2002ರ ಗೋದ್ರಾ ಹತ್ಯಾಕಾಂಡ ತೀರ್ಪು ಪ್ರಕಟ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಹೆಚ್.ಸಿ. ವೋರಾ ಅವರು, ಫಾರೂಕ್ ಭಾನಾ ಮತ್ತು ಇಮ್ರಾನ್ ಶೆರು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

Last Updated : Aug 27, 2018, 05:00 PM IST
2002ರ ಗೋದ್ರಾ ಹತ್ಯಾಕಾಂಡ ತೀರ್ಪು ಪ್ರಕಟ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ title=

ಅಹಮದಾಬಾದ್: 2002ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ಎಸ್ಐಟಿ ನ್ಯಾಯಾಲಯ, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. 

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಹೆಚ್.ಸಿ. ವೋರಾ ಅವರು, ಫಾರೂಕ್ ಭಾನಾ ಮತ್ತು ಇಮ್ರಾನ್ ಶೆರು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಇತರೆ ಮೂವರು ಆರೋಪಿಗಳಾಗಿದ್ದ ಹುಸೇನ್ ಸುಲೇಮಾನ್ ಮೋಹನ್, ಕಸಮ್ ಭಮೇದಿ ಹಾಗೂ ಫರೂಕ್ ಧಾಂಟಿಯಾ ಅವರುಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಾರೆ. 

2002ರಲ್ಲಿ ಸಾಬರ್ ಮತಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ 59 ಮಂದಿ ಕರಸೇವಕರು ಇದ್ದ ಎರಡು ಬೋಗಿಗಳಿಗೆ ಗೋಧ್ರಾದಲ್ಲಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 1,000 ಕ್ಕಿಂತ ಹೆಚ್ಚಿನ ಜನರು ಕೊಲ್ಲಲ್ಪಟ್ಟಿದ್ದರು. ಈ ಪ್ರಕರಣ ಸಂಬಂಧ 2015-2016ರಲ್ಲಿ ಈ ಐವರನ್ನು ಬಂಧಿಸಿ ಸಾಬರ್ಮತಿ ಸೆಂಟ್ರಲ್ ಜೈಲಿನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಉಳಿದಂತೆ ಈ ಪ್ರಕರಣದ ಇನ್ನೂ 8 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಹಿಂದೆ ಮಾರ್ಚ್ 1, 2011 ರಂದು ವಿಶೇಷ ಎಸ್ಐಟಿ ನ್ಯಾಯಾಲಯವು 31 ಜನರನ್ನು ದೋಷಿ ಎಂದು ತೀರ್ಮಾನಿಸಿತ್ತು. ನಂತರ 11 ಮಂದಿಗೆ ಮರಣದಂಡನೆ ವಿಧಿಸಿತು ಮತ್ತು 20 ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Trending News