'ಆಗಸ್ಟ್ 2019ರಿಂದೀಚೆಗೆ ಒಟ್ಟು 84 ಒಳನುಸುಳುವಿಕೆಯ ಪ್ರಯತ್ನಗಳು ನಡೆದಿವೆ'

ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ಆಗಸ್ಟ್ 2019 ರಿಂದ ಇದುವರೆಗೆ 84 ಬಾರಿ ಪಾಕ್ ಮೂಲಕದ ಭಯೋತ್ಪಾದಕರು ಅಕ್ರಮವಾಗಿ ಭಾರತದ ಗಡಿ ನುಸುಳಲು ಯತ್ನಿಸಿದ್ದು, ಒಟ್ಟು 59 ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿದ್ದಾರೆ .

Last Updated : Dec 10, 2019, 02:41 PM IST
'ಆಗಸ್ಟ್ 2019ರಿಂದೀಚೆಗೆ ಒಟ್ಟು 84 ಒಳನುಸುಳುವಿಕೆಯ ಪ್ರಯತ್ನಗಳು ನಡೆದಿವೆ' title=

ನವದೆಹಲಿ: ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ಆಗಸ್ಟ್ 2019 ರಿಂದ ಇದುವರೆಗೆ 84 ಬಾರಿ ಪಾಕ್ ಮೂಲಕದ ಭಯೋತ್ಪಾದಕರು ಅಕ್ರಮವಾಗಿ ಭಾರತದ ಗಡಿ ನುಸುಳಲು ಯತ್ನಿಸಿದ್ದು, ಒಟ್ಟು 59 ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿದ್ದಾರೆ ಎಂದಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಶ್ರೀಧರ್ ಕೊಟಗಿರಿ ಅವರು ಕೇಳಿದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಈ ವಿಷಯ ತಿಳಿಸಿದ್ದಾರೆ. 1990 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 22,557 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.  2005 ರಿಂದ ಅಕ್ಟೋಬರ್ 31, 2019ರ ಅವಧಿಯಲ್ಲಿ ಒಟ್ಟು 1,011 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದ್ದು, 42 ಭಯೋತ್ಪಾದಕರನ್ನು ಬಂಧಿಸಲಾಗಿದೆ ಹಾಗೂ 2253 ಭಯೋತ್ಪಾದಕರನ್ನು ಭದ್ರತಾಪಡೆ ಯೋಧರು ಹಿಮ್ಮೆಟ್ಟಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

"ಎಂಎಚ್‌ಎ ವರದಿಯ ಪ್ರಕಾರ, ಒಳನುಸುಳುವಿಕೆ ಪ್ರಯತ್ನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಹೆಚ್ಚಿಸುವ ಮತ್ತು ಅಲ್ಲಿನ ಸಮಸ್ಯೆಗಳನ್ನು ಅಂತರರಾಷ್ಟ್ರೀಕರಿಸುವ ಉದ್ದೇಶವನ್ನು ಹೊಂದಿದ್ದು ಕಣಿವೆಯ ಪ್ರಾಕ್ಸಿ ಯುದ್ಧ ಸಾರುವ ಪ್ರಯತ್ನವಾಗಿವೆ. ಪಟ್ಟುಹಿಡಿದ
ಪ್ರಬಲ ಕಾರ್ಯಾಚರಣೆಗಳು, ಹೊಂಚು ಹಾಕುವಿಕೆ ಹಾಗೂ ಗಸ್ತು ನಡೆಸುವ ಮೂಲಕ  ಒಳನುಸುಳುವಿಕೆ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಾಗುತ್ತದೆ. ಜೊತೆಗೆ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ಪ್ರತಿ -ಒಳನುಸುಳುವಿಕೆ ಗ್ರಿಡ್ ಗಳು ಜಾರಿಯಲ್ಲಿವೆ" ಎಂದು ಸಚಿವರು
ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಆಗಸ್ಟ್ 5, 2019ರಂದು ಆರ್ಟಿಕಲ್ 370 ಅನ್ನು ತೆಗೆದು ಹಾಕಿದ ಬಳಿಕ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಸ್ಥಿತಿ  ಸಾಮಾನ್ಯವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ಸ್ಥಿತಿಯನ್ನು ಸಾಮಾನ್ಯಗೊಳಿಸುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಟಾಂಗ್ ನೀಡಿರುವ ಗೃಹ ಸಚಿವರು, ಕಾಂಗ್ರೆಸ್ ಆರ್ಟಿಕಲ್ 370 ಅನ್ನು ತೆಗೆದು ಹಾಕಿದ ಬಳಿಕ ಕಣಿವೆಯಲ್ಲಿ ರಕ್ತಪಾತ ನಿರೀಕ್ಷಿಸಿತ್ತು ಎಂದಿದ್ದಾರೆ. ಆದರೆ ಇದುವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಮತ್ತು ಒಂದು ಗುಂಡಿನ ಸದ್ದು ಕೂಡ ಕೇಳಿಬಂದಿಲ್ಲ ಎಂದಿದ್ದಾರೆ. "ಶೇ. 99.5ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ, ಆದರೆ, ಇದು ಅಧಿರ್ ರಂಜನ್ ಅವರ ಪಾಲಿಗೆ ಸಾಮಾನ್ಯವಾಗಿಲ್ಲ. 7 ಲಕ್ಷ ಜನರಿಗೆ OPD ಸೇವೆ ತಲುಪಿದ್ದು, ಎಲ್ಲ ಪ್ರದೇಶಗಳಿಂದ ಸೆಕ್ಷನ್ 144 ತೆಗೆದು ಹಾಕಲಾಗಿದೆ. ಆದರೆ, ಅಧಿರ್ ರಂಜನ್ ಚೌಧರಿ ಪಾಲಿಗೆ ಮಾತ್ರ ಇದು ಸಾಮಾನ್ಯವಲ್ಲ ಎಂದು ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

Trending News