LPG ಸಿಲಿಂಡರ್ ಗೆ ಸಂಬಂಧಿಸಿದ ಈ 5 ಲಾಭಗಳು ನಿಮಗೂ ತಿಳಿದಿರಲಿ

ಇಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆಯುವುದು ಬಹಳ ಸುಲಭವಾಗಿದೆ. ಇದರ ಜೊತೆಗೆ ಅನೇಕ ಪ್ರಯೋಜನೆಗಳನ್ನು ಸಹ ಸರ್ಕಾರ ಒದಗಿಸಿದೆ. ಆದರೂ ಕೂಡ ಬಹುತೇಕ ಜನರಿಗೆ ಈ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಪ್ರಮುಖ 5 ಪ್ರಯೋಜನಗಳ ಬಗ್ಗೆ ತಿಳಿಯೋಣ.

Last Updated : Jan 15, 2020, 01:36 PM IST
LPG ಸಿಲಿಂಡರ್ ಗೆ ಸಂಬಂಧಿಸಿದ ಈ 5 ಲಾಭಗಳು ನಿಮಗೂ ತಿಳಿದಿರಲಿ title=

ಇಂದು ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ. ಅಡುಗೆ ಅನಿಲದ ಸಿಲಿಂಡರ್ ಹಿಡಿದು ಇತರೆ ಕೆಲಸಗಳಿಗೆ ಉಪಯೋಗಿಸಲ್ಪಡುವ LPG ಸಿಲಿಂಡರ್ಗಳನ್ನು ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ಕೇಂದ್ರ ಸರ್ಕಾರ ಕೂಡ ತನ್ನ ಉಜ್ವಲಾ ಯೋಜನೆಯಡಿ ಈ ಮೊದಲು ಒಲೆಯಲ್ಲಿ ಅಡುಗೆ ಮಾಡುವ ಮನೆಗಳಿಗೂ ಕೂಡ ಇಂದು ಅಡುಗೆ ಅನಿಲ್ ಸಿಲಿಂಡರ್ ತಲುಪಿಸುವ ಕೆಲಸ ಮಾಡಿದೆ. ಅಷ್ಟೇ ಅಲ್ಲ ಇಂದು ನೀವು ಸಿಲಿಂಡರ್ ಗಳನ್ನು ಆನ್ಲೈನ್ ನಲ್ಲಿ ಬುಕ್ ಮಾಡಿ ಆನ್ಲೈನ್ ನಲ್ಲಿ ಹಣ ಕೂಡ ಪಾವತಿಸಬಹುದು. ಸಿಲಿಂಡರ್ ಪಡೆಯಲು ಈ ಮೊದಲು ಇದ್ದ ನಿಯಮಗಳಲ್ಲಿಯೂ ಕೂಡ ಸರ್ಕಾರ ಸರಳತೆ ತಂದಿದೆ. ಇಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆಯುವುದು ಬಹಳ ಸುಲಭವಾಗಿದೆ. ಇದರ ಜೊತೆಗೆ ಅನೇಕ ಪ್ರಯೋಜನೆಗಳನ್ನು ಸಹ ಸರ್ಕಾರ ಒದಗಿಸಿದೆ. ಆದರೂ ಸಹ ಬಹುತೇಕ ಜನರಿಗೆ ಈ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಪ್ರಮುಖ 5 ಪ್ರಯೋಜನಗಳ ಬಗ್ಗೆ ತಿಳಿಯೋಣ.

ಮೊದಲನೆಯ ಲಾಭ
ನೀವು ಬಳಸುವ ಸಿಲಿಂಡರ್ ಗಳಲ್ಲಿ ನಿಮ್ಮ ಲಾಭ ಅಡಗಿದೆ. ಆದರೆ, ಅಡುಗೆ ಅನಿಲ ಸಿಲಿಂಡರ್ ವಿತರಕರು ತಮ್ಮ ಗ್ರಾಹಕರಿಗೆ ಈ ಲಾಭಗಳನ್ನು ಹೇಳಿಕೊಡುವುದಿಲ್ಲ. ಸಿಲಿಂಡರ್ ಖರೀದಿಸುವ ವೇಳೆ ಅದಕ್ಕೆ ಇನ್ಸುರೆನ್ಸ್ ಇರುತ್ತದೆ. 50 ಲಕ್ಷ ರೂ.ವರೆಗೆ ಇನ್ಸುರೆನ್ಸ್ ಇರುವ ಮಾಹಿತಿ ಬಹುತೇಕರಿಗೆ ತಿಳಿದಿಲ್ಲ. ಸಿಲಿಂಡರ್ ಎಕ್ಸ್ಪೈರಿ ಜೊತೆ ಈ ಇನ್ಸುರೆನ್ಸ್ ನೇರ ಸಂಬಂಧ ಹೊಂದಿರುತ್ತದೆ. ಸಿಲಿಂಡರ್ ನ ಎಕ್ಸ್ಪೈರಿ ತಿಳಿಯದೆ ಬಹುತೇಕರು ಸಿಲಿಂಡರ್ ಖರೀದಿಸುತ್ತಾರೆ. ಹೀಗಾಗಿ ಇನ್ಮುಂದೆ ಸಿಲಿಂಡರ್ ಖರೀದಿಸುವ ವೇಳೆ ಇದರ ಬಗ್ಗೆ ಗಮನಹರಿಸಿ.

ಎರಡನೇ ಲಾಭ
ನೀವು ಅಡುಗೆ ಅನಿಲ ಸಿಲಿಂಡರ್ ಖರೀದಿಸಿದಾಗ ನಿಮಗೆ 10 ರಿಂದ 25ಲಕ್ಷ ರೂ.ವರೆಗೆ ದುರ್ಘಟನೆ ವಿಮೆಗೆ ಅರ್ಹರಾಗುತ್ತೀರಿ. ಇದರ ಅಡಿ ಒಂದು ವೇಳೆ ಯಾವುದೇ ದುರ್ಘಟನೆ ಸಂಭವಿಸಿದರೆ ಸಂತ್ರಸ್ತರು ಇನ್ಸುರೆನ್ಸ್ ಕ್ಲೇಮ್ ಮಾಡಬಹುದು. ಅಷ್ಟೇ ಅಲ್ಲ ಸಾಮೂಹಿಕ ದುರ್ಘಟನೆ ಸಭವಿಸಿದ ಸಂದರ್ಭದಲ್ಲಿ 50 ಲಕ್ಷ ರೂ.ನೀಡುವ ವ್ಯವಸ್ಥೆ ಇದೆ.

ಹೀಗೆ ಎಕ್ಸ್ಪೈರಿ ದಿನಾಂಕ ಕಂಡು ಹಿಡಿಯಿರಿ
ಸಿಲಿಂಡರ್ ನ ಪಟ್ಟಿಯ ಮೇಲೆ A B C D ಅಕ್ಷರಗಳಲ್ಲಿ ಒಂದು ಅಕ್ಷರದ ಜೊತೆಗೆ ಒಂದು ನಂಬರ್ ಕೂಡ ಇರುತ್ತದೆ. ಅನಿಲ ಕಂಪನಿಗಳು 12 ತಿಂಗಳ ಅವಧಿಯನ್ನು ಒಟ್ಟು ನಾಲ್ಕು ಭಾಗಗಳಲ್ಲಿ ವಿಂಗಡಣೆ ಮಾಡಿ ಸಿಲಿಂಡರ್ ಗಳ ಗ್ರೂಪ್ ಮಾಡುತ್ತವೆ. A ಗ್ರೂಪ್-ಜನವರಿ, ಫೆಬ್ರವರಿ, ಮಾರ್ಚ್ ತಿಂಗಳುಗಳನ್ನು ಒಳಗೊಂಡಿದ್ದರೆ, B ಗ್ರೂಪ್-ಏಪ್ರಿಲ್, ಮೇ, ಜೂನ್, C ಗ್ರೂಪ್-ಜುಲೈ, ಆಗಸ್ಟ್, ಸೆಪ್ಟೆಂಬರ್, D ಗ್ರೂಪ್-ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳನ್ನು ಒಳಗೊಂಡಿರುತ್ತವೆ. ಸಿಲಿಂಡರ್ ಪಟ್ಟಿಯ ಮೇಲೆ ಗ್ರೂಪ್ ನ ಒಂದು ಅಕ್ಷರದ ಜೊತೆಗೆ ಒಂದು ನಂಬರ್ ಇರುತ್ತದೆ. ಉದಾಹರಣೆಗಾಗಿ B-12 ಅಂದರೆ ಸಿಲಿಂಡರ್ ನ ಎಕ್ಸ್ಪೈರಿ ದಿನಾಂಕ ಜೂನ್ 2012 ಎಂದರ್ಥ.

ನೀವು ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿಗೆ ಗ್ಯಾಸ್ ಕನೆಕ್ಷನ್ ಟ್ರಾನ್ಸ್ಫರ್ ಮಾಡಬಹುದು.
ನಿಮ್ಮ ಕುಟುಂಬದ ಯಾವುದೇ ಸದಸ್ಯನ ಹೆಸರಿಗೆ ಗ್ಯಾಸ್ ಕನೆಕ್ಷನ್ ಟ್ರಾನ್ಸ್ಫರ್ ಮಾಡಲು ನೀವು ಪ್ರಮಾಣ ಪತ್ರ ಸಲ್ಲಿಸಬೇಕು. ಇಬ್ಬರೂ ವ್ಯಕ್ತಿಗಳು ಒಂದೇ ಪ್ರಮಾಣ ಪತ್ರವನ್ನು ಭರ್ತಿ ಮಾಡಬೇಕು. ಜೊತೆಗೆ NOC ಕೂಡ ಸಲಿಸಬೇಕು. ವರ್ತಮಾನದಲ್ಲಿ ಇರುವ ಹಣ ಹಾಗೂ ಸೆಕ್ಯೂರಿಟಿ ಡಿಪಾಸಿಟ್ ಸಂದಾಯ ಮಾಡಿ ಟ್ರಾನ್ಸ್ಫರ್ ಮಾಡಬೇಕು.

ಆನ್ಲೈನ್ ಮೂಲಕ ಕೂಡ ಗ್ಯಾಸ್ ಕನೆಕ್ಷನ್ ಪಡೆಯಬಹುದು
MYLPG.IN ಗೆ ಭೇಟಿ ನೀಡಿ, ಆನ್ಲೈನ್ ಮೂಲಕವೂ ನೀವು ಗ್ಯಾಸ್ ಕನೆಕ್ಷನ್ ಪಡೆಯಬಹುದಾಗಿದೆ. ವೆಬ್ಸೈಟ್ ನ 'ಸಹಜ್' ಪೋರ್ಟಲ್ ಗೆ ಭೇಟಿ ನೀಡಿ, ಅಲ್ಲಿರುವ 'ಆನ್ಲೈನ್ ಕನೆಕ್ಷನ್' ಮೇಲೆ ಕ್ಲಿಕ್ಕಿಸಿ ಅಲ್ಲಿ ಕೇಳಲಾದ ವಿವರಗಳನ್ನು ನೀಡಿ ಗ್ಯಾಸ್ ಕನೆಕ್ಷನ್ ಪಡೆಯಬಹುದು. 

ಗ್ಯಾಸ್ ಸಬ್ಸಿಡಿ ಪಡೆಯಲೂ ಸಹ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು
ಮೊದಲು https://rasf.uidai.gov.in/seeding/User/ResidentSplash.aspx ಮೇಲೆ ಕ್ಲಿಕ್ಕಿಸಿದಾಗ ನಿಮಗೆ ಆಧಾರ್ ಕಾರ್ಡ್ ವೆಬ್ಸೈಟ್ ತೆರೆದುಕೊಳ್ಳಲಿದೆ. ಅದರಲ್ಲಿ ಸ್ಟಾರ್ಟ್ ನೌ ಗುಂಡಿಯನ್ನು ಕ್ಲಿಕ್ಕಿಸಿ. ಇದರಲ್ಲಿ ನಿಮ್ಮ ವಿವರಗಳನ್ನು ಕೇಳಲಾಗುತ್ತದೆ. ವಿವರಗಳನ್ನು ಭರ್ತಿ ಮಾಡಿ. ನಂತರ ನೀವು ಯಾವ ಲಾಭಕ್ಕಾಗಿ ನಿಮ್ಮ ಆಧಾರ್ ಲಿಂಕ್ ಮಾಡುತ್ತಿರುವಿರಿ ಎಂಬುದರ ಕುರಿತು ಒಂದು ಆಪ್ಶನ್ ನಿಮಗೆ ಸಿಗಲಿದೆ. ಅಲ್ಲಿ ಕಂಪನಿಯ ಹೆಸರು ನಮೂದಿಸಿ. ನಂತರ ನಿಮ್ಮ ಡಿಸ್ಟ್ರಿಬ್ಯೂಟರ್, ಕನ್ಸುಮರ್ ನಂಬರ್ ಭರ್ತಿ ಮಾಡಿ, ಇ-ಮೇಲ್ ಐಡಿ, ಅಧಿಕೃತ ಮೊಬೈಲ್ ನಂಬರ್ ಹಾಗೂ ಆಧಾರ ನಂಬರ್ ಸಲ್ಲಿಸಿ, ಸಬ್ಸಿಡಿ ಪಡೆಯಬಹುದಾಗಿದೆ.

Trending News