Viral News: ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿಗಳು ಬಲಿ..!

ಮದುಮಗನ ಮೆರವಣಿಗೆಯ ವೇಳೆ ಜೋರಾಗಿ ಬಂದ ಡಿಜೆ ಸೌಂಡ್ ಗೆ 63 ಬ್ರಾಯ್ಲರ್ ಕೋಳಿಗಳಿಗೆ ಹೃದಯಾಘಾತವುಂಟಾಗಿ ಸಾವನ್ನಪ್ಪಿವೆ.

Written by - Puttaraj K Alur | Last Updated : Nov 27, 2021, 12:31 PM IST
  • ಅಬ್ಬರದ ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿಗಳು ಸಾವನ್ನಪ್ಪಿವೆ
  • ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ವಿಲಕ್ಷಣ ಘಟನೆ ವರದಿಯಾಗಿದೆ
  • ನಷ್ಟ ಭರಿಸಿಕೊಡುವಂತೆ ಮದುಮಗನ ಸಂಬಂಧಿಕರ ವಿರುದ್ಧ ಕೋಳಿ ಮಾಲೀಕನ ದೂರು
Viral News: ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿಗಳು ಬಲಿ..!

ಬಾಲಸೋರ್: ಇದು ಮದುವೆಯ ಸೀಸನ್. ಭಾರತದಲ್ಲಿ ಆಡಂಬರದ ಮದುವೆ(Wedding)ಗಳು ಕಮ್ಮಿ ಏನೂ ಇಲ್ಲ. ಭರ್ಜರಿ ಖರ್ಚು ಮಾಡಿ ಮದುವೆ ಮಾಡುವುದು ಭಾರತದಲ್ಲಿ ಪ್ರತಿಷ್ಠೆಯ ಸಂಕೇತವಾಗಿದೆ. ಸಂಗೀತ ಮತ್ತು ನೃತ್ಯವಿಲ್ಲದೆ ಮದುವೆಗಳು ಅಪೂರ್ಣವಾಗುತ್ತವೆ. ಜೋರಾದ ಸಂಗೀತವು ಮದುವೆಯ ಅತಿಥಿಗಳಿಗೆ ಸಖತ್ ಮನರಂಜನೆ ನೀಡಿದರೆ ಇತರರಿಗೆ ಭಾರೀ ಹಿಂಸೆಯಾಗುತ್ತದೆ. ಇದೇ ರೀತಿಯ ಒಂದು ವಿಲಕ್ಷಣ ಘಟನೆ ಒಡಿಶಾದಲ್ಲಿ ನಡೆದಿದೆ. ಮದುವೆ ಮನೆಯ ಶಬ್ಧ ಮಾಲಿನ್ಯ(Noise Pollution)ದ ದುಷ್ಪರಿಣಾಮಕ್ಕೆ ಹಲವಾರು ಕೋಳಿಗಳೇ ಪ್ರಾಣಬಿಟ್ಟಿವೆ.

ಹೌದು, ಇದು ಅಚ್ಚರಿಯಾದರೂ ನಿಜವಾಗಿ ನಡೆದಿರುವ ಘಟನೆ. ಮದುವೆ ಮೆರವಣಿಗೆಯಲ್ಲಿನ ಡಿಜೆ ಸೌಂಡ್ಸ್ ಅಬ್ಬರದ ಹೊಡೆತಕ್ಕೆ ಹೃದಯಾಘಾತ(Chickens Heart Attack)ವಾಗಿ ಬರೋಬ್ಬರಿ 63 ಕೋಳಿಗಳು ಸಾವನ್ನಪ್ಪಿವೆ. ಒಡಿಶಾದ ಬಾಲಸೋರ್(Balasore) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಮ್ಮ ಗ್ರಾಮದಲ್ಲಿ ನಡೆದ ಮದುಮಗನ ಮೆರವಣಿಗೆಯ ವೇಳೆ ಜೋರಾಗಿ ಬಂದ ಡಿಜೆ ಸೌಂಡ್ ಗೆ ಬೆದರಿದ ತಮ್ಮ 63 ಬ್ರಾಯ್ಲರ್ ಕೋಳಿಗಳಿಗೆ ಹೃದಯಾಘಾತವುಂಟಾಗಿ ಸಾವನ್ನಪ್ಪಿವೆ ಎಂದು ಕೋಳಿ ಫಾರಂನ ಮಾಲೀಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ರೈಲು ಡಿಕ್ಕಿ ಹೊಡೆದು ಹಳಿ ದಾಟುತ್ತಿದ್ದ ಹೆಣ್ಣಾನೆ, ಮರಿಗಳ ದಾರುಣ ಸಾವು

ವರದಿಗಳ ಪ್ರಕಾರ ರಾತ್ರಿ 11 ಗಂಟೆಯ ಸುಮಾರಿಗೆ ಬಾಲಸೋರ್ ನ ಮೈತಾಪುರ ಗ್ರಾಮಕ್ಕೆ ಮದುಮಗನ ಮೆರವಣಿಗೆಯು ಬಂದಿತ್ತು ಎಂದು ಕೋಳಿ ಸಾಕಣೆದಾರ ಹೇಳಿದ್ದಾರೆ. ಈ ವೇಳೆ ಜೋರಾಗಿ ಡಿಜೆ ಸೌಂಡ್(DJ Music) ಹಾಕಿ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದರು. ಜೋರಾದ ಸಂಗೀತ ಎಷ್ಟರಮಟ್ಟಿಗೆ ಇತ್ತೆಂದರೆ ಅದರ ವಿಪರಿತ ಸೌಂಡ್ ಗೆ ನನ್ನ ಜಮೀನಿನಲ್ಲಿರುವ ಫಾರಂನಲ್ಲಿನ ಕೋಳಿಗಳು ಹೌಹಾರಿ ಹೋಗಿವೆ. ನಿರಂತರವಾಗಿ ಡಿಜೆ ಸೌಂಡ್ ಮತ್ತು ಪಟಾಕಿ ಶಬ್ಧವು ಜೋರಾಗಿ ಬಂದ ಪರಿಣಾಮ ಕೋಳಿಗಳಿಗೆ ಹೃದಯಾಘಾತವುಂಟಾಗಿದೆ. ಹೀಗೆ ಒಟ್ಟು 63 ಕೋಳಿಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.  

‘ನನ್ನ ಫಾರಂನಲ್ಲಿ ಒಟ್ಟು 2000 ಬಾಯ್ಲರ್ ಕೋಳಿಗಳನ್ನು ಸಾಕುತ್ತಿದ್ದೇನೆ. ವಿಪರಿತ ಡಿಜೆ ಸೌಂಡ್ ಇದ್ದ ಕಾರಣ ನಾನೇ ಖುದ್ದಾಗಿ ತೆರಳಿ ಶಬ್ದವನ್ನು ಕಡಿಮೆ ಮಾಡುವಂತೆ ವಿನಂತಿಸಿಕೊಂಡಿದ್ದೆ. ಆದರೆ ಅಲ್ಲಿದ್ದವರೂ ಯಾರೂ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಮದುವೆ ಮೆರವಣಿಗೆಯ ವೇಳೆ ಅನೇಕರು ಮದ್ಯದ ಅಮಲಿನಲ್ಲಿದ್ದರು. ಸೌಂಡ್ (Loud DJ Music)ಕಡಿಮೆ ಮಾಡುವಂತೆ ಕೇಳಿದರೆ ಎಲ್ಲರೂ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದರು. ಸೌಂಡ್ ಗೆ ಹೆದರಿದ ಕೋಳಿಗಳು ಭಯದಿಂದ ಅತ್ತಿತ್ತ ಓಡಾಡಲು ಶುರು ಮಾಡಿದವು. ಬಳಿಕ 63 ಕೋಳಿಗಳು ಸಾವನ್ನಪ್ಪಿವೆ’ ಅಂತಾ ಹೇಳಿದ್ದಾರೆ.  

ಇದನ್ನೂ ಓದಿ: ಓಲಾ-ಉಬರ್ ಮೂಲಕ ಆಟೋ ಬುಕ್ ಮಾಡುತ್ತೀರಾ?: 5% GST ಪಾವತಿಸಲು ಸಿದ್ಧರಾಗಿ..!

ಡಿಜೆ ಸೌಂಡ್ ಗೆ ಹೆದರಿ ಕೋಳಿಗಳು(Chickens) ಸಾವನ್ನಪ್ಪಿದ್ದಕ್ಕೆ ಸೂಕ್ತ ಪರಿಹಾರ ನೀಡುವಂತೆ ಕೋಳಿಗಳ ಮಾಲೀಕರು ಕೇಳಿಕೊಂಡಿದ್ದಾರೆ. ಆದರೆ ಈ ಆರೋಪ ನಿರಾಧಾರ, ಡಿಜೆ ಸೌಂಡ್ ಗೆ ಕೋಳಿ ಸಾವನ್ನಪ್ಪಿಲ್ಲ. ನಾವು ಇದರ ನಷ್ಟ ಭರಿಸಲು ಸಾಧ್ಯವಿಲ್ಲವೆಂದು ಮದುಮಗನ ಸಂಬಂಧಿಕರು ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News