3 ತಿಂಗಳುಗಳ ಬಳಿಕ ಒಂಟಿಯಾಗಿ ವಿಮಾನ ಪ್ರವಾಸ ಮಾಡಿ ತಾಯಿ ಒಡಲು ಸೇರಿದ 5 ವರ್ಷದ ಹಸುಳೆ

ಐದು ವರ್ಷದ ವಿಹಾನ್ ಶರ್ಮಾ ತನ್ನ ತಾಯಿಯನ್ನು ಭೇಟಿಯಾಗಲು ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾನೆ.

Updated: May 25, 2020 , 07:08 PM IST
3 ತಿಂಗಳುಗಳ ಬಳಿಕ ಒಂಟಿಯಾಗಿ ವಿಮಾನ ಪ್ರವಾಸ ಮಾಡಿ ತಾಯಿ ಒಡಲು ಸೇರಿದ 5 ವರ್ಷದ ಹಸುಳೆ

ನವದೆಹಲಿ: ಎರಡು ತಿಂಗಳುಗಳ ಸುದೀರ್ಘ ಅವಧಿಯ ಬಳಿಕ ಸೋಮವಾರ ಬೆಳಗ್ಗೆ ದೇಶೀಯ ನಾಗರಿಕ ವಿಮಾನಯಾನ ಸೇವೆ ಪುನರಾರಂಭಗೊಂಡಿದೆ. ಇಂತಹುದೇ ಒಂದು ವಿಮಾನದಲ್ಲಿ ಐದು ವರ್ಷದ ಮುಗ್ಧ ವಿಹಾನ್ ಶರ್ಮಾ ತನ್ನ ತಾಯಿಯನ್ನು ಭೇಟಿಯಾಗಲು ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾನೆ. ವಿಹಾನ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳುಗಳ ಅವಧಿಯ ನಂತರ 'ವಿಶೇಷ ವರ್ಗ'ದಲ್ಲಿ ಟಿಕೆಟ್ ಪಡೆದುಕೊಂಡು ತಾಯಿಯನ್ನು ಭೇಟಿಯಾಗಿದ್ದಾನೆ. ಬಳಿಕ ಮಾತನಾಡಿರುವ ವಿಹಾನ್ ತಾಯಿ, "ನನ್ನ ಐದು ವರ್ಷದ ಮಗ ವಿಹಾನ್ ದೆಹಲಿಯಿಂದ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದು, ಆತ ಮೂರು ತಿಂಗಳುಗಳ ಬಳಿಕ ಬೆಂಗಳೂರಿಗೆ ಬಂದಿದ್ದಾನೆ" ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು 'ವೆಲ್ಕಂ ಹೋಮ್, ವಿಹಾನ್!(ಶರ್ಮಾ) ಬೆಂಗಳೂರು ವಿಮಾನ ನಿಲ್ದಾಣ ತನ್ನ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹಿಂದಿರುಗುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ: ಎಂದು ಹೇಳಿದ್ದಾರೆ. ಹಳದಿ ಬಣ್ಣದ ಜ್ಯಾಕೆಟ್ ಹಾಗೂ ಮಾಸ್ಕ್ ಧರಿಸಿ ವಿಹಾನ್ ಶರ್ಮಾ ಏರ್ಪೋರ್ಟ್ ನಲ್ಲಿ ನಿಂತಿದ್ದಾನೆ. ಅವನು ಕೈಯಲ್ಲಿ ಹಿಡಿದ ಪ್ಲೇಕಾರ್ಡ್ ಮೇಲೆ 'ವಿಶೇಷ ಶ್ರೇಣಿ' ಎಂದು ಬರೆಯಲಾಗಿತ್ತು. ವಿಹಾನ್ ನನ್ನು ಸ್ವಾಗತಿಸಲು ಅವನ ತಾಯಿ ಮಂಜೀಶ್ ಶರ್ಮಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೂರು ತಿಂಗಳುಗಳ ಬಳಿಕ ತನ್ನ ಪುತ್ರ ವಿಹಾನ್ ನನ್ನು ನೋಡಿ ಮಂಜೀಶ್ ಶರ್ಮಾ ತುಂಬಾ ಭಾವುಕರಾಗಿದ್ದರು. ಬಳಿಕ ಇಬ್ಬರು ಖುಷಿ-ಖುಷಿಯಾಗಿ ಮನೆಗೆ ರವಾನೆಯಾಗಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ವಿಹಾನ್ ದೆಹಲಿಯಲ್ಲಿ ತನ್ನ ಅಜ್ಜ-ಅಜ್ಜಿಯ ಬಳಿ ವಾಸಿಸುತ್ತಿದ್ದ.

ಕೊರೊನಾ ವೈರಸ್ ಮಹಾಮಾರಿಯನ್ನು ತಡೆಗಟ್ಟುವ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್ ನ ಎರಡು ತಿಂಗಳುಗಳ ಬಳಿಕ ಭಾರತದಲ್ಲಿ ಸೋಮವಾರ ದೇಶೀಯ ಯಾತ್ರಿ ವಿಮಾನಯಾನ ಸೇವೆ ಮತ್ತೆ ಆರಂಭಗೊಂಡಿದೆ. ಹಲವಾರು ಆತಂಕಕಾರಿ ಕ್ಷಣಗಳ ಬಳಿಕ ನಾಗರಿಕ ವಿಮಾನಯಾನ ಸೇವೆ ಪುನಾರಂಭಗೊಂಡಿವೆ. ಇದಕ್ಕೂ ಮೊದಲು ಕೊವಿಡ್ 19 ಪ್ರಕೋಪದ ಹಿನ್ನೆಲೆ ಎಲ್ಲ ನಾಗರಿಕ ವಿಮಾನಯಾನ ಸೇವೆಗಳನ್ನು ಮಾರ್ಚ್ ಕೊನೆಯ ವಾರದಲ್ಲಿ ಸ್ಥಗಿತಗೊಳಿಸಲಾಗಿತ್ತು. ವಿಮಾನಯಾನ ಸೇವೆ ಆರಂಭಗೊಳ್ಳುತ್ತಲೇ ತಕ್ಷಣ ಇಂಡಿಗೋ ಸೋಮವಾರ ತನ್ನ ದೆಹಲಿ-ಪುಣೆ ಸೇವೆಯನ್ನು ಆರಂಭಿಸಿದೆ.

ಕೊರೊನಾ ಮಹಾಮಾರಿಯಿಂದ ಅತಿ ಹೆಚ್ಚು ಪ್ರಭಾವಿತಕ್ಕೆ ಒಳಗಾದ ಮಹಾರಾಷ್ಟ್ರದ ಸರ್ಕಾರ ಕೊವಿಡ್ ಮಹಾಮಾರಿ ಹಿನ್ನೆಲೆ ಭಾನುವಾರ ಹಲವು ನಿಬಂಧನೆಗಳ ಮೂಲಕ ವಿಮಾನಯಾನ ಸೇವೆಗೆ ಅನುಮತಿ ನೀಡಿತ್ತು. ಇದಾದ ಬಳಿಕ ಒಳಬರುವ ಮತ್ತು ಹೊರಹೋಗುವ ಫ್ಲೈಟ್ಸ್ ಗಳನ್ನು ಕೇವಲ ಹಗಲಿನಲ್ಲಿ ಮಾತ್ರ ಸೀಮಿತಗೊಳಿಸಲಾಗಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್, ರಾಜ್ಯ ಸರ್ಕಾರ ಹಾಗೂ ಇತರೆ ಏಜೆನ್ಸಿಗಳ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಫ್ಲೈಟ್ಸ್ ನ ಪ್ರಯಾಣಿಕರನ್ನು ನಿಭಾಯಿಸಲು ಕೊವಿಡ್-19 ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಸಂಪೂರ್ಣವಾಗಿ ಅನುಸರಿಸಲಾತ್ತಿದೆ.

ಈ ಕುರಿತು ಭಾನುವಾರ ಸಂಜೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದ ನಾಗರಿಕ ವಿಮಾನಯಾನ ಸಚಿವರು, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಇರುವ ಇತರೆ ರಾಜ್ಯಗಳಿಗೆ ಸೋಮವಾರದಿಂದ ದೇಶೀಯ ನಾಗರಿಕ ವಿಮಾನಯಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಹೇಳಿದ್ದರು. ಆಂಧ್ರಪ್ರದೇಶದಲ್ಲಿ ಮಂಗಳವಾರ ವಿಮಾನಯಾನ ಸೇವೆ ಆರಂಭಗೊಳ್ಳುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಗುರುವಾರದಿಂದ ಈ ಸೇವೆ ಆರಂಭವಾಗುತ್ತಿದೆ.