ಫೋನಿ ಚಂಡಮಾರುತದಿಂದ ಒಡಿಶಾದಲ್ಲಿ 12000 ಕೋಟಿ ರೂ. ನಷ್ಟ

ರಾಜ್ಯದಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಮತ್ತು ಪುನರ್ನಿರ್ಮಾಣಕ್ಕಾಗಿ  ಎನ್ ಆರ್ ಐ ಮತ್ತು ಸಾಗರೋತ್ತರ ಭಾರತೀಯರು ದೇಣಿಗೆ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

Updated: May 21, 2019 , 03:40 PM IST
ಫೋನಿ ಚಂಡಮಾರುತದಿಂದ ಒಡಿಶಾದಲ್ಲಿ 12000 ಕೋಟಿ ರೂ. ನಷ್ಟ
File Image

ಭುವನೇಶ್ವರ್: ಕಳೆದ ತಿಂಗಳು ಒಡಿಶಾದಲ್ಲಿ ಉಂಟಾದ ಫೋನಿ ಚಂಡಮಾರುತದಿಂದಾಗಿ ಅಂದಾಜು 12,000 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಮತ್ತು ಪುನರ್ನಿರ್ಮಾಣಕ್ಕಾಗಿ  ಎನ್ ಆರ್ ಐ ಮತ್ತು ಸಾಗರೋತ್ತರ ಭಾರತೀಯರು ದೇಣಿಗೆ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಯಾವುದೇ ವಂಚನೆ ಅಥವಾ ಮೋಸಕ್ಕೆ ಗುರಿಯಾಗದೆ ಸರ್ಕಾರ ಅಂಗೀಕರಿಸಿರುವ ಡಿಜಿಟಲ್ ಪಾವತಿ ಪ್ಲ್ಯಾಟ್ಫಾರ್ಮ್ಗಳಲ್ಲಿ ಮತ್ತು ಅಧಿಕೃತ ವೆಬ್ಸೈಟ್ಗಳ ಮೂಲಕ ದಯವಿಟ್ಟು CMRF ಗೆ ಕೊಡುಗೆ ನೀಡಿ ಎಂದು ಒಡಿಶಾ ಸರ್ಕಾರ ವಿನಂತಿಸಿದೆ.

ಒಡಿಶಾದ ಫೋನಿ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲಿಸಲು ಮೇ 6ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಬಳಿಕ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿ, ಒಡಿಶಾಗೆ 1,000 ಕೋಟಿ ರೂ. ಹೆಚ್ಚುವರಿ ಸಹಾಯಧನವನ್ನು ಘೋಷಿಸಿದ್ದರು.