ವಿಶ್ವದ ಅತಿ ದೊಡ್ಡ ಶಿಶು ಹೃದಯ ಚಿಕಿತ್ಸಾ ಸಮೂಹ ಆಸ್ಪತ್ರೆಗಳ ಸ್ಥಾಪನೆ

Global Healthcare : ಸದ್ಗುರು ಶ್ರೀ ಮಧುಸೂದನ್ ಸಾಯಿ ವಿಶ್ವಮಟ್ಟದಲ್ಲಿ ತಮ್ಮ ಸೇವೆ ಮತ್ತು ಆಧ್ಯಾತ್ಮಿಕ ಚಿಂತನೆರಿಂದ ಜಗತ್ತಿನ ಹಲವಾರು ದೇಶಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಯನ್ನು ಸಲ್ಲಿಸುವಲ್ಲಿ ತೊಡಗಿದ್ದಾರೆ.

Written by - Zee Kannada News Desk | Last Updated : Jun 22, 2024, 06:59 PM IST
  • ಕಳೆದ ಹತ್ತು ವರ್ಷಗಳಿಂದ ಶ್ರೀಮಧುಸೂದನ್ ಸಾಯಿ ಅವರು ಈ ಕಾರ್ಯದಲ್ಲಿ ತೊಡಗಿದ್ದಾರೆ.
  • ಜಗತ್ತಿನ ಮೊದಲ ಉಚಿತ ವೈದ್ಯಕೀಯ ಕಾಲೇಜನ್ನು ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳಿಸಲಾಯಿತು.
  • ಇಲ್ಲಿಯವರೆಗೆ ಸುಮಾರು 30 ಸಾವಿರ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ.
 ವಿಶ್ವದ ಅತಿ ದೊಡ್ಡ ಶಿಶು ಹೃದಯ ಚಿಕಿತ್ಸಾ ಸಮೂಹ ಆಸ್ಪತ್ರೆಗಳ ಸ್ಥಾಪನೆ title=

ಶ್ರೀ ಮಧುಸೂದನ್ ಸಾಯಿ ಉತ್ತಮ ಸಮಾಜಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಮುಂದಾಗಿದ್ದು, ಸದ್ಯ ವಿಶ್ವದ ಅತಿ ದೊಡ್ಡ ಶಿಶು ಹೃದಯ ಚಿಕಿತ್ಸಾ ಸಮೂಹ ಆಸ್ಪತ್ರೆಗಳ ಸ್ಥಾಪನೆ ಮಾಡಿದ್ದಾರೆ. 

ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ ಹಾಗೂ ಪೌಷ್ಟಿಕತೆಯ ದೃಷ್ಟಿಯಿಂದ ಉತ್ತಮ ಸಮಾಜ ನಿರ್ಮಾಣವಾಗಬೇಕು ಹಾಗೂ ಶಿಶು ಪೌಷ್ಟಿಕತೆ, ಮಾನವ ಅಭಿವೃದ್ಧಿ ಕೇಂದ್ರಗಳು ಹೀಗೆ ತಮ್ಮ ಸೇವೆ ಮತ್ತು ಆಧ್ಯಾತ್ಮಿಕ ಚಟುವಟಿಕೆ ಮೂಲಕ ಇಲ್ಲಿಯವರೆಗೆ 11 ದೇಶಗಳಲ್ಲಿ 12 ಮಾನದ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯನ್ನು ಮಾಡಿದ್ದಾರೆ. 

ಇದನ್ನು ಓದಿ : ಸಂಭಾವನೆಯಲ್ಲಿ ಸ್ಟಾರ್ ಹೀರೋಗಳನ್ನು ಸೋಲಿಸಿದ ಸಾಯಿ ಪಲ್ಲವಿ... ಆ ಸಿನಿಮಾಕ್ಕೆ ಬರೋಬ್ಬರಿ 50 ಕೋಟಿ?  

ಉತ್ತಮ ಸಮಾಜ ಸೇವಕರನ್ನು ಬೆಳೆಸುವ ಉದ್ದೇಶದೊಂದಿಗೆ ಸಂಪೂರ್ಣ ಉಚಿತ ಮೌಲ್ಯಾದಾರಿತ ಶಿಕ್ಷಣ ಪದ್ಧತಿಯನ್ನು ಪ್ರಾರಂಭಿಸಿದರು. 1973 ರಿಂದ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. 2018ರಲ್ಲಿ ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯ, ಸೆಪ್ಟೆಂಬರ್ 2023ರಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, 
 ಹೀಗೆ ಭಾರತದಲ್ಲಿ ಒಟ್ಟು 28 ವಿದ್ಯಾ ಸಂಸ್ಥೆಗಳು ನೈಜೀರಿಯಾದಲ್ಲಿ ಒಂದು ಸಂಸ್ಥೆ ಮತ್ತು ಕರ್ನಾಟಕದಲ್ಲಿ 20 ಜಿಲ್ಲೆಗಳಲ್ಲಿ ಹಾಗೂ ಹೊರ ಜಿಲ್ಲೆಗಳಾದ ತಲಂಗಾಣ ಮತ್ತು ತಮಿಳುನಾಡಿನ 1 ಜಿಲ್ಲೆಗಳಲ್ಲಿ ಸ್ಥಾಪಿಸಿದ್ದಾರೆ. 6ನೇ ತರಗತಿಯಿಂದ ಪಿ ಎಚ್ ಡಿಯವರಿಗೆ ಒಟ್ಟುb3654 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಸಂಪೂರ್ಣ ಉಚಿತವಾಗಿ ವೈದ್ಯಕೀಯವನ್ನು ವ್ಯಾಸಂಗ ಮಾಡುತ್ತಿದ್ದಾರೆ . 

ಇದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲಿ 9, ಫಿಜಿ ದೀಪದಲ್ಲಿ 1 ಹಾಗೂ ಶ್ರೀಲಂಕಾದಲ್ಲಿ 1 ಸೇರಿ ವಿಶ್ವದಾದ್ಯಂತ ಒಟ್ಟು 11 ಶಿಶು ಹೃದಯ ಹಾಗೂ ಮಾತೇ ಶಿಶು ಆಸ್ಪತ್ರೆಗಳನ್ನು ಹೊಂದಿದ್ದಾರೆ. ಒಟ್ಟು 4 ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳು, ಅಮೆರಿಕಾದ ಕ್ಲಾರ್ಕ್ ಡೇಲ್ ನಲ್ಲಿ ಆರೋಗ್ಯ ಕೇಂದ್ರ, ಭಾರತದಲ್ಲಿ 17 ಪ್ರಾಥಮಿಕ ಆರೋಗ್ಯ ಕೇಂದ್ರ, ಪೂರ್ವ ಭಾರತದಲ್ಲಿ ಸಂಚಾರಿ ವೈದ್ಯಕೀಯ ಸೇವೆ, ಇದರ ಜೊತೆಗೆ ಭಾರತದ ಮೊಟ್ಟ ಮೊದಲ ಸಂಪೂರ್ಣ ಉಚಿತ ಬೋಧಕ ಆಸ್ಪತ್ರೆಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ ಸುಮಾರು 30 ಸಾವಿರ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ. 

ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರ ಟ್ರಸ್ಟ್ ಅಡಿಯಲ್ಲಿ 25 ಮಾರ್ಚ್ 2023ರಲ್ಲಿ ಜಗತ್ತಿನ ಮೊದಲ ಉಚಿತ ವೈದ್ಯಕೀಯ ಕಾಲೇಜನ್ನು ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳಿಸಲಾಯಿತು. 

ಇದನ್ನು ಓದಿ : ಅನ್ನ ಬೇಯುವಾಗ ಇದನ್ನು ಬೆರೆಸಿ: ಯಾವ ಪಥ್ಯವೂ ಇಲ್ಲದೆ ಬ್ಲಡ್ ಶುಗರ್’ನ್ನು ಸಂಪೂರ್ಣ ಕಂಟ್ರೋಲ್ ಮಾಡಬಹುದು

ಕಳೆದ ಹತ್ತು ವರ್ಷಗಳಿಂದ ಶ್ರೀಮಧುಸೂದನ್ ಸಾಯಿ ಅವರು  ಈ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಜೊತೆಗೆ ಕ್ರೀಡಾ ದಿಗ್ಗಜರುಗಳಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಸ್ಕರ್ ಹಾಗೂ ಯುವರಾಜ್ ಸಿಂಗ್ ಸೇರಿದಂತೆ ಹಲವರು ಇವರಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಇದರ ಉನ್ನತ ಕಾರ್ಯಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರಿಗೆ 2024ರ ಸುಶ್ರುತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News