಾಶ್ಮೀರ :
ಜಮ್ಮು ಮತ್ತು ಕಾಶ್ಮೀರದಲ್ಲೂ ಶಾಲಾ ಶಿಕ್ಷಣ ಮಂಡಳಿ 10 ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿದೆ. ಇಲ್ಲಿಯೂ, ಪೂರ್ವ ಮಂಡಳಿಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಿ ಮುಂದಿನ ತರಗತಿಯಲ್ಲಿ ಬಡ್ತಿ ನೀಡಲಾಗುವುದು ಎನ್ನಲಾಗಿದೆ.

5. ಮಹಾರಾಷ್ಟ್ರ :
ಕರೋನಾ ಸಾಂಕ್ರಾಮಿಕದ ಅತ್ಯಂತ ಅಪಾಯಕಾರಿ ರೂಪ ಮಹಾರಾಷ್ಟ್ರ (Maharashtra) ದಲ್ಲಿಯೇ ಕಂಡುಬಂದಿದೆ. ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವ ವರ್ಷಾ ಗೈಕ್ವಾಡ್ ಈ ವಿಷಯವನ್ನು ಪ್ರಕಟಿಸಿದರು.

ಇದನ್ನೂ ಓದಿ - face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..

6. ಉತ್ತರಾಖಂಡ :
ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ ಉತ್ತರಾಖಂಡ 10 ನೇ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಶಾಲೆ ಮತ್ತು ಸಂಸ್ಕೃತ ಶಿಕ್ಷಣ ಸಚಿವ ಅರವಿಂದ್ ಪಾಂಡೆ, 10 ನೇ ಪರೀಕ್ಷೆಯಲ್ಲಿ ಹಾಜರಾಗಲು ಬಯಸುವ ವಿದ್ಯಾರ್ಥಿಗಳು, ನಂತರ ನೀವು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳೊಂದಿಗೆ ಹಾಜರಾಗಬಹುದು ಎಂದಿದ್ದಾರೆ.

7. ಹರಿಯಾಣ :
ಹರಿಯಾಣದಲ್ಲಿ ಕರೋನದ ಕಾರಣ 10 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ 10 ನೇ ತರಗತಿಯ ವಿದ್ಯಾರ್ಥಿಗಳು ಉತ್ತೀರ್ಣ ಮಾಡಲಾಗುವುದು ಎಂದು ಹೇಳಲಾಗಿದೆ.

8. ಪಂಜಾಬ್:
ಕರೋನಾ ಪ್ರಕರಣಗಳಿಂದಾಗಿ ಪಂಜಾಬ್ ಸರ್ಕಾರ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಈಗ 10 ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ವ ಮಂಡಳಿಯ ಪರೀಕ್ಷೆಯಲ್ಲಿ ಪಡೆದ ಅಂಕಿಗಳ ಆಧಾರದ ಮೇಲೆ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News