68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ..!

Harish Salve wedding: ಹರೀಶ್ ಸಾಳ್ವೆಯವರು 1982ರಲ್ಲಿ ಮೀನಾಕ್ಷಿ ಎಂಬುವರನ್ನು ಮದುವೆಯಾಗಿದ್ದರು. ಆದರೆ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್‌ ಬ್ರೊಸಾರ್ಡ್‌ ಜೊತೆಗೆ ಸಪ್ತಪದಿ ತುಳಿದಿದ್ದರು.

Written by - Puttaraj K Alur | Last Updated : Sep 4, 2023, 09:13 PM IST
  • 68ನೇ ವಯಸ್ಸಿನಲ್ಲಿ ಸಪ್ತಪದಿ ತುಳಿದ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್‌ ಸಾಳ್ವೆ
  • ಹರೀಶ್ ಸಾಳ್ವೆ 68ನೇ ವಯಸ್ಸಿನಲ್ಲಿ 3ನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ
  • ವಿವಾಹ ಕಾರ್ಯಕ್ರಮಕ್ಕೆ ಹಾಜರಾಗಿ ನವಜೋಡಿಗೆ ಶುಭ ಹಾರೈಸಿದ ಲಲಿತ್ ಮೋದಿ
68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ..! title=
68ನೇ ವಯಸ್ಸಿನಲ್ಲಿ 3ನೇ ಮದುವೆ!

ನವದೆಹಲಿ: ತಮ್ಮ 68ನೇ ವಯಸ್ಸಿನಲ್ಲಿ ಸಪ್ತಪದಿ ತುಳಿಯುವ ಮೂಲಕ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಾಗೂ ಖ್ಯಾತ ವಕೀಲ ಹರೀಶ್‌ ಸಾಳ್ವೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಮೂಲಕ ಸಾಳ್ವೆ 68ನೇ ವಯಸ್ಸಲ್ಲಿ 3ನೇ ಮದುವೆಯಾಗಿದ್ದಾರೆ.

ಟ್ರಿನಾ ಎಂಬುವರ ಜೊತೆ ಹರೀಶ್‌ ಸಾಳ್ವೆ ಲಂಡನ್‌ನಲ್ಲಿ ಮದುವೆ ಆಗಿದ್ದಾರೆ. ಈ ವಿವಾಹ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ, ಗೋಪಿ ಹಿಂದುಜಾ & ಉಜ್ವಲ್‌ ರಾವತ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವಿಶೇಷವೆಂದರೆ ಭಾರತದಿಂದ ಎಸ್ಕೇಪ್ ಆಗಿರುವ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಸಹ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದು, ನವಜೋಡಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: "ನಾನಿದ್ದರೆ ಬಿಜೆಪಿ ನಾಯಕರಿಗೆ ಆಂತಕ ಎದುರಾಗಲಿದೆ"-ಉಮಾಭಾರತಿ

ಸೋಷಿಯಲ್ ಮೀಡಿಯಾದಲ್ಲಿ ಹರೀಶ್‌ ಸಾಳ್ವೆಯವರ ಮದುವೆಯ ವಿಡಿಯೋ ಹಾಗೂ ಫೋಟೋಗಳು ಸಖತ್ ಸೌಂಡ್ ಮಾಡುತ್ತಿವೆ. ಹರೀಶ್ ಸಾಳ್ವೆಯವರು 1982ರಲ್ಲಿ ಮೀನಾಕ್ಷಿ ಎಂಬುವರನ್ನು ಮದುವೆಯಾಗಿದ್ದರು. ಆದರೆ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್‌ ಬ್ರೊಸಾರ್ಡ್‌ ಜೊತೆಗೆ ಸಪ್ತಪದಿ ತುಳಿದಿದ್ದರು.

ಇದೀಗ ಸಾಳ್ವೆ ಮತ್ತೊಮ್ಮೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಕುಲಭೂಷಣ್‌ ಜಾಧವ್‌ ಪ್ರಕರಣ ಸೇರಿ ಹಲವು ಉನ್ನತ ಮಟ್ಟದ ಕೇಸ್‌ಗಳಲ್ಲಿ ಸಾಳ್ವೆ ವಕೀಲರಾಗಿದ್ದರು. ಜಾಧವ್‌ ಪ್ರಕರಣದಲ್ಲಿ ಕೇವಲ 1 ರೂ. ಶುಲ್ಕ ಹಣ ಪಡೆದು ಸುದ್ದಿಯಾಗಿದ್ದರು. 2015ರಲ್ಲಿ ಸಾಳ್ವೆಯವರು ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಆತ್ಮಹತ್ಯೆಗೆ ಶರಣಾದ ನೀಟ್ ಪರೀಕ್ಷಾ ಆಕಾಂಕ್ಷಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಜಸ್ಥಾನದಲ್ಲಿ ಆತ್ಮಹತ್ಯೆಗೆ ಶರಣಾದ ನೀಟ್ ಪರೀಕ್ಷಾ ಆಕಾಂಕ್ಷಿ

Trending News